ಚಿತ್ರದುರ್ಗ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬುಧವಾರ ಹಿಂದೂ ಮಹಾಗಣಪತಿ ಮಹೋತ್ಸವ ಅಂಗವಾಗಿ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಿಸಲಾಯಿತು. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಗೋವಿಂದ ಎಂ. ಕಾರಜೋಳ, ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಸೌಭಾಗ್ಯ ಬಸವರಾಜನ್, ಜಿ. ಸುಽÃರ್, ಷಡಕ್ಷರಪ್ಪ ಇತರರು ಇದ್ದರು.
- ಸೆ.೧೪ಕ್ಕೆ ಪ್ರತಿಷ್ಠಾಪನೆ, ಆ.೩ಕ್ಕೆ ಬೃಹತ್ ಶೋಭಾಯಾತ್ರೆ
- ಈ ಬಾರಿ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಉತ್ಸವ
- ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನಗರದಲ್ಲಿ ಆಚರಿಸುವ ಹಿಂದೂ ಮಹಾಗಣಪತಿ ಮಹೋತ್ಸವದ ಸಿದ್ಧತೆಗೆ ಬುಧವಾರ ನಗರದ ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಿಸುವ ಮೂಲಕ ಮಠಾಽÃಶರು, ಚುನಾಯಿತ ಪ್ರತಿನಿಽಗಳು, ಗಣ್ಯರು ಚಾಲನೆ ನೀಡಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಪೀಠದ ಶ್ರೀ ಪುರುಷೋತ್ತಮಾ ನಂದಪುರಿ ಸ್ವಾಮೀಜಿ, ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ, ಸಂಸದ ಗೋವಿಂದ ಎಂ. ಕಾರಜೋಳ.
ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ. ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ. ಸುಽÃರ್, ಗೌರವಾಧ್ಯಕ್ಷ ಷಡಕ್ಷರಪ್ಪ, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ವಿಎಚ್‌ಪಿ ಪ್ರಾಂತ ಸತ್ಸಂಗ ಪ್ರಮುಖ ಚಂದ್ರಶೇಖರ್, ಉಪಾಧ್ಯಕ್ಷ ಡಾ. ಮಂಜುನಾಥ್, ಡಾ. ಸಿದ್ಧಾರ್ಥ ಗುಂಡಾರ್ಫಿ, ರೇಖಾ, ಸುರೇಶ್, ನಾಗರಾಜ್, ವೆಂಕಟೇಶ್ ಯಾದವ್, ಬದ್ರಿನಾಥ್, ಕೊಲ್ಲಿಲಕ್ಷಿ÷್ಮÃ,ಪ್ರಶಾಂತ್, ಶರಣïಕುಮಾರ್, ಶ್ರೇಣಿಕ್, ಬಸಮ್ಮ, ನಾಗರಾಜ್‌ಬೇದ್ರೆ ಮತ್ತಿತರರು ಇದ್ದರು.
ಈ ಬಾರಿ ಸೆ.೧೪ರಂದು ಗಣಪತಿ ಪ್ರತಿಷ್ಠಾಪನೆ, ಅ.೩ ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ. ಸೆ.೯ ಅಥವಾ ೧೩ರಂದು ಹಿಂದೂ ಮಹಾ ಗಣಪತಿ ಪುರಪ್ರವೇಶ ನಡೆಯಲಿದೆ. ೧೪ರಂದು ಬೆಳಗ್ಗೆ ೯.೧೮ರಿಂದ ೧೦.೪೫ರ ಶುಭ ಮಹೂರ್ತದಲ್ಲಿ ಗಣಪತಿ ಪ್ರತಿಷ್ಠಾಪನೆ ನೆರವೇರಲಿದೆ.