ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಡಿವೈಎಸ್‌ಪಿಗಳಾದ ಅರುಣ್ ನಾಗೇಗೌಡ, ಶಿವಕುಮಾರ್, ಎಂ.ಜಿ. ಸತ್ಯನಾರಾಯಣ್‌ರಾವ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಇತರರು ಇದ್ದರು. 
ಚಿತ್ರದುರ್ಗ

ರಾ.ಹೆ.ಗಳಲ್ಲಿ ವಾಹನಗಳ ಅಕ್ರಮ ನಿಲುಗಡೆ ತಡೆಗೆ ಡಿಸಿ ನಿರ್ದೇಶನ

ಪ್ರಮುಖ ಮುಖ್ಯಾಂಶಗಳು

  • ಅಪಘಾತಗಳ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮ ಅಗತ್ಯ
  • ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
  • ಬ್ಲಾಕ್ ಸ್ಪಾಟ್‌
ಚಿತ್ರದುರ್ಗ: ರಸ್ತೆಗಳ ವೈಜ್ಞಾನಿಕ ನಿರ್ವಹಣೆಯಿಂದ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಅವೈಜ್ಞಾನಿಕ ರಸ್ತೆ, ಹಂಪ್‌ಗಳು ಅಪಘಾತಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಅವುಗಳನ್ನು ಕೂಡಲೇ ಸರಿಪಡಿಸಬೇಕು. ರಸ್ತೆ ಸುರಕ್ಷತೆಗೆ ಪೂರಕ ಸೂಚನಾ -Àಲಕಗಳನ್ನು ಅಳವಡಿಸಬೇಕು. ಅತಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ರಾ.ಹೆ.ಯಲ್ಲಿ ವಾಹನಗಳ ಅಕ್ರಮ ನಿಲುಗಡೆಯಿಂದ ಅಪಘಾತಗಳು ಸಂಭವಿಸುತ್ತಿವೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಪೊಲೀಸ್ ಉಪಾಽÃಕ್ಷಕರು ತಮ್ಮ ವ್ಯಾಪ್ತಿಯ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಸಂಬAಽಸಿದ ಅಽಕಾರಿಗಳಿಗೆ ವರದಿ ಕಳಿಸಬೇಕು. ಕ್ರಮವಾಗದಿದ್ದರೆ ಸಂಬAಽಸಿದವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದರು.
ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗಳಿಗೆ ಪ್ರಥಮ ಮತ್ತು ತುರ್ತು ಚಿಕಿತ್ಸೆಗೆ ಆರೋಗ್ಯ ಇಲಾಖೆ ಕ್ರಮವಹಿಸಬೇಕು. ರಸ್ತೆ ಸುರಕ್ಷತೆ ಒಂದು ಇಲಾಖೆ ಜವಾಬ್ದಾರಿಯಲ್ಲ, ಅಪಘಾತಗಳನ್ನು ತಡೆದು ಜೀವ ಉಳಿಸಲು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.
ಕಳೆದ ೩ ವರ್ಷಗಳಿಗೆ ಹೊಲಿಸಿದರೆ ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣ ಇಳಿಮುಖವಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದರು. ರಸ್ತೆ ಅಪಘಾತಗಳ ನಿರ್ವಹಣÉ ಮತ್ತು ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸಲು ಸಮಗ್ರ ರಸ್ತೆ ಅಪಘಾತ ದತ್ತಾಂಶ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಪೊಲೀಸ್, ಆರ್‌ಟಿಒ, ಹೆದ್ದಾರಿ ಪ್ರಾಽಕಾರ ಮತ್ತು ಆರೋಗ್ಯ ಇಲಾಖೆಗಳಿರುವ ಈ ಹೊಸ ತಂತ್ರಾAಶದ ವ್ಯವಸ್ಥೆಯನ್ನು ನ್ಯಾಯಾಲಯದೊಂದಿಗೆ ಜೋಡಿಸಲಾಗುವುದು ಎಂದರು.
ಪರವಾನಿಗಿ ಪಡೆಯದೆ ಹಾಗೂ ನೋಂದಣಿ ಇಲ್ಲದೆ ಸಂಚರಿಸುವ ಆಟೋರಿಕ್ಷಾಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ೨೦ ವರ್ಷಗಳ ಮೇಲ್ಪಟ್ಟ ಮೈನ್ಸ್ ಲಾರಿಗಳು ಓಡಾಟ ನಿರ್ಬಂಽಸಿದ್ದು, ಒಂದು ವೇಳೆ ಇಂತಹ ಲಾರಿಗಳು ಸಂಚರಿಸುತ್ತಿದ್ದರೆ ಸೀಜ್ ಮಾಡುವಂತೆ ಹಾಗೂ ಟ್ಯಾಕ್ಟರ್‌ಟ್ರ‍್ಯಾಲಿಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸುವಂತೆ ಸಾರಿಗೆ ಇಲಾಖೆ ಅಽಕಾರಿಗಳಿಗೆ ಡಿಸಿ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ೭,೯೯೩ ಆಟೋರಿಕ್ಷಾಗಳಿಗೆ ಅಽಕೃತ ಪರವಾನಗಿ ನೀಡಲಾಗಿದೆ. ಆದರೆ, ನೋಂದಾಯಿತ ಆಟೋರಿಕ್ಷಾಗಳ ಸಂಖ್ಯೆ ೧೦,೨೨೩ ಇವೆ. ೨,೨೩೦ ಆಟೋರಿಕ್ಷಾಗಳು ಪರವಾನಗಿ ಇಲ್ಲದೆ ಸಂಚರಿಸುತ್ತಿವೆ. ಇವುಗಳ ವಿರುದ್ಧ ತಕ್ಷಣ ಜಂಟಿ ಕಾರ್ಯಾಚರಣÉ ನಡೆಸಲಾಗುವುದು ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ಹೇಳಿದರು. ಹೊಳಲ್ಕೆರೆ ರಸ್ತೆಯ ಕೃಷ್ಣ ಸರ್ಕಲ್, ಮುರುಘಾ ಮಠದ ಬಳಿ ಹಳೆಯ ಪಿ.ಬಿ. ರಸ್ತೆಯಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ಕೃಷ್ಣ ಸರ್ಕಲ್‌ನ್ನು ವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡುವಂತೆ ಡಿಸಿ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಡಿವೈಎಸ್‌ಪಿಗಳಾದ ಅರುಣ್ ನಾಗೇಗೌಡ, ಶಿವಕುಮಾರ್, ಎಂ.ಜಿ. ಸತ್ಯನಾರಾಯಣ್‌ರಾವ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಇತರರು ಇದ್ದರು.