ರೆಡ್ಡಿ ಜನಸಂಘ ಚಿತ್ರದುರ್ಗದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಂಘದ ಅಧ್ಯಕ್ಷ, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಉಪಾಧ್ಯಕ್ಷ ಎಂ.ಕೆ. ಅನಂತರೆಡ್ಡಿ, ಕಾರ್ಯದರ್ಶಿ ಜೆ. ಪರಶುರಾಮ್, ಖಜಾಂಚಿ ಜಿ.ವೈ. ಸುರೇಶ್‌ಕುಮಾರ್, ಸದಸ್ಯರು ಇದ್ದರು.
- ಚಳ್ಳಕೆರೆ ರಸ್ತೆಯಲ್ಲಿ ಮಾದರಿ ಶಾಲೆ ಆರಂಭಕ್ಕೆ ಯೋಜನೆ
- ಪ್ರತಿಭಾ ಪುರಸ್ಕಾರ ಸಮಾರಂಭ
- ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಘೋಷಣೆ
ಚಿತ್ರದುರ್ಗ: ದಾವಣಗೆರೆ, ಚಳ್ಳಕೆರೆ ಹಾಗೂ ಜಗಳೂರಲ್ಲಿ ಅಂದಾಜು ೧೨ ಕೋಟಿ ರೂ. ವೆಚ್ಚದಲ್ಲಿ ಸಂಘದಿAದ ಹೊಸ ಕಟ್ಟಡ ಗಳನ್ನು ನಿರ್ಮಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷರು, ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಸಂಘದ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಗೌರವಿಸಿ ಮಾತನಾಡಿದರು.
ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಘದಿAದ ಶಿಕ್ಷಣಕ್ಕೆ ಸಂಬAಽಸಿದAತೆ ನಾನಾ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಹಿರಿಯೂರು ತಾಲೂಕು ಮರಡಿಹಳ್ಳಿ ಕೆಪಿಎಸ್ ಶಾಲೆಯ ೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾ ಗುವಂತೆ ೨ ಬಸ್‌ಗಳನ್ನು ಸಂಘದಿAದ ಒದಗಿಸಲಾಗುವುದು. ೮೦ಕ್ಕೂ ಹೆಚ್ಚು ವರ್ಷಗಳ ಹಿಂದೆ ಸಿದ್ಧಪಡಿಸಿದ ಬೈಲಾದಂತೆ ಸಂಘದಿAದ ಪ್ರತಿ ವರ್ಷ ಶೈಕ್ಷಣಿಕ ಉದ್ದೇಶಗಳಿಗೆ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ-ಚಳ್ಳಕೆರೆ ನಡುವೆ ಸಂಘದಿAದ ಅತ್ಯಾಧುನಿಕ ಮಾದರಿ ಹೊಸ ಶಾಲೆಯೊಂದನ್ನು ಆರಂಭಿಸಲು ಅಂದಾಜು ೫ ಕೋಟಿ ರೂ.ವೆಚ್ಚದಲ್ಲಿ ೯ ಎಕರೆ ಜಮೀನು ಖರೀದಿಸಲಾಗಿದೆ. ಕಳೆದ ಡಿಸೆಂಬರ್ ೨೫ ರಂದು ನಗರದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ೧೬೪ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿದೆ.
ಈಗ ೩೯ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ. ಸಂಘದ ಸದಸ್ಯರ ಅಪೇಕ್ಷೆ ಮೇರೆಗೆ ೨ನೇ ಬಾರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಪ್ಪಾರೆಡ್ಡಿ ವಿವರಿಸಿದರು.
ಸಂಘದ ಕಾರ್ಯದರ್ಶಿ ಜೆ. ಪರಶುರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ.ಕೆ. ಅನಂತರೆಡ್ಡಿ ಸ್ವಾಗತಿಸಿ ದರು. ಸದಸ್ಯರಾದ ಡಾ.ಎಸ್.ಎನ್. ಹರೀಶ್ ವಂದಿಸಿ, ಆರ್.ವಿ. ಮಾರುತೇಶ್‌ರೆಡ್ಡಿ ನಿರೂಪಿಸಿದರು.
ಖಜಾಂಚಿ ಜಿ.ವೈ. ಸುರೇಶ್, ಸದಸ್ಯರಾದ ವಿ.ಆರ್. ಮಂಜುನಾಥ್, ಕೆ.ಎಚ್. ಸುದರ್ಶನರೆಡ್ಡಿ, ಪಿ. ಚಂದ್ರಾರೆಡ್ಡಿ, ಜಿ.ಟಿ. ತಿಪ್ಪೇಶ್, ಆರ್.ಎನ್. ವೇಣುಗೋಪಾಲ್, ಸುಜಾತ ಜೀವತೇಶರೆಡ್ಡಿ, ರೂಪಾಮುಕುಂದರೆಡ್ಡಿ, ಸುಮನಾ ತಿಮ್ಮಾರೆಡ್ಡಿ, ಇಂದಿರಮ್ಮ ಗೋವಿಂದಸ್ವಾಮಿ, ಚೈತ್ರಾ ಪ್ರಾರ್ಥಿಸಿದರು. ವಿದ್ಯಾರ್ಥಿ ತನುಷ್ ತಮ್ಮ ಅನಿಸಿಕೆ ಹಂಚಿಕೊAಡರು.