ಚಳ್ಳಕೆರೆ ತಾಲೂಕು ಪರಶುರಾಮಪುರ ಮಾರ್ಗದ ಕೊರ್ಲಕುಂಟೆ ಕಾನೆಹಳ್ಳಕ್ಕೆ ಸೇತುವೆ 
ಚಿತ್ರದುರ್ಗ

೪೬.೫೦ ಕೋಟಿ ರೂ.ವೆಚ್ಚದಲ್ಲಿ ಹೊಸ ಸೇತುವೆಗಳ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಸದನದಲ್ಲಿ ಲೋಕೋಪಯೋಗಿ ಸಚಿವ ಸತೀಶ್‌ಜಾರಕಿ ಹೊಳಿ ಹೇಳಿಕೆ
  • ಗಮನ ಸೆಳೆಯುವ ಸೂಚನೆ
  • ಚಳ್ಳಕೆರೆ ತಾಲೂಕಿನಲ್ಲಿ ಶಿಥಿಲ ಸೇತುವೆಗಳೆಡೆ ಶಾಸಕರ ಆತಂಕ
ಚಿತ್ರದುರ್ಗ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಸೇತುವೆಗಳ ಜಾಗದಲ್ಲಿ ಹೊಸದಾಗಿ ನಿರ್ಮಾಣ ಮಾಡ ಲು ಆದ್ಯತೆ ಮೇಲೆ ಕ್ರಮವಹಿಸಲಾಗಿದೆ ಕ್ರಮವಹಿಸಿದ್ದು, ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಅಽವೇಶನದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಗಮನ ಸೆಳೆಯುವ ಸೂಚನೆ ಕುರಿತ ಪ್ರಸ್ತಾಪಕ್ಕೆ ಸಚಿವ ಸತೀಶ್‌ ಜಾರಕಿ ಹೊಳಿ ಉತ್ತರಿಸಿದ್ದಾರೆ.
ಚಳ್ಳಕೆರೆ ತಾಲೂಕು ರಾಷ್ಟಿçÃಯ ಹೆದ್ದಾರಿ ೧೫೦ ಎ ವ್ಯಾಪ್ತಿಯ ಓಬಳಾಪುರದಿಂದ ಪಗಡಲಬಂಡೆ, ಕರ‍್ಲಕುಂಟೆ, ಪರಶುರಾಂಪುರ, ದೊಡ್ಡಚೆಲ್ಲೂರು ಕಿ.ಮೀ. ೭೪.೯೨ರಲ್ಲಿರುವ ವೇದಾವತಿ ನದಿ ಸೇತುವೆ ೪೩ ವರ್ಷಗಳಷ್ಟು ಹಳೆಯದಾಗಿದೆ. ಶಿಥಿಲಗೊಂಡಿದ್ದು ಅಪಾಯದಂಚಿಗೆ ತಲುಪಿದೆ.
ಈ ಸೇತುವೆ ಸುತ್ತಮುತ್ತಲಿನ ೨೫-೩೦ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ್ದು, ಹೊಸ ಸೇತುವೆ ನಿರ್ಮಾಣದ ಅಗತ್ಯವಿದೆ. ಪರಶು ರಾಂಪುರ, ಕರ‍್ಲಕುಂಟೆಯ (೧೭.೯೦ ಕಿ.ಮೀ ಉದ್ದದ)ಕೆಳ ಸೇತುವೆ ಶಿಥಿಲಗೊಂಡಿದ್ದು, ೨೦೨೨-೨೩ನೇ ಸಾಲಿನಲ್ಲಿ ಮಳೆಗಾಲ ದಲ್ಲಿ ಪಾದಚಾರಿಗಳಿಬ್ಬರು ಮೃತಪಟ್ಟಿದ್ದಾರೆ ಎಂದು ಶಾಸಕರು ಸಚಿವರ ಗಮನ ಸೆಳೆದರು.
ಚಳ್ಳಕೆರೆ(ರಾ.ಹೆ.೧೫೦ಎ) ಯಿಂದ ವಿಶ್ವನಾಥನಹಳ್ಳಿ ರಸ್ತೆ (ರಾಜ್ಯ ಹೆ.೨೪೩) ಕಿ.ಮೀ. ೭೫.೩೦ ರಲ್ಲಿ ಹೊಸ ಸೇತುವೆ ನಿರ್ಮಾಣ ಕ್ಕೆ ೬೫೦. ಲಕ್ಷ ರೂ.ಗಳಿಗೆ ಹಾಗೂ ದೊಡ್ಡೇರಿ ಓಬೇನಹಳ್ಳಿ ರಸ್ತೆ ಮಾರ್ಗ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟಿ, ಕೋನಿಗರಹಳ್ಳಿ, ಗೋಸಿ ಕೆರೆ ಕಾವಲ್, ಗೋಸಿಕೆರೆ, ಚಿಕ್ಕಚೆಲ್ಲೂರು(ಜಿಲ್ಲಾ ಮುಖ್ಯರಸ್ತೆ)ಕಿ.ಮೀ.೧೮ರಲ್ಲಿ ಹೊಸ ಸೇತುವೆ ನಿರ್ಮಾ ಣಕ್ಕೆ ೪೦೦೦ ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇವುಗಳ ನಿರ್ಮಾಣಕ್ಕೆ ಅನುದಾನ ಅನುಮೋದನೆಗೆ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದು ಸಚಿವರು ತಿಳಿಸಿದರು.
೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಸೇತುವೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕೆ ೧೦೦೦ ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆ ಕಳೆದ ನ.೨೨ ರಂದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಸೇತುವೆಗಳ ಪುನರ್ ನಿರ್ಮಾಣ, ಪುನಶ್ಚೇತನಕ್ಕೆ ೨೦೦೦ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹಂತ ಹಂತವಾಗಿ ಕಾಮಗಾರಿಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ. ಸೇತುವೆ ಪುನಶ್ವೇತನ, ಪುನರ್ ನಿರ್ಮಾಣಕ್ಕೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.