ಹಿರಿಯೂರು: ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸಂಟಿತ ಹೋರಾಟ ವಾಡಿದರೆ ಮುಂಬರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಮಸ್ಕಲ್ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ವಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಮೂಲಕ ಸವಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಒದಗಿಸಲಾಗಿದೆ. ಚಿಕ್ಕ ಚಿಕ್ಕ ಸಮುದಾಯಗಳಿಗೂ ಸಾವಾಜಿಕ ನ್ಯಾಯ ಕಲ್ಪಿಸಲಾಗಿದೆ. ವಾಜಿ ಸಿಎಂ ಡಿ. ದೇವರಾಜ್ ಅರಸು ಕಾಲದಿಂದಲೂ ನಮ್ಮ ಉಪ್ಪಾರ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಅದರಂತೆ ನಮ್ಮ ಸಮುದಾಯವನ್ನು ಪ್ರವರ್ಗ1ಕ್ಕೆ ಸೇರಿಸಲಾಗಿತ್ತು. ಆಗಿನ ಕಾಲದಲ್ಲೇ ಎಂಎಲ್ಸಿ ಸ್ಥಾನ ನೀಡಲಾಗಿತ್ತು. ಮಂತ್ರಿ ಸ್ಥಾನವನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಪ್ಪ, ರಾಜ್ಯ ಉಪಾಧ್ಯಕ್ಷ ಕಲ್ಲೇಶ್, ಕೆಪಿಸಿಸಿ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ಕುವಾರ್, ಜಿಪಂ ವಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ಬಾಬು, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ಬಾಬು, ಯುವ ಮುಖಂಡ ಸುಹಾಸ್ ಸುಧಾಕರ್, ಖಾದಿ ರಮೇಶ್, ವೈ. ನಾಗರಾಜ್, ಆಟೋ ಗಿರೀಶ್, ಪುನೀತ್, ಅಶೋಕ್, ಕರಿಯಣ್ಣ, ಕುವಾರ್, ದಯಾನಂದ ಇತರರಿದ್ದರು.
ಈಗಾಗಲೇ ಪಶುಸಂಗೋಪನೆ ಇಲಾಖೆಯಿಂದ 3.5ಲಕ್ಷ ಕಿಟ್ ವಿತರಿಸಿದ್ದು, ಇನ್ನೂ 6ಲಕ್ಷ ಕಿಟ್ ವಿತರಿಸಲು ಸಿದ್ಧತೆ ನಡೆದಿದೆ ಎಂದು ಸಚಿವ ಸಿ. ಪುಟ್ಟರಂಗಶೆಟ್ಟಿ ಹೇಳಿದರು. ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು ಸುವಾರು 400 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಹಗರಣದಿಂದ ತಡೆ ಹಿಡಿಯಲಾಗಿತ್ತು. ಈಗ ಮತ್ತೆ 300 ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಪಶು ಆಸ್ಪತ್ರೆಗಳ ನಿರ್ವಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬೆಳಗಾವಿ ಹಾಗೂ ಕಲ್ಬುರ್ಗಿ ಜಿಲ್ಲೆಗಳಲ್ಲಿ ತಲಾ 9660 ಹಸು, ಕುರಿಗಳನ್ನು ನೀಡಲಾಗಿದೆ. ಅದರಂತೆ ಎಲ್ಲ ಜಿಲ್ಲೆಗಳಲ್ಲಿ ಕೊಡಲು ಪ್ರಯತ್ನಿಸುತ್ತೇವೆ. ರೈತರು ಹಸು ಖರೀಗೆ ಅನುದಾನ ನೀಡಲಾಗುತ್ತಿದೆ. ಹಾಲಿನ ದರ ಏರಿಕೆಯಿಂದ ರೈತರಿಗೆ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯ ಸರ್ಕಾರ ತಾಲೂಕಿನ ಉಪ್ಪಾರ ಸಮುದಾಯ ಭವನಕ್ಕೆ 2 ಕೋಟಿ ರೂ. ಅನುದಾನ ನೀಡಿದೆ. ಉಪ್ಪಾರ ಭವನದ ಸಂಪರ್ಕ ರಸ್ತೆ ಸಮಸ್ಯೆ ಕುರಿತು ಈಗ ತಾನೇ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಕ್ರಮವಹಿಸುತ್ತೇನೆ. ಸಮುದಾಯಕ್ಕೆ ಎಸ್ಟಿ ಮೀಸಲಾತಿ ಸೌಲಭ್ಯಕ್ಕೆ ವರದಿ ಸಿದ್ಧವಾಗಿದೆ. ಪರೀಶಿಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲು ಕ್ರಮವಹಿಸುತ್ತೇನೆ ಎಂದು ಪುಟ್ಟರಂಗಶೆಟ್ಟಿ ತಿಳಿಸಿದರು.
ಎಸ್ಐಆರ್ ಗೊಂದಲ ಸದ್ಯದಲ್ಲಿಯೇ ಬಗೆಹರಿಯಲಿದೆ. ಶ್ರೀದಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗಲಿದೆ. ಸಂಪ್ರದಾಯ ದಂತೆ ಕಾಂಗ್ರೆಸ್ ಪಕ್ಷದಿಂದ ಡಿ.ಸುಧಾಕರ್ ಅವರ ಕುಟುಂಬಕ್ಕೆ ಟಿಕೆಟ್ ಸಿಗಲಿದೆ. ಬಡವರ ಪರವಾಗಿ ಕೆಲಸ ವಾಡುತ್ತಿರುವ ಪಕ್ಷವನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸಬೇಕೆಂದು ಪುಟ್ಟರಂಗಶೆಟ್ಟಿ ಮನವಿ ವಾಡಿದರು.
ವಿವಿ ಸಾಗರ ಜಲಾಶಯದಿಂದ 15 ದಿನದಲ್ಲಿ ತಾಲೂಕಿನ ಬಬ್ಬೂರು ಗ್ರಾಮಕ್ಕೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಅವಶ್ಯಕತೆಯಿದ್ದರೆ ಸಿಎಸ್ಆರ್ ಅನುದಾನದಲ್ಲಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಟಕಗಳನ್ನು ನಿರ್ಮಿಸಲಾಗುವುದು. ರಸ್ತೆ ಅಭಿವೃದ್ಧಿ, ಚರಂಡಿ ಸ್ವಚ್ಛತೆ, ರುದ್ರಭೂಮಿ ಜಾಗ ಮಂಜೂರಾತಿಗೆ ಕ್ರಮ ವಹಿಸುವುದಾಗಿ ಸಚಿವ ಪುಟ್ಟರಂಗಶೆಟ್ಟಿ ತಿಳಿಸಿದರು.