ಚಿತ್ರದುರ್ಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗೀತಾಗಾಯನ ತರಬೇತಿ ಕಾರ್ಯಕ್ರಮದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಹುರುಳಿ ಬಸವರಾಜ್, ಡಾ.ಕೆ. ಮೋಹನ್‌ಕುಮಾರ್, ಹಸೀನಾ, ಕೆ.ಪಿ.ಎಂ. ಗಣೇಶಯ್ಯ ಇತರರು ಇದ್ದರು.
- ಡಾ. ಕೆ.ಎಂ. ವೀರೇಶ್ ಅಭಿಪ್ರಾಯ
- ವಿದ್ಯಾರ್ಥಿಗಳಿಗೆ ನಾಡು, ದೇಶಭಕ್ತಿಗೀತೆ ಗಾಯನ ತರಬೇತಿ
- ರಂಗಸೌರಭ ಕಲಾ ಸಂಘ,
ಚಿತ್ರದುರ್ಗ: ಜ್ಞಾನ ಬದುಕನ್ನು ಹಸನುಗೊಳಿಸುತ್ತದೆ, ಕಲಿತ ವಿದ್ಯೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ರೂಪಿಸುತ್ತದೆ ಎಂದು ರಾಜ್ಯ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಹೇಳಿದರು.
ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ವಿದ್ಯಾಭಾರತಿ ಜ್ಞಾನಮಂದಿರ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಗೀತಗಾಯನ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಏರ್ಪಡಿಸಿದ್ದ ನಾಡಗೀತೆ, ರೈತಗೀತೆ,ರಾಷ್ಟçಗೀತೆ ಮತ್ತು ರಾಷ್ಟಿçÃಯಗೀತೆ ವಂದೇ ಮಾತರಂ ಸೇರಿ ವಿವಿಧ ದೇಶಭಕ್ತಿ ಹಾಗೂ ಕನ್ನಡ ಗೀತೆ ಗಳ ಗಾಯನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿರಂತರ ಓದುವಿಕೆ ಮಕ್ಕಳನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುತ್ತದೆ ಎಂದು ತಿಳಿಸಿದರು.
ನಮ್ಮ ನಾಡು ನುಡಿ ಕುರಿತು ಉಪನ್ಯಾಸ ನೀಡಿದ ಸಾಹಿತಿ ಹುರುಳಿ ಬಸವರಾಜ್, ಕರ್ನಾಟಕ ರಾಜ್ಯ ಸಂಪತ್ಭರಿತ ನಾಡು. ಭವಿ ಷ್ಯದಲ್ಲಿ ಉತ್ತಮ ಸಮಾಜವನ್ನು ಪ್ರತಿನಿಽಸಬೇಕಾದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂ ದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ. ಮೋಹನ್‌ಕುಮಾರ್, ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಹಸೀನಾ, ಶಿಕ್ಷಕರಾದ ಎ. ಎಸ್.ಗಣೇಶ, ಓ.ಪಾಲಯ್ಯ, ಕೆ.ಆರ್. ಚಂದನ್, ಆರ್.ನಿಂಗರಾಜ, ಎ.ಜ್ಯೋತಿ, ಯೋಗಶಿಕ್ಷಕ ಎಂ.ಬಿ. ಮುರಳಿ ಹಾಗೂ ರಂಗ
ಸಂಘಟಕ ಪ್ರಕಾಶ್ ಬಾದರದಿನ್ನಿ, ಸಿ.ಕಲ್ಯಾಣ್‌ಕುಮಾರ್, ಶ್ರೀನಿವಾಸ ಮಳಲಿ ಮಾತನಾಡಿದರು.
ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ತರಬೇತಿ ನೀಡಿದರು. ವಿದ್ಯಾರ್ಥಿನಿ ಚಂದನಾ ಪ್ರಾರ್ಥಿಸಿದರು. ಆರ್. ಸಿಂಚನಾ ಮತ್ತು ಕೆ.ಟಿ. ಸಾಹಿತ್ಯ ನಿರೂಪಿಸಿದರು.