ಚಿತ್ರದುರ್ಗ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್ಐಆರ್)ವೇಳೆ ದೇಶದ ೧೩ ಕೋಟಿ ಮತದಾರರು ಸಾಂವಿಧಾನಾತ್ಮಕ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಕಾಂಗ್ರೆಸ್ ವೋಟ್ ಬಚಾವೋ ದೇಶ ಬಚಾವೋ ಅಭಿಯಾನದ ಕರ್ನಾಟಕ ಉಸ್ತುವಾರಿ ದೀಪ್ತಿ ಮೇರಿ ವರ್ಗಿಸ್ ಅವರು ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟಿçÃಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ ಅವರ ಕಾರ್ಯವೈಖರಿಯಿಂದ ಪಶ್ಚಿಮಬಂಗಾಳ, ಕರ್ನಾಟಕ, ಮಹಾರಾಷ್ಟç ಸೇರಿ ದೇಶದಾದ್ಯಂತ ಕೋಟ್ಯಂತರ ಮತದಾರರ ಹೆಸರನ್ನು ಮತ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದರು.
ಮತಪಟ್ಟಿಯಿಂದ ಹೆಸರು ಕೈಬಿಟ್ಟಿರುವ ದೇಶದ ಕೋಟ್ಯಂತರ ಮತದಾರರಿಗೆ ನ್ಯಾಯ ಸಿಗುವವರೆಗೆ ಇತರ ಪ್ರತಿ ಪಕ್ಷಗಳೊಂದಿಗೆ ಕಾಂಗ್ರೆಸ್, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ಗಾಂಽ ನೇತೃತ್ವದಲ್ಲಿ ವೋಟ್ ಬಚಾವೋ ದೇಶ ಬಚಾವೋ ಅಭಿಯಾನದ ಅಂಗವಾಗಿ ಹೊಸದಿಲ್ಲಿಯಲ್ಲಿ ನವೆಂಬರ್೧ರAದು ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಪಂ, ವಾರ್ಡ್ ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಜ್ಞಾನೇಶ್ಕುಮಾರ್ ಅವರ ಏಕಪಕ್ಷೀಯ ನಡೆ ವಿರೋಽಸಿ, ಇನ್ನಿಬ್ಬರು ಚುನಾವಣಾ ಆಯುಕ್ತರು ತಮ್ಮ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ಅವರ ಬೆಂಬಲಕ್ಕೆ ನಿಂತಿರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಮತಪಟ್ಟಿಯಿಂದ ಹೆಸರು ಡಿಲಿಟ್ ಮಾಡಿಸುವ ಬಿಜೆಪಿ ಹುನ್ನಾರದ ವಿರುದ್ಧ ಜನರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು. ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಂವಿಧಾನಬದ್ಧ ಹಕ್ಕನ್ನು ಮತದಾರರಿಗೆ ಕೊಡಿಸಬೇಕು ಎಂದು ವರ್ಗಿಸ್ ಅವರು ಹೇಳಿದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ, ಮಾಜಿ ಶಾಸಕ ಉಮಾಪತಿ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಬಿ. ಯೋಗೇಶ್ಬಾಬು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಡಿಸಿಸಿ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಹಾಲಸ್ವಾಮಿ, ಒ. ಶಂಕರ್, ಗೀತಾನಂದಿನಿಗೌಡ, ಕಾರೇಹಳ್ಳಿ ಉಲ್ಲಾಸ್, ನರಸಿಂಹರಾಜು, ಅಮೃತೇಶ್ವರಸ್ವಾಮಿ, ರಾಮಕೃಷ್ಣಪ್ಪ, ನಿಖಿಲ್ರಾಜ್ ಮೌರ್ಯ, ಎನ್.ಡಿ. ಕುಮಾರ್, ಎಚ್. ಅಂಜಿನಪ್ಪ, ಸಂಪತ್ಕುಮಾರ್, ನಜ್ಮತಾಜ್, ಎಸ್.ಎನ್. ರವಿಕುಮಾರ್, ಮಂಜುನಾಥ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.