ಸಾಹಿತಿ ಡಾ.ಜಿ.ಎಂ.ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ ಜಯದೇವ ಸಿರಿ ನಾಟಕ ಕೃತಿಯನ್ನು ಚಿತ್ರದುರ್ಗದಲ್ಲಿ ಶನಿವಾರ ಡಾ. ಬಸವಕುಮಾರ ಸ್ವಾಮೀಜಿ ಅನಾವರಣಗೊಳಿಸಿದರು. ಎಎಸ್‌ಪಿ ಡಾ. ಶಿವಕುಮಾರ್, ರಾಧಾಕೃಷ್ಣ ಪಲ್ಲಕ್ಕಿ, ಚಳ್ಳಕೆರೆ ರ‍್ರಿಸ್ವಾಮಿ, ತೋಟಪ್ಪ ಉತ್ತಂಗಿ, ಕೋಕಿಲಾ ರುದ್ರಮೂರ್ತಿ ಇತರರು ಇದ್ದರು.
- ಡಾ.ಬಸವಕುಮಾರ ಸ್ವಾಮೀಜಿ ಹೇಳಿಕೆ
- ಬೇಕಿದೆ ಶ್ರೀಗಳ ಕುರಿತ ಸಂಶೋಧನಾ ಕೃತಿ
- `ಜಯದೇವ ಸಿರಿ' ನಾಟಕ ಕೃತಿ ಅನಾವರಣ
ಚಿತ್ರದುರ್ಗ: ಮುರುಘಾಮಠದ ಹಿಂದಿನ ಪೀಠಾಽÃಪತಿ ಜಗದ್ಗುರು ಶ್ರೀ ಜಯದೇವ ಸ್ವಾಮೀಜಿ ಅವರ ಸಾಧನೆ ಅನೇಕರಿಗೆ ತಿಳಿದಿಲ್ಲ ಎಂದು ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು.
ಮಹಾ ಮಾನತವಾದಿ, ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಐಎಂಎ ಸಭಾಂಗಣದಲ್ಲಿ ಜಯದೇವ ಶ್ರೀಗಳ ಕುರಿತು ಸಾಹಿತಿ ಡಾ.ಜಿ.ಎಂ. ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ ಜಯದೇವ ಸಿರಿ ನಾಟಕ ಕೃತಿ ಅನಾವರಣಗೊಳಿಸಿ ಮಾತನಾಡಿದರು.
ಶ್ರೀಮಠದಲ್ಲಿ ಜಯದೇವ ಶ್ರೀಗಳ ಮೂರ್ತಿ ಪ್ರತಿಷ್ಠಾಪಿಸುವ ಚಿಂತನೆ ನಡೆದಿದೆ. ನಗರದ ಜೆಎಂಐಟಿ ಸರ್ಕಲ್‌ನಲ್ಲೂ ೫೦ ಲಕ್ಷ ರೂ. ವೆಚ್ಚದಲ್ಲಿ ಜಯದೇವ ಶ್ರೀಗಳ ಮೂರ್ತಿ ಸ್ಥಾಪಿಸಲಾಗುವುದು. ಶ್ರೀಗಳ ಕುರಿತು ಸಂಶೋಧನಾ ಕೃತಿ ರಚನೆಯಾಗಬೇಕಿದೆ ಎಂದರು.
ಕೃತಿ ಕುರಿತು ಎಎಸ್‌ಪಿ ಡಾ.ಶಿವಕುಮಾರ್ ಮಾತನಾಡಿ, ನಾಟಕ ಜನಮನ ತಲುಪುತ್ತದೆ. ಜನರಿಗೆ ಸಂದೇಶಗಳನ್ನು ಶೀಘ್ರ ತಿಳಿ ಸಲು ನೆರವಾಗುತ್ತದೆ. ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ ಕೃತಿಯಲ್ಲಿ ಜಯದೇವ ಶ್ರೀಗಳ ಕುರಿತಾದ ವಿವರಣೆ ಇದೆ ಎಂದರು.
ಮಲ್ಲಿಕಾರ್ಜುನಪ್ಪ ಅವರು ಮಾತನಾಡಿ, ಜಯದೇವ ಶ್ರೀಗಳು ಆಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರಧಾರೆಗಳನ್ನು ಹೊಂದಿದ್ದರು ಎಂದರು.
ಸನ್ಮಾನ ಸ್ವೀಕರಿಸಿದ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿದರು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ. ವೀರೇಶ್, ಎಸ್.ನಿಜಲಿಂಗಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆಇಬಿ ಷಣ್ಮುಖಪ್ಪ, ಪತ್ರಕರ್ತ ಜಡೇಕುಂಟೆ ಮಂಜುನಾಥ್, ಚಿತ್ರದುರ್ಗ ಸೈನ್ಸ್ -Ëಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ರ‍್ರಿಸ್ವಾಮಿ, ವೀರಶೈವ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್, ಉಮಾರಮೇಶ್ ಇತರರು ಇದ್ದರು.
ಜಮುರಾ ಕಲಾವಿದರಾದ ತೋಟಪ್ಪ ಉತ್ತಂಗಿ ಹಾಗೂ ಕೋಕಿಲಾ ರುದ್ರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಶೈಲಜಾ ನಿರೂಪಿಸಿದರು.
ಚಿತ್ರದುರ್ಗ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಗಜ್ಯೋತಿ ಶ್ರೀಬಸವೇಶ್ವರರ ಜಯಂತಿ ನಿಮಿತ್ತ ವಚನ ಪಠಣ ಹಾ ಗೂ ಬಸವಜಯಂತ್ಯುತ್ಸವ ಆಯೋಜಿಸಲಾಗಿತ್ತು. ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕಿ ಪ್ರೊ.ವಿ. ಅನುಷಾ, ಡಾ. ಕೆ.ಬಿ. ಸಿದ್ದೇಶ್, ಡಾ.ಬಿ.ಜಿ. ಕುಮಾರಸ್ವಾಮಿ, ಡಾ.ಟಿ.ವಿ. ಅರವಿಂದ, ಡಾ.ಎಚ್.ಜೆ. ಲೋಕೇಶ್, ಡಾ.ಜೆ.ಎಂ. ಶ್ರೀಶೈಲ, ಎಂ. ಪಲ್ಲವಿ, ಡಾ.ಎಸ್. ಚೇತನ್ ಇತರರು ಇದ್ದರು.