ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆ, ಗೋನೂರು ಸಮೀಪದ ಅಕ್ವಾಡೆಕ್ ನಿರ್ಮಾಣ ಕಾಮಗಾರಿಗೆ ಸಂಬAಽಸಿದAತೆ ೫೦೦ ಟನ್ ಮತ್ತು ೭೦೦ ಟನ್ ಸಾಮರ್ಥ್ಯದ ಭಾರೀ ಗಾತ್ರದ ಕ್ರೆÊನ್ಗಳೆರಡು ಶುಕ್ರವಾರ ಕಾಮಗಾರಿ ಸ್ಥಳ ತಲುಪಿವೆ. ೧೯೬೨(೧.೯೦ ಕಿ.ಮಿ.)ಮೀಟರ್ ಉದ್ದದ ಅಕ್ವಾಡೆಕ್ ಕಾಮಗಾರಿ ಪೂರ್ಣಗೊಂಡರೆ ದಾವಣಗೆರೆ ಜಿಲ್ಲೆ ಜಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಿಗೆ ನೀರು ಹರಿಸಲು ಸಾಧ್ಯವಾಗಲಿದ್ದು, ೨೦೨೭ ಮಾರ್ಚ್ ಅಂತ್ಯದೊಳಗೆ ಈ ಆಕ್ವಾಡೆಕ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ.
ಅಕ್ವಾಡೆಕ್ ನಿರ್ಮಾಣ ಕಾಮಗಾರಿಯಲ್ಲಿ ೬೦೦ ಮೀಟರ್ ಪೂರ್ಣವಾಗಿದೆ. ಇನ್ನೂ ೬೦೦ ಮೀಟರ್ಗೆ ಅಗತ್ಯವಿರುವ ಸಿಮೆಂಟ್ ಟ್ರ-ïಗಳು ಸಿದ್ಧವಾಗಿದ್ದು, ಅವುಗಳನ್ನು ಅಂದಾಜು ೩೫ ಮೀಟರ್ ಎತ್ತರದ ಪಿಯರ್( mಜಿಛ್ಟಿ)ಗಳ ಮೇಲೆ ೩೫೦ ಟನ್ ತೂಕವಿರುವ ಒಂದೊAದು ಟ್ರಪ್ಗಳನ್ನು ಕೂರಿಸಬೇಕಾಗಿದ್ದು, ಈ ಕಾರ್ಯ ಸದ್ಯದಲ್ಲೇ ಆರಂಭವಾಗಲಿದೆ.
ಈ ಆಕ್ವಾಡೆಕ್ಗೆ ೧೧೦ ಟ್ರಪ್ಗಳು ಅಗತ್ಯವಿದ್ದು, ಇವುಗಳಲ್ಲಿ ೩೩ನ್ನು ಅವಕಾಶ ಲಭ್ಯತೆ ಹಿನ್ನೆಲೆಯಲ್ಲಿ ಪಿಯರ್ಗಳ ಮೇಲೆ ನಿರ್ಮಿಸಲಾಗಿತ್ತು. ಆದರೆ, ಈಗ ಅದು ಸಾಧ್ಯವಾಗದು. ಆದ್ದರಿಂದ ಉಳಿದಿರುವ ೭೭ ಟ್ರಪ್ಗಳನ್ನು ನೆಲದಲ್ಲಿ ಸಿದ್ಧಪಡಿಸಲಾಗಿದೆ. ಅವುಗಳನ್ನು ಈಗ ಕ್ರೆÊನ್ಗಳ ಮೂಲಕ ಮೇಲೆ ತೆಗೆದುಕೊಂಡು ಜೋಡಿಸಬೇಕಿದೆ. ೨.೬ ಮೀಟರ್ ಸುತ್ತಳತೆಯ ಪಿಯರ್ಗಳನ್ನು ಗರಿಷ್ಠ ೩೫ ಮೀಟರ್ ಎತ್ತರದವರೆಗೆ ನಿರ್ಮಿಸಲಾಗಿದೆ. ಇನ್ನೂ ಉಳಿದಿರುವ ೬೦೦ ಮೀಟರ್ ಉದ್ದದೊಂದಿಗೆ ಆಕ್ವಾಡೆಕ್ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಬೇಕಿದೆ.