ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಮಧ್ವ್ವಾಚಾರ್ಯರ ಜಯಂತಿ ಆಚರಣೆಯಲ್ಲಿ ಎಡಿಸಿ ಬಿ.ಟಿ.ಕುಮಾರಸ್ವಾಮಿ, ಪಿ. ಎಸ್.ಮಂಜುನಾಥ್, ಪ್ರಭಂಜನಾಚರ‍್ಯ, ಟಿ.ಕೆ.ನಾಗರಾಜರಾವ್, ವಾದಿರಾಜ್ ಇತರರು ಇದ್ದರು.  
ಚಿತ್ರದುರ್ಗ

ಮಧ್ವರ ವಿಚಾರಧಾರೆಗಳಿಂದ ಅಶಾಂತಿ, ಕಲಹಗಳ ಹತೋಟಿ

ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿಕೆ

ಚಿತ್ರದುರ್ಗ: ಜಗತ್ತಿನಲ್ಲಿ ಹೆಚ್ಚುತ್ತಿರುವ ಅಶಾಂತಿ ಮತ್ತು ಕಲಹಗಳ ಹತೋಟಿಗೆ ಶ್ರೀ ಮಧ್ವಾಚಾರ್ಯರ ದ್ವೆÊತ ತತ್ವಜ್ಞಾನ ಹಾಗೂ ಆಚಾರ್ಯ ಪರಂಪರೆ ವಿಚಾರಧಾರೆಗಳು ಅತ್ಯಂತ ಪ್ರಸ್ತುತವಾಗಿವೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಹಾಗೂ ಬಸವಣ್ಣನವರಂಥ ಮಹಾಪುರುಷರು ಜನ್ಮತಾಳಿ ತಮ್ಮ ಬದುಕಿನ ಮೂಲಕವೇ ಜಗತ್ತಿಗೆ ಸಂದೇಶ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಆಚಾರ್ಯರ ಕೃತಿಗಳ ಅಧ್ಯಯನ ಮತ್ತು ಪಾಲನೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಲಿದೆ ಎಂದರು.

ಅತ್ಯAತ ಹಿರಿದಾಗಿರುವ ನಮ್ಮ ಸಂಸ್ಕೃತಿ ಮತ್ತು ಪರಂಪರೆ, ಆಧುನಿಕ ಸಾಮಾಜಿಕ ಮಾಧ್ಯಮ ಹಾಗೂ ಪಾಶ್ಚಿಮಾತ್ಯರ ಪ್ರಭಾವದಿಂದ ಕ್ಷೀಣಿಸುತ್ತಿವೆ. ಈ ಸಂಸ್ಕೃತಿ, ಪರಂಪರೆ ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ಉಡುಪಿಯಲ್ಲಿ ಶ್ರೀ ಕೃಷ್ಣ್ಣನ ಪ್ರತಿಷ್ಠಾಪನೆ ಹಾಗೂ ಅಷ್ಟಮಠಗಳನ್ನು ಸ್ಥಾಪಿಸುವ ಮೂಲಕ ಮಧ್ವಾಚಾರ್ಯರು ಈ ನಾಡಿಗೆ ಪವಿತ್ರವಾದ ಕೊಡುಗೆ ನೀಡಿದ್ದಾರೆ. ಸರ್ಕಾರವು ಈಗಾಗಲೇ ಶಂಕರಚಾರ್ಯರ ಜಯಂತಿಯAತೆ ಮಧ್ವಾಚಾರ್ಯರ ಜಯಂತಿಯನ್ನೂ ಸರ್ಕಾರಿ ಮಟ್ಟದಲ್ಲಿ ಆಚರಿಸಲು ನಿರ್ದೇಶಿಸಿದೆ. ವಿಧಾನ ಪರಿಷತ್ ಚುನಾವಣೆ ಮಾದರಿ ನೀತಿ ಸಂಹಿತೆಯಿAದಾಗಿ ಜಯಂತಿ ಕಾರ್ಯಕ್ರಮವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಽ ಟಿ.ಕೆ.ನಾಗರಾಜರಾವ್, ಜಂಟಿ ಕಾರ್ಯದರ್ಶಿ ವಾದಿರಾಜ್, ಶ್ರೀ ಹರಿ ವಾಯು ಗುರು ಸೇವಾ ಟ್ರಸ್ಟ್ ಅಧ್ಯಕ್ಷ ದ್ವಾರಕನಾಥ್, ನಿವÊತ್ತ ಉಪ ತಹಸೀಲ್ದಾರ್ ವಾಸುದೇವಮೂರ್ತಿ, ವಿದ್ವಾನ್ ರಾಘವಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಷಾ, ಯಲ್ಲಪ್ಪ ಮತ್ತಿತರರು ಇದ್ದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.

ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಿ

ಮಹಾನ್ ತತ್ವಜ್ಞಾನಿ ಹಾಗೂ ದಾರ್ಶನಿಕರ ತತ್ವ ಸಿದ್ಧಾ ಂತಗಳನ್ನು, ಪ್ರವಚನಗಳಲ್ಲಿ ಕೇಳುವುದರೊಂದಿಗೆ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಇಂಥ ಜಯಂತಿ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಹೇಳಿದರು.

ಸರ್ಕಾರ ಮಧ್ವಾಚಾರ್ಯರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಇದೇ ಮಾದರಿಯಲ್ಲಿ ವಿಶಿಷ್ಟಾದ್ವೆÊತ ಸಿದ್ಧಾಂತದ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನೂ ಸರ್ಕಾರ ಆಚರಿಸಬೇಕೆಂದು ಕೋರಿದರು.

ಉಡುಪಿ ಅಷ್ಟ ಮಠಗಳು ನಿರಂತರ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿವೆ. ಅದ್ವೆÊತ, ವಿಶಿಷ್ಟಾದ್ವೆÊತ ಹಾಗೂ ದ್ವೆÊತ ಸಿದ್ಧಾಂತಗಳ ಮೂಲ ಉದ್ದೇಶ ಮಾನವ ಜೀವನವನ್ನು ಸನ್ಮಾರ್ಗದಲ್ಲಿ ನಡೆಸುವುದಾಗಿದೆ ಎಂದರು.

ಮಾನವಕುಲಕ್ಕೆ ಮಾರ್ಗದರ್ಶಕ

ಉತ್ತರಾದಿ ಮಠದ ಆಡಳಿತಾಽಕಾರಿ ಪ್ರಭಂಜನಾಚಾರ್ ಮಾತನಾಡಿ, ಮಧ್ವಾಚಾರ್ಯರು ಕೇವಲ ಆಧ್ಯಾತ್ಮಿಕ ರಂಗಕ್ಕೆ ಸೀ ಮಿತವಾಗದೆ, ಸಾಮಾಜಿಕ ಕಳಕಳಿಯ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ನೂರು ಮಂದಿ ದುಷ್ಟರು ಶಿಕ್ಷೆಯಿಂದ ತಪ್ಪಿಸಿಕೊಂಡರೂ ಪ ರವಾಗಿಲ್ಲ, ಆದರೆ ಒಬ್ಬ ಪ್ರಾಮಾಣಿಕನಿಗೆ ಎಂದಿಗೂ ಅನ್ಯಾಯವಾಗಬಾರದು ಎಂಬ ತತ್ವವನ್ನು ಸಾರಿದ ಮಹಾನ್ ನ್ಯಾಯನಿಷ್ಠರು. ಅವ ರು ರಚಿಸಿದ ೩೭ ಸರ್ವಮೂಲ ಗ್ರಂಥಗಳು ಇಂದಿಗೂ ಮಾನವಕುಲಕ್ಕೆ ಮಾರ್ಗದರ್ಶಕವಾಗಿವೆ ಎಂದರು.