ಚಿತ್ರದುರ್ಗ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ಸಂಘರ್ಷಗಳನ್ನು ತಪ್ಪಿಸಲು, ಸಂಘರ್ಷಾತ್ಮಕ ಘಟನೆಗಳಾದಂಥ ಸ್ಥಳಗಳಲ್ಲಿ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾಽಕಾರಿ ಎಸ್.ರಮ್ಯಾ ಅಽಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ತ್ರೆÊಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಸಂಘರ್ಷದ ಕುರಿತು ಮಾಹಿತಿ ದೊರೆತ ಕೂಡಲೇ ಸ್ಥಳಗಳಿಗೆ ಭೇಟಿ ನೀಡಿ, ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರ ಅಹವಾಲು ಆಲಿಸಬೇಕು. ತಕ್ಷಣವೇ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡು, ಪೊಲೀಸರೊಂದಿಗೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು, ಈ ವಿಚಾರದಲ್ಲಿ ನಿರ್ಲಕ್ಷ÷್ಯ ಸಲ್ಲದು ಎಂದರು.
ದೌರ್ಜನ್ಯ ತಡೆ ಕಾಯ್ದೆ ಕುರಿತ ಜಾಗೃತಿ ಹಾಗೂ ಸಂತ್ರಸ್ತರು ಕುಂದು ಕೊರತೆಗಳನ್ನು ಸಲ್ಲಿಸಲು ಅನುವಾಗುವಂತೆ ತಾಲೂಕು ಮಟ್ಟದಲ್ಲಿ ಅಽಕಾರಿಗಳು ಕಡ್ಡಾಯವಾಗಿ ಕುಂದು-ಕೊರತೆ ಸಭೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಹೈಕೋರ್ಟಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಪ್ರತಿ ತಿಂಗಳ ೩ ಅಥವಾ ೪ನೇ ಶನಿವಾರ ದೌರ್ಜನ್ಯ ತಡೆ ಕುರಿತು ಪರಿಷ್ಟ ಜಾತಿ ಮತ್ತು ಪಂಗಡದವರ ಸಭೆ ನಡೆಸಲು ಅಽಕಾರಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಮಟ್ಟದಲ್ಲಿ ತಿಂಗಳಿಗೊಮ್ಮೆ ಈ ಕುರಿತು ಸ್ವತಃ ಸಭೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಕುಶಲ್ಚೌಕ್ಸೆ ತಿಳಿಸಿದರು.
ಸರ್ಕಾರ ಹೊರಡಿಸಿರುವ ಎಸ್ಒಪಿ ಅನುಸರಿಸಿಯೇ ರೌಡಿಶೀಟರ್ಗಳನ್ನು ಗುರುತಿಸಲಾಗುತ್ತಿದೆ. ಯಾವುದೇ ನಿಯಮಗಳ ಉಲ್ಲಂ ಘನೆ ಆಗಿಲ್ಲ. ಒಂದು ವೇಳೆ ನಿರ್ದಿಷ್ಟ ಪ್ರಕರಣದ ಮಾಹಿತಿ ನೀಡಿದರೆ, ಕ್ರಮ ಕೈಗೊಳ್ಳಲಾಗುವುದು. ಪ್ರತಿ ವರ್ಷವೂ ರೌಡಿಶೀಟರ್ಗಳ ಪಟ್ಟಿ ಪರಿಷ್ಕರಿಸಲಾಗುತ್ತದೆ ಎಂದರು.
ಸAತ್ರಸ್ತರಿಗೆ ಮೊದಲ ಆದ್ಯತೆ ನೀಡಿ
ವಿವಿಧ ಇಲಾಖೆಗಳ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಹಾಗೂ ವಿವಿಧ ನಿಗಮ ಮಂಡಳಿಗಳ ಸೌಲಭ್ಯಗಳಲ್ಲಿ ದೌಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಬೇಕು. ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾಽಕಾರಿಗಳು ಪ್ರತಿ ೧೫ ದಿನಗಳಿಗೆ ಒಮ್ಮೆ ಪರಿ ಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು, ಕೊರತೆಗಳ ಸಭೆ ನಡೆಸಬೇಕೆಂದು ಜಿಲ್ಲಾ ಜಾಗÊತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಟಿ.ಡಿ. ರಾಜಗಿರಿ ಹೇಳಿದರು.
೩೭೧(ಎ) ಸೇರಿಸಲು ಒತ್ತಾಯ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹೆಚ್ಚಾಗಿ ವಾಸಿಸುವ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿರುವ ವಿಶಿಷ್ಟ ಸಂಪ್ರದಾಯ ಹಾಗೂ ಸಂಸ್ಕೃತಿ ರಕ್ಷಿಣೆಗೆ ನಾಗಾಲ್ಯಾಂಡ್ ಮಾದರಿ ಸಂವಿಧಾನದಲ್ಲಿ ೩೭೧(ಎ)ಜಾರಿಗೊಳಿಸಿ ಎರಡೂ ತಾಲೂಕುಗಳನ್ನು ಸೇರಿಸಲು ಶಿ-Áರಸ್ಸು ಮಾಡುವಂತೆ ಸಮಿತಿ ಸದಸ್ಯ ಪ್ರಶಾಂತ್ಕುಮಾರ್ ಒತ್ತಾಯಿಸಿದರು. ಜಿಲ್ಲೆಯ ೨೫ ಕಡೆ ಪರಿಶಿಷ್ಟ ವರ್ಗ ದವರು ದೇವರ ಎತ್ತು ಹಾಗೂ ಕಿಲಾರಿ ಸಂಪ್ರದಾಯ ಪಾಲಿಸುತ್ತಿದ್ದು, ದೇಶಿ ತಳಿಯ ಹಸುಗಳನ್ನು ಸಾಕುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಸೌಲಭ್ಯ ನೀಡುವಂತೆ ಕೋರಿದರು.
೭೪ ಪ್ರಕರಣ ದಾಖಲು
ಪ್ರಸಕ್ತ ವರ್ಷದ ಏಪ್ರಿಲ್ನಿಂದ ಅ.೧೦ರವರೆಗೆ ಒಟ್ಟು ೭೪ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ೫೯, ಪರಿಶಿಷ್ಟ ವರ್ಗದವರ ಮೇಲೆ ೧೫ ದೌರ್ಜನ್ಯಗಳು ನಡೆದಿವೆ. ಒಟ್ಟು ೬೨ ಲಕ್ಷ ರೂ. ಪರಿಹಾರವನ್ನು ಸಂತ್ರಸ್ತರಿಗೆ ನೀಡಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಜರುಗಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಲು ೧.೦೨ ಕೋಟಿ ರೂ.ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ೨೦ ಲಕ್ಷ ರೂ.ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ತಿಳಿಸಿದರು.
ಜಿಪಂ ಸಿಪಿಒ ಸಿ.ಎಸ್. ಗಾಯತ್ರಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಬಿ. ರಾಜಪ್ಪ, ವೈ. ಮುದ್ದಪ್ಪ, ಟಿ. ರವೀಂದ್ರ, ಹೇಮೇಗೌಡ, ಜಿ.ಪಿ. ರವಿಶಂಕರ್, ಎಂ. ರಾಜಣ್ಣ, ಓಂಕಾರಮೂರ್ತಿ, ಅರುಣ್ಕುಮಾರ್, ಅವಿನಾಶ್, ನರೇನಹಳ್ಳಿ ಅರುಣ್ಕುಮಾರ್ ಮತ್ತಿತರರು ಇದ್ದರು.