ಜಿಲ್ಲಾ ದಸ್ತಾವೇಜು ಬರಹಗಾರರ ಸಂಘದಿAದ ಈಚೆಗೆ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಶ್ವಕ್‌ಆಹ್ಮದ್, ರುದ್ರಸ್ವಾಮಿ,ಗೋವಿಂದ ಮೂರ್ತಿ,ಕೆಂಚಪ್ಪ,ದಯಾನAದ,ಚAದ್ರಪ್ಪ,ಮAಜುನಾಥ್ ಇತರರು ಇದ್ದರು.
- ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ ಒತ್ತಾಯ
- ಕಂದಾಯ ಇಲಾಖೆ ನಡೆಗೆ ತೀವ್ರ ಆಕ್ಷೇಪ
- ಉಪ ನೋಂದಣಾಽಕಾರಿ ಕಚೇರಿ
ಚಿತ್ರದುರ್ಗ: ಕಾಗದ ಹಾಗೂ ಮುಖರಹಿತ ನೋಂದಣಿ ಅನುಷ್ಠಾನಕ್ಕೆ ಮುಂದಾಗಿರುವ ಕಂದಾಯ ಇಲಾಖೆ ನಡೆಯನ್ನು ವಿರೋಽ ಸಿರುವ ಜಿಲ್ಲಾ ದಸ್ತಾವೇಜು ಬರಹಗಾರರ ಸಂಘ, ಈ ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕೆAದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಆಶ್ವಕ್‌ಆಹ್ಮದ್, ಮೇ ೨೦ ರಿಂದ ಚಾಮರಾಜ ನ ಗರ ಜಿಲ್ಲೆಯ ಕೆಲವು ಉಪ ನೋಂದಣಾಽಕಾರಿ ಕಚೇರಿಗಳಲ್ಲಿ ಎಲ್ಲ ದಸ್ತಾವೇಜುಗಳನ್ನು ಕಾಗದರಹಿತ, ಮುಖರಹಿತ ನೋಂ ದಣಿ ನಡೆಯಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಆದರೆ, ಕಾಗದ ರಹಿತ ನೋಂದಣಿ ಕುರಿತು ಸರ್ಕಾರ ಯಾವುದೇ ಮುನ್ಸೂಚನೆಯನ್ನಾಗಲಿ ಅಥವಾ ಸಾರ್ವಜನಿಕರ ಅಭಿಪ್ರಾಯ ವನ್ನಾಗಲೀ ಸಂಗ್ರಹಿಸಿಲ್ಲ. ಕಾಗದ ರಹಿತ ನೋಂದಣಿಯಿAದ ಸಾರ್ವಜನಿಕರಿಗೆ ಅಗುವ ಆನಾನುಕೂಲದ ಬಗ್ಗೆಯೂ ಚರ್ಚಿಸಿಲ್ಲ. ಹೊಸ ಪದ್ಧಯಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ ಎಂದರು.
ಕಾವೇರಿ ೨.೦ ತತ್ರಾಂಶದಲ್ಲಿ ಕಾಗದರಹಿತ/ಮುಖರಹಿತ ನೋಂದಣಿಯಿAದ ಎಲ್ಲ ದಸ್ತಾವೇಜುಗಳು ಡಿಜಿಲಾಕರ್‌ನಲ್ಲಿ ಸೇವ್ ಅಗಲಿವೆ. ಆದರೆ, ಪಕ್ಷಗಾರರಿಗೆ/ಖರೀದಿದಾರಿಗೆ ಯಾವುದೇ ರೀತಿಯ ಭೌತಿಕ ದಾಖಲೆ ದೂರೆಯುವುದಿಲ್ಲ. ಒಂದು ವೇಳೆ ಖರೀದಿ ದಾರರು ನೋಂದಣಿಯಾದ ೨೩ ದಿನಗಳಲ್ಲಿ ಮÊತಪಟ್ಟರೆ ಆತನ ವಾರಸುದಾರರಿಗೆ ಇದರ ಮಾಹಿತಿ ಹೇಗೆ ತಿಳಿಯುತ್ತದೆ?
ಕಾಗದ ರಹಿತ/ಮುಖರಹಿತ ನೋಂದಣಿಯಲ್ಲಿ ಭೌತಿಕವಾಗಿ ಮಾರಾಟಗಾರರ, ಖರೀದಿದಾರರ ಸಹಿ ಇರುವುದಿಲ್ಲ. ಈ ರೀತಿಯಲ್ಲಿ ನೋಂದಣಿಗಳಾದರೆ ಭೂ ಮಾಫಿಯಾ ಮತ್ತು ಹ್ಯಾಕರ್‌ಗಳಿಗೆ ಅನುಕೂಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ರುದ್ರಸ್ವಾಮಿ ಮಾತನಾಡಿ, ಹೊಸ ಪದ್ಧತಿಯಿಂದ ಸಾಲ ಪಡೆಯಲು ಅನಾನುಕೂಲವಾಗಲಿದೆ. ಭೌತಿಕ ಸಹಿ ಬದಲು ಡಿಜಿಟಲ್ ಸಹಿ ಮಾಡಬೇಕಾಗುತ್ತದೆ. ಡಿಜಿಟಲ್‌ಸೈನ್‌ಗೆ ಕನಿಷ್ಠ ೨೦೦೦ ರೂ. ಖರ್ಚಾಗಲಿದೆ ಹಾಗೂ ನೋಂದಣಿಗೆ ೮೦೦-೯೦೦ ರೂ. ಸ್ಕ್ಯಾನಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ. ಈಗಿರುವ ಪದ್ಧತಿಯಲ್ಲಿ ೩೫೦ ರೂ. ಶುಲ್ಕವಿದೆ. ಕಂದಾಯ ಸಚಿವರ ನಿರ್ಧಾರ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಸಲಹೆಗಾರ ಗೋವಿಂದಮೂರ್ತಿ ಮಾತನಾಡಿ, ಹಾಲಿ ಇರುವ ಕಾವೇರಿ ತಂತ್ರಾAಶದಿAದಲೇ ನೋಂದಣಿ ನಡೆಯ ಬೇಕೆಂದು ರಾಜ್ಯ ಸರ್ಕಾರವನ್ನು ವಿನಂತಿಸಿದರು. ಕೆAಚಪ್ಪ, ದಯಾನಂದ, ಚಂದ್ರಪ್ಪ, ಮಂಜುನಾಥ್ ಇತರರು ಇದ್ದರು.