ಚಿತ್ರದುರ್ಗದಲ್ಲಿ ಬುಧವಾರ ಎಸ್‌ಐಆರ್ ಕುರಿತು ಕೆಪಿಸಿಸಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಿ.ಟಿ. ಪರಮೇಶ್ವರ ನಾಯ್ಕ್ ಮಾತನಾಡಿದರು. ಕೆ.ಸಿ. ವೀರೇಂದ್ರಪಪ್ಪಿ, ಎಂ.ಕೆ. ತಾಜ್‌ಪೀರ್, ಡಾ.ಬಿ. ತಿಪ್ಪೇಸ್ವಾಮಿ, ಹಾಲಸ್ವಾಮಿ, ಶಿವಣ್ಣ ಇತರರಿದ್ದರು. 
ಚಿತ್ರದುರ್ಗ

ಎಸ್‌ಐಆರ್ ಮೂಲಕ ಚುನಾವಣೆ ಗೆಲುವಿಗೆ ಷಡ್ಯಂತ್ರ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ವಿರುದ್ಧ ಮಾಜಿ ಸಚಿವ ಪರಮೇಶ್ವರ ನಾಯ್ಕ್ ಆರೋಪ
  • ದುರ್ಗದಲ್ಲಿ ಕೆಪಿಸಿಸಿಯಿಂದ ಜಾಗೃತಿ ಸಭೆ
  • ಗೆಲುವಿಗೆ ಷಡ್ಯಂತ್ರ
ಚಿತ್ರದುರ್ಗ: ಎಸ್‌ಐಆರ್ ಬಿಜೆಪಿಗರು ಪರೋಕ್ಷವಾಗಿ ಚುನಾವಣೆ ಗೆಲ್ಲಲ್ಲು ರೂಪಿಸಿರುವ ಷಡ್ಯಂತ್ರ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಆರೋಪಿಸಿದರು.
ಲಿಡ್ಕರ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಬುಧವಾರ ಆಯೋಜಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಮತದಾನ ಪ್ರಕ್ರಿಯೆಯನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಇತ್ತೀಚೆಗೆ ನಡೆದ ಬಿಹಾರ ಹಾಗೂ ಪಶ್ಚಿಮ ಬಂಗಾಳ ಚು ನಾವಣೆಯಲ್ಲಿ ಸಾಕಷ್ಟು ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟು ಚುನಾವಣೆಯಲ್ಲಿ ಗೆದ್ದಿz್ದÁರೆ. ಇದರ ವಿರುದ್ಧ ಜಾ ಗೃತ ಗದಿದ್ದರೆ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಹಾರದಲ್ಲಿ ೪೭ ಲಕ್ಷ, ತಮಿಳುನಾಡಿನಲ್ಲಿ ೭೪ ಲಕ್ಷ, ಗುಜರಾತ್‌ನಲ್ಲಿ ೧೨ ಲಕ್ಷ, ಪಶ್ಚಿಮ ಬಂಗಾಳದಲ್ಲಿ ೯೬ ಲಕ್ಷ ಮತದಾರರ ನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಮಹಾರಾಷ್ಟç, ಕರ್ನಾಟಕದಲ್ಲೂ ಎಸ್‌ಐಆರ್ ಮೂಲಕ ಅಽಕಾರ ಹಿಡಿಯುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎಸ್‌ಐಆರ್ ವಿರುದ್ಧ ಜನಾಂದೋಲನ ರೂಪಿಸಲು ಹೊರಟಿದೆ ಎಂದರು.
ಆಯೋಗ ರಾಜ್ಯದಲ್ಲಿ ನಡೆಸಲಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ನೋಂದಣಿಯಾದರೆ ಮಾತ್ರ ನಾವೆಲ್ಲರೂ ಮತಪಟ್ಟಿಯಲ್ಲಿ ಉಳಿ ಯಲು ಸಾಧ್ಯ. ಹೀಗಾಗಿ ಪಕ್ಷದ ಪದಾಽಕಾರಿಗಳು, ಕಾರ್ಯಕರ್ತರು, ಬಿಎಲï‌ಎ-೨ಗಳು ಜವಾಬ್ದಾರಿಯಿಂದ ಜಾಗೃತಿ ಮೂಡಿ ಸಬೇಕು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಸೂಕ್ತ ದಾಖಲೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಗರಿಗೆ ಈ ದೇಶದ ರೈತರ, ದಲಿತರ, ಮಹಿಳೆಯರ ಹಿತಕ್ಕಿಂತ ಅಽಕಾರ ಮುಖ್ಯವಾಗಿದೆ. ಹೀಗಾಗಿ ಹಾಲಿ ಸಿಎಂಗಳನ್ನೇ ಸೋಲಿಸಿ ಆಡಳಿತಕ್ಕೇರಲು ಕುತಂತ್ರ ನಡೆಸಿz್ದÁರೆ. ಕೇಂದ್ರ ಚುನಾವಣಾ ಆಯೋಗ, ಇಡಿ, ಸಿಐಡಿ ಸೇರಿ ಸಂವಿಧಾನಿಕ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಗಳಾಗಿವೆ ಎಂದು ವಾಗ್ದಾಳಿ ನಡೆಸಿದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾ ಬ್ದಾರಿ ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತರದ್ದಾಗಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪಕ್ಷದ ಜಿ¯್ಲÁಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಸ್ವಾತಂತ್ರ‍್ಯಾನAತರದಿAದಲೂ ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತಲೇ ಬಂದಿದೆ. ಆದರೀಗ ಬಿಜೆಪಿಯ ಹುನ್ನಾರದಿಂದ ಎಸ್‌ಐಆರ್ ಜಾರಿಯಾಗಿದೆ. ಮುಂಬರುವ ಎಲ್ಲ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಈ ಕುರಿತು ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮಹಿಳಾ ವಿಭಾಗದ ಜಿ¯್ಲÁಧ್ಯಕ್ಷೆ ಗೀತಾ ನಂದಿನಿಗೌಡ, ಪದಾಽಕಾರಿಗಳಾದ ಹನುಮಲಿ ಷಣ್ಮುಖಪ್ಪ, ಕೆ.ಎಂ.ಹಾಲ ಸ್ವಾಮಿ, ಸಂಪತ್‌ಕುಮಾರ್, ಡಾ.ಬಿ. ತಿಪ್ಪೇಸ್ವಾಮಿ, ಆರ್. ಶಿವಣ್ಣ, ಆರ್. ಪ್ರಕಾಶ್, ಲಕ್ಷಿ÷್ಮÃಕಾಂತ, ವೆಂಕಟೇಶ್, ಡಿ.ಎನ್. ಮೈಲಾರಪ್ಪ, ಕೃಷ್ಣಪ್ಪ ಇತರರು ಇದ್ದರು.