ಚಿತ್ರದುರ್ಗ ತಾಲೂಕು ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಎಸ್. ಹನುಮಂತಪ್ಪ, ಮಾರುತಿಪ್ರಸಾದ್, ಎಸ್. ಕೃಷ್ಣ, ಕೆಂಚಪ್ಪ ಇತರರು ಇದ್ದರು.  
ಚಿತ್ರದುರ್ಗ

ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ವಿಶೇಷ ತರಗತಿ
  • ಸಂಜೆ ಗುಂಪು ಅಧ್ಯಯನ
  • ಮೂರು ಪೂರ್ವಾ ಸಿದ್ಧತಾ ಪರೀಕ್ಷೆ
ಚಿತ್ರದುರ್ಗ: ಮನೆಯಲ್ಲಿ ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಬೇಕೆಂದು ಮುಖ್ಯ ಶಿಕ್ಷಕ ಎಸ್. ಹನುಮಂತಪ್ಪ ಹೇಳಿ ದರು. ಚಿತ್ರದುರ್ಗ ತಾಲೂಕು ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಮತ್ತು ಶಿಕ್ಷಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ, ಸಂಜೆ ಗುಂಪು ಅಧ್ಯಯನ ಹಾಗೂ ಪ್ರತಿ ಭಾನುವಾರವೂ ವಿಶೇಷÀ ತರಗತಿಗಳನ್ನು ನಡೆಸಲಾಗುತ್ತಿದೆ ಎಂದರು.
ಮಕ್ಕಳಿಗೆ ಪಾಲಕರು ಮೊಬೈಲ್ ನೀಡಬಾರದು, ಟಿವಿಯಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕ ಮಾರುತಿ ಪ್ರಸಾದ್ ಮಾತನಾಡಿ, ಶಿಕ್ಷಣ ಇಲಾಖೆ ೧೦ನೇ ತರಗತಿಗೆ ಮೂರು ಪೂರ್ವಾ ಸಿದ್ಧತಾ ಪರೀಕ್ಷೆಗಳನ್ನು ನಡೆಸುತ್ತದೆ. ಈಗಾಗಲೇ ಎಲ್ಲ ವಿಷಯಗಳ ಶಿಕ್ಷಕರು, ಮಂಡಳಿ ಬಿಡುಗಡೆಗೊಳಿಸಿರುವ ಪ್ರಶ್ನೆ ಪತ್ರಿಕೆ, ಮಾದರಿ ಉತ್ತರಗಳನ್ನು ನೀಡಿದ್ದು, ವಿದ್ಯಾರ್ಥಿಗಳು ತಪ್ಪದೇ ಮನೆಯಲ್ಲಿ ಅಭ್ಯಾಸ ಮಾಡಬೇಕು.
ಈ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕು ಎಂದರು. ಶಿಕ್ಷಕ ಎಸ್.ಕÊಷ್ಣ ಮಾತನಾಡಿ, ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಜೀವನದ ಪ್ರಮುಖ ತಿರುವಾಗಿದೆ. ಎಲ್ಲ ವಿದ್ಯಾರ್ಥಿಗಳು ವಿಶೇಷವಾಗಿ ಬಾಲಕರು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಕೆಂಚಪ್ಪ, ಸದಸ್ಯರು ಹಾಗೂ ಇತರರು ಇದ್ದರು.