ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾ ಮಟ್ಟದ ನ್ಯಾಷನಲ್ ನಾರ್ಕೋಟಿಕ್ಸ್ ಕೋ ಆರ್ಡಿನೇಷನ್ ಪೋರ್ಟಲ್ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್‌ಬAಡಾರು ಇತರರು ಇದ್ದರು.
- ಜಿಲ್ಲೆಯಲ್ಲಿ ಡ್ರಗ್ಸ್ ಹಾವಳಿಗೆ ಅಽಕಾರಿಗಳ ಆತಂಕ
- ನಿಯಂತ್ರಣಕ್ಕೆ ಸಮನ್ವಯತೆ ಕಾರ್ಯಾಚರಣೆಗೆ ನಿರ್ದೇಶನ
- ಮಾದಕ ವ್ಯಸನ
ಚಿತ್ರದುರ್ಗ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸೇವನೆ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಜಿಲ್ಲಾಽಕಾರಿ ಟಿ. ವೆಂಕಟೇಶ್ ಕಳವಳ ವ್ಯಕ್ತಪ ಡಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ನ್ಯಾಷನಲ್ ನಾರ್ಕೋಟಿಕ್ಸ್ ಕೋ ಆರ್ಡಿನೇಷನ್ ಪೋರ್ಟಲ್ ಸಭೆಯಲ್ಲಿ ಮಾತ ನಾಡಿ, ಮಾದಕ ವಸ್ತುಗಳ ಹಾವಳಿ ತಡೆ, ಅಕ್ರಮ ಚಟುವಟಿಕೆಗಳ ಮೇಲಿನ ನಿಗಾಕ್ಕೆ ಪೊಲೀಸ್, ಅಬಕಾರಿ, ಅರಣ್ಯ, ಕೃಷಿ, ತೋಟಗಾರಿಕೆ ಸೇರಿ ಶಾಲಾ, ಕಾಲೇಜುಗಳ ಮುಖ್ಯಸ್ಥರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಹೆಚ್ಚಿರುವುದು ಆತಂಕಕಾರಿಯಾಗಿದೆ. ಈ ಕುರಿತು ಹೆಚ್ಚಿನ ನಿಗಾ ಅಗತ್ಯವಿದೆ.
ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಿದೆ. ಮದ್ಯದ ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡದಂತೆ ಎಚ್ಚರಿಕೆ -Àಲಕಗಳನ್ನು ಹಾಕಿಸುವುದರ ಜತೆಗೆ ನಿರಂತರ ತಪಾಸಣೆ ನಡೆಸುವಂತೆ ಅಬಕಾರಿ ಇಲಾಖೆ ಅಽಕಾರಿಗಳಿಗೆ ಸೂಚಿಸಿದರು.
ಆಂಧ್ರಪ್ರದೇಶದ ೧೫೦ ಕಿ.ಮೀ ಗಡಿಯನ್ನು ನಮ್ಮ ಜಿಲ್ಲೆ ಹಂಚಿಕೊAಡಿದೆ. ಈ ಭಾಗದ ಸಣ್ಣಪುಟ್ಟ ಕಾಲುದಾರಿಗಳ ಮೂಲಕ ಅಕ್ರ ಮ ಸೇಂದಿ ಮತ್ತು ಮಾದಕ ವಸ್ತುಗಳು ಸಾಗಣೆ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಜಂಟಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಿ ಕಾರ್ಯಾಚರಣೆ ನಡೆಸಬೇಕು.
ವೈದ್ಯಕೀಯ ಉದ್ದೇಶಕ್ಕೆ ಬಳಸುವ ಔಷಧಗಳ ದುರುಪಯೋಗ ತಡೆಗೆ ಮೆಡಿಕಲ್ ಕಾಲೇಜುಗಳು ಮತ್ತು ಮೆಡಿಕಲ್ ಶಾಪ್‌ಗಳ ಮೇಲೆ ನಿಗಾ ಇಡಬೇಕು. ಅವಽ ಮುಗಿದ ಔಷಧಗಳ ವಿಲೇಗೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಔಷಧ ನಿಯಂತ್ರಕರಿಗೆ ಡಿಸಿ ಸೂಚಿಸಿದರು.
ಡ್ರಗ್ ಸೇವನೆ ಪತ್ತೆ ಕಿಟ್ ಸರಬರಾಜು
ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಆಸ್ಪತ್ರೆಗಳಿಗೆ ಡ್ರಗ್ ಟೆಸ್ಟಿಂಗ್ ಕಿಟ್‌ಗಳ ಸರಬರಾಜಿಗೆ ಆರೋಗ್ಯ ಇಲಾಖೆಗೆ ಸೂಚಿಸಿ ದರು.
ಪೊಲೀಸ್ ಇಲಾಖೆ ಡ್ರಗ್ ಟೆಸ್ಟಿಂಗ್ ಕಿಟ್‌ಗಳನ್ನು ಠಾಣೆಗಳಿಗೆ ವಿತರಿಸಿದೆ. ಇದರಿಂದ ಮಾದಕ ವಸ್ತು ಸೇವನೆ ಶಂಕಿತರನ್ನು ತಕ್ಷಣ ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಿದೆ. ಶಂಕಿತರನ್ನು ಪೋಲೀಸರು ಪರೀಕ್ಷೆಗೆ ಕರೆ ತಂದಾಗ ವೈದ್ಯರು ಸಹಕರಿಸಬೇಕು.
ಹೊಳಲ್ಕೆರೆ ಸರ್ಕಾರಿ ವೈದ್ಯರೊಬ್ಬರು ಡ್ರಗ್ ಟೆಸ್ಟಿಂಗ್ ವರದಿಗೆ ಅಸಹಕಾರ ತೋರುತ್ತಿರುವ ದೂರಿದೆ. ವರದಿಗೆ ವಿಳಂಬ ಮಾಡಿ ದರೆ ಅಥವಾ ತಪಾಸಣೆಗೆ ನಿರಾಕರಿಸುವ ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿವೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಆತಂಕ ವ್ಯಕ್ತಪಡಿಸಿದರು.
ಗಾಂಜಾ ವಶಪಡಿಸಿಕೊಳ್ಳುವ ಪ್ರಮಾಣ ಮತ್ತು ವ್ಯಸನಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವವರಲ್ಲಿ ೧೮-೩೦ ವರ್ಷದೊಳಗಿನ ಯುವಕರು ಶೇ.೮೦-೯೦ ಇದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ೨೦೨೩ರಿಂದ ಗಾಂಜಾ ವಶ ಪ್ರಕರಣಗಳ ಮಾಹಿತಿ ನೀಡಿದರು.
ಅಕ್ರಮ ಮದ್ಯ ಮಾರಾಟ, ಮಾದಕ ವಸ್ತುಗಳ ಸಾಗಣೆ ತಡೆಗೆ ಅಬಕಾರಿ ಇಲಾಖೆ ಕ್ರಮ ಕೈಗೊಂಡಿದೆ. ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರು ತಾಲೂಕುಗಳ ಗಡಿ ಭಾಗದಲ್ಲಿ ಶಾಶ್ವತ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಮಾದಕ ದ್ರವ್ಯ ಹಾಗೂ ಸ್ಪಿರಿಟ್ ಸಾಗಣÉ ಮೇಲೂ ತೀವ್ರ ನಿಗಾ ಇಡಲಾಗಿದೆ ಎಂದು ಅಬಕಾರಿ ಡಿಸಿ ಡಾ. ಆಶಾಲತಾ ಹೇಳಿದರು.
ಅಽಕೃತ ಪರವಾನಗಿ ಪಡೆದು ನೀರಾ ಮಾರಾಟ ಮಾಡಲು ಅವಕಾಶವಿದೆ. ಕಾನೂನು ಉಲ್ಲಂಘಿಸಿದರೆ ಕಾನೂನು ಕ್ರಮ ವಹಿಸುವಂತೆ ಡಿಸಿ ಸೂಚಿಸಿದರು.
ಗಾಂಜಾ ಬೆಳೆಯುವುದರಿಂದ ಎದುರಾಗುವ ಕಾನೂನು ತೊಂದರೆ ಕುರಿತು ರೈತರಲ್ಲಿ ಜಾಗÊತಿ ಮೂಡಿಸಬೇಕು. ಬೆಳೆ ಸಮೀಕ್ಷೆ ಹಂತದಲ್ಲಿ ಸಮೀಕ್ಷಾಕಾರರಿಗೆ ಗಾಂಜಾ ಬೆಳೆ ಕುರಿತು ತರಬೇತಿ ನೀಡುವಂತೆ ಹಾಗೂ ಶಾಲಾ, ಕಾಲೇಜುಗಳ ಸುತ್ತಮುತ್ತಲಿನ ಗೂಡಂಗಡಿಗಳ ತೆರವಿಗೆ ಆಽಕಾರಿಗಳಿಗೆ ನಿರ್ದೇಶಿಸಿದರು.
ಉಪ ವಿಭಾಗಽಕಾರಿ ಡಾ.ಕೆ.ಜೆ. ಕಾಂತರಾಜು, ಡಿವೈಎಸ್‌ಪಿ ಅರುಣ್ ನಾಗೇಗೌಡ, ಶಿವಕುಮಾರ್, ಎಂ.ಜಿ. ಸತ್ಯನಾರಾಯಣ್‌ರಾವ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ, ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ. ಅಭಿನವ್ ಇತರರು ಇದ್ದರು.
ಹೊರ ರಾಜ್ಯಗಳಾದ ಒಡಿಶಾದಿಂದ ಆಂಧ್ರಪ್ರದೇಶದ ಮೂಲಕ ವಿವಿಧ ಮಾರ್ಗಗಳಿಂದ ಮಾದಕ ವಸ್ತುಗಳು ಸರಬರಾಜಾ ಗುತ್ತಿವೆ. ಒಡಿಶಾ-ವಿಶಾಖಪಟ್ಟಣಂ-ಬೆAಗಳೂರು ಮಾರ್ಗವಾಗಿ ರೈಲುಗಳಲ್ಲಿ ಹೆಚ್ಚಿನ ಗಾಂಜಾ ಕರ್ನಾಟಕಕ್ಕೆ ಸರಬರಾಜಾಗುತ್ತಿದೆ.
ದಾವಣಗೆರೆ, ಚಳ್ಳಕೆರೆ, ಬಳ್ಳಾರಿ, ಹೊಸಪೇಟೆ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದಲೂ ಡ್ರಗ್ ಪೆಡ್ರ‍್ಸ್ ಗಾಂಜಾ ಸರಬರಾಜು ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಗಾಂಜಾ ಬೆಳೆ ಪತ್ತೆಯಾಗುತ್ತಿದ್ದು, ರೈಲ್ವೆ ನಿಲ್ದಾಣಗಳು ಮತ್ತು ಬಸ್‌ಗಳ ಮೂಲಕ ಸಾಗಣÉಯಾಗುವ ಮಾದಕ ವಸ್ತುಗಳ ಪತ್ತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ಜಿಲ್ಲೆಯನ್ನು ಮಾದಕ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಎಸ್‌ಪಿ ಮನವಿ ಮಾಡಿದರು.