ಚಿತ್ರದುರ್ಗದಲ್ಲಿ ಮಂಗಳವಾರ ರಸಗೊಬ್ಬರ, ಬಿತ್ತನೆ ಬೀಜ ವಿತರಣೆ ಕುರಿತ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಡಿಸಿ ಟಿ. ವೆಂಕಟೇಶ್, ಡಾ.ಕೆ.ಜೆ. ಕಾಂತರಾಜ್, ಬಿ. ಮಂಜುನಾಥ್, ಎಂ. ಬಾಬು, ಕೆ.ಎಸ್. ಶಿವಕುಮಾರ್ ಇತರರು ಇದ್ದರು. 
ಚಿತ್ರದುರ್ಗ

ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಸಿದ್ಧತೆಗೆ ಡಿಸಿ ನಿರ್ದೇಶನ

ಪ್ರಮುಖ ಮುಖ್ಯಾಂಶಗಳು

  • ಕಳಪೆ ಬಿತ್ತನೆ ಬೀಜ ಮಾರಾಟದ ವಿರುದ್ಧ ಕ್ರಮ
  • ಕೆ-ಕಿಸಾನ್ ಆ್ಯಪ್ ಮೂಲಕ ಸೀಡ್ಸ್ ವಿತರಣೆ
  • ತಾಂತ್ರಿಕ ಗೊಂದಲಗಳ ಸಾಧ್ಯತೆ
ಚಿತ್ರದುರ್ಗ: ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಬಿತ್ತನೆ ಬೀಜ,ರಸಗೊಬ್ಬರ ಪೂರೈಕೆಯಲ್ಲಿ ಲೋಪಗಳಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಽಕಾರಿ ಟಿ. ವೆಂಕಟೇಶ್ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಬಿತ್ತನೆ ಬೀಜ,ರಸಗೊಬ್ಬರ ಸರಬರಾಜು ಸಿದ್ಧತೆ ಕುರಿತ ಜಿಲ್ಲಾಮಟ್ಟದ ಟಾಸ್ಕ್ -ÉÆÃರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಬಿತ್ತನೆ ಬೀಜಗಳು ಗುಣಮಟ್ಟದಿಂದ ಕೂಡಿರಬೇಕು. ಕÊಷಿ ಇಲಾಖೆ ವಿತರಿಸುವ ಬಿತ್ತನೆ ಬೀಜಗಳ ಜತೆಗೆ ಖಾಸಗಿ ಮಾರಾಟಗಾರರಲ್ಲಿ ಲಭ್ಯವಿರುವ ಬೀಜಗಳ ಗುಣಮಟ್ಟದ ಮೇಲೂ ನಿಗಾ ಇಡಬೇಕು.
ಮೊಳಕೆ ಒಡೆಯುವ ಸಾಮರ್ಥ್ಯದ ಕಡ್ಡಾಯ ಪರೀಕ್ಷೆ ಬಳಿಕವೇ ಬಿತ್ತನೆ ಬೀಜಗಳನ್ನು ಪೂರೈಸಬೇಕು ಎಂದು ನಿರ್ದೇಶಿಸಿದರು.
ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟ, ಬಿಡಿಯಾಗಿ ಸೀಡ್ಸ್ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳಪೆ ಬೀಜಗಳಿಂದ ರೈತರಿಗೆ ನಷ್ಟ ಉಂಟಾಗದAತೆ ಜಾಗೃತಿ ವಹಿಸಬೇಕು. ಕಳಪೆ ಬೀಜ ಮಾರಾಟದ ದೂರುಗಳಿಗೆ ಆಸ್ಪದ ಇರಬಾರದು.
ಜಿಲ್ಲೆಯ ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಬಿತ್ತನೆ ಬೀಜ ಖಾಸಗಿ ಮತ್ತು ಇಲಾಖೆಯಿಂದ ವಿತರಣೆಯಾಗುತ್ತವೆ. ರೈತರು ಹೊರಗಿನಿಂದ ಯಾವೆಲ್ಲ ಬೀಜಗಳನ್ನು ತರುತ್ತಿದ್ದಾರೆಂಬ ನಿಖರ ದಾಖಲೆ ಕೃಷಿ ಅಽಕಾರಿಗಳಲ್ಲಿರಬೇಕು. ಈ ಬಾರಿ ಎರಡೂ ಹಂಗಾಮುಗಳಲ್ಲೂ ಕೆ-ಕಿಸಾನ್ ತಂತ್ರಾAಶದ ಆ್ಯಪ್ ಮೂಲಕವೇ ಬಿತ್ತನೆ ಬೀಜ ವಿತರಿಸಲಾಗುವುದು ಎಂದರು.
ಆರAಭದಲ್ಲಿ ತಾಂತ್ರಿಕ ಗೊಂದಲಗಳ ಸಾಧ್ಯತೆ ಇರುತ್ತದೆ. ಆ್ಯಪ್‌ಡೌನ್‌ಲೋಡ್, ನೋಂದಣಿ, ಭೂಮಿ ದಾಖಲೆಗಳ ಅಪ್‌ಲೋಡ್ ವಿಷಯದಲ್ಲಿ ರೈತರಿಗೆ ಯಾವುದೇ ಗೊಂದಲಗಳಾಗದAತೆ ತಾಲೂಕು ಮಟ್ಟದ ಅಽಕಾರಿಗಳು ಮುಂಚಿತವಾಗಿಯೇ ಸೂಕ್ತ ಮಾರ್ಗದರ್ಶನ ನೀಡಬೇಕು. ಪ್ರತಿ ರೈತರ ಬೇಡಿಕೆಯನ್ನು ಆ್ಯಪ್‌ನಲ್ಲಿ ನೋಂದಾಯಿಸಿ ವಿತರಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್ ಮಾತನಾಡಿ,ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಿದ್ಧತೆಗಳಾಗಿವೆ ಎಂದರು. ಪೂರ್ವ ಮುಂಗಾರಿನಲ್ಲಿ ೨೫-೩೦ ಸಾವಿರ ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳ ಬಿತ್ತನೆ ನಿರೀಕ್ಷೆ ಇದೆ.
ಅಂದಾಜು ೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಅಂದಾಜು ೧.೧೫ ಲಕ್ಷ ಹೆಕ್ಟೇರ್ ಶೇಂಗಾ ಬಿತ್ತನೆ ಆಗಲಿದೆ. ಕಳೆದ ವರ್ಷ ೫೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ರಾಗಿ ಈ ಬಾರಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ೩,೦೧,೫೬೨ ರೈತರಿದ್ದಾರೆ. ಪರಿಶಿಷ್ಟ ಜಾತಿಯ ೪೭,೩೯೫, ಪರಿಶಿಷ್ಟ ಪಂಗಡದ ೪೭,೭೬೫ ಹಾಗೂ ಸಾಮಾನ್ಯ ವರ್ಗದ ೨,೦೬,೪೦೨ ರೈತರಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.
ಕಳೆದ ೨ ವರ್ಷಗಳಿಂದ ೧೩೦-೧೪೦ ದಿನಗಳ ಅವಽಯ ತೊಗರಿ ತಳಿ ಪರಿಚಯಿಸಲಾಗಿದೆ. ಈ ವರ್ಷವೂ ಇದನ್ನು ಮುಂದುವ ರಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಆಗುವ, ಈವರೆಗೆ ಆಗಿರುವ ಮಳೆ ಮಾಹಿತಿಯನ್ನು ಮಂಜುನಾಥ್ ವಿವರಿಸಿದರು. ಎಸಿ ಡಾ.ಕೆ.ಜೆ. ಕಾಂತರಾಜ್, ಜಿಪಂ ಉಪ ಕಾರ್ಯದರ್ಶಿ ಎಂ. ಬಾಬು, ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಶಿವಕುಮಾರ್ ಮತ್ತಿತರ ಅಽಕಾರಿಗಳು ಇದ್ದರು.
ಕೃತಕ ಅಭಾವದ ವಿರುದ್ಧ ಖಡಕ್ ಸೂಚನೆ
ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಕೃತಕ ಅಭಾವ ಸÊಷ್ಟಿಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಅಽಕಾರಿಗಳಿಗೆ ಡಿಸಿ ಖಡಕ್ಕಾಗಿ ಸೂಚಿಸಿದರು. ಅನಗತ್ಯ ಭೀತಿಯಿಂದ ರೈತರು ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವಂಥ ಪರಿಸ್ಥಿತಿ ಬರಬಾರದು. ಸ್ಥಳೀಯವಾಗಿ ಯಾವುದೇ ರೀತಿಯ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
ಎಲ್ಲ ತಾಲೂಕುಗಳಲ್ಲೂ ಮುಂಗಾರು ಆರಂಭಕ್ಕೂ ಮುನ್ನವೇ ಪೂರ್ವ ಸಿದ್ಧತಾ ಸಭೆಗಳನ್ನು ನಡೆಸಬೇಕು. ರಸಗೊಬ್ಬರ ವಿತರ ಕರು ನಿಗದಿತ ದರದಲ್ಲಿಯೇ ಗೊಬ್ಬರ ಪೂರೈಸುತ್ತಿದ್ದಾರೆಯೇ, ನಿಗದಿಪಡಿಸಿದ ಗುರಿ ತಲುಪಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ತಹಸೀಲ್ದಾರ್‌ಗಳಿಗೆ ವೆಂಕಟೇಶ್ ಸೂಚಿಸಿದರು.