ಚಿತ್ರದುರ್ಗದಲ್ಲಿ ಗುರುವಾರ ಅಂಗವಿಕಲ ಮಹಿಳಾ ಫಲಾನುಭವಿಗಳಿಗೆ ಮೋಟಾರು ದ್ವಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮದಲ್ಲಿ ಎಂಎಲ್‌ಸಿಗಳಾದ ಕೆ.ಎಸ್. ನವೀನ್, ಡಿ.ಎಸ್. ಅರುಣ್, ವೈ.ಎಂ. ಸತೀಶ್, ಡಾ.ಎಸ್. ಆಕಾಶ್, ಸಿ.ಎಸ್. ಗಾಯತ್ರಿ, ಜೆ. ವೈಶಾಲಿ, ಅರುಣಾ ಸಂಪಿಗೆ ಇತರರು ಇದ್ದರು.
- ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್ ಅಭಿಮತ
- ೧೫ ಮಹಿಳಾ ಫಲಾನುಭÀವಿಗಳಿಗೆ ದ್ವಿಚಕ್ರ ವಾಹನ ವಿತರಣೆ
- ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ
ಚಿತ್ರದುರ್ಗ: ಸರ್ಕಾರಿ ಸೌಲಭ್ಯಗಳು ಅಂಗವಿಕಲರಿಗೆ ಸಕಾಲಕ್ಕೆ ತಲುಪ ಬೇಕಾದರೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರುವ ಅವರ ನಿಖರ ಸಂಖ್ಯೆ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು ಅಗತ್ಯ ಎಂದು ಎಂಎಲ್‌ಸಿ ವೈ.ಎಂ. ಸತೀಶ್ ಹೇಳಿ ದರು.
ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಎಂಎಲ್‌ಸಿ ಕೆ.ಎಸ್.ನವೀನ್ ಅವರ ೨೦೨೫-೨೬ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇ ಶಾಭಿವೃದ್ಧಿ ಅನುದಾನದಲ್ಲಿ ಅಂಗವಿಕಲ ಮಹಿಳೆಯರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ(ರೆಟ್ರೋಫಿಟ್‌ಮೆಂಟ್ ಸಹಿತ)ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ, ನಗರ ಪುನರ್ವಸತಿ ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿರುವ ಅಂಗವಿಕಲರ ದತ್ತಾಂಶವನ್ನು ಸರಿಯಾಗಿ ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಬೇಕು. ಪ್ರಸ್ತುತ ಇಲಾಖೆಯಲ್ಲಿ ಅಂಗವಿಕಲರ ಸಮಗ್ರ ಮಾಹಿತಿ ಲ ಭ್ಯವಿಲ್ಲ. ಶೇ.೭೫ಕ್ಕಿಂತ ಹೆಚ್ಚು, ಶೇ.೪೦ರಿಂದ ೭೫ ಮತ್ತು ಶೇ.೪೦ ಕ್ಕಿಂತ ಕಡಿಮೆ ಎಂಬ ಮೂರು ಸಾಮಾನ್ಯ ವರ್ಗಗಳ ನ್ನಾಧರಿಸಿ ಸದ್ಯ ವರ್ಗೀಕರಣ ಮಾಡಲಾಗುತ್ತಿದೆ ಎಂದರು.
ಅAಗವಿಕಲರ ಕೌಶಲ, ಆಸಕ್ತಿ ಮತ್ತು ವಿಶೇಷ ಜ್ಞಾನ ಆಧರಿಸಿ ಹೊಸ ಮಾದರಿ -Áರ್ಮ್ಯಾಟ್ ಸಿದ್ಧಪಡಿಸಿ ಮಾಹಿತಿ ಕ್ರೋಡೀ ಕರಿಸಬೇಕು. ಈ ಮಾಹಿತಿ ಲಭ್ಯವಾದರೆ ಅವರಿಗೆ ಸೂಕ್ತ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಸುಲಭವಾಗಲಿದೆ. ಎಂಎಲ್‌ಸಿ ಗಳಾದ ಕೆ.ಎಸ್.ನವೀನ್, ಡಿ.ಎಸ್. ಅರುಣ್ ಮತ್ತು ನಾನು ಅಂಗವಿಕಲರ ಹಕ್ಕುಗಳಿಗಾಗಿ ನಿರಂತರ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಖಾಸಗಿ ವಿಮಾ ಕಂಪನಿಗಳು ಇವರಿಗೆ ಆರೋಗ್ಯ ವಿಮೆ ನೀಡಲು ಮುಂದೆ ಬರುತ್ತಿರಲಿಲ್ಲ. ಆದರೆ, ೨೦೨೩-೨೪ರಲ್ಲಿ ಜಾ ರಿಯಾದ ಕೇಂದ್ರದ ಮಹತ್ವದ ನಿಯಮದ ಪ್ರಕಾರ ಪ್ರತಿ ಖಾಸಗಿ ಕಂಪನಿಯೂ ಕಡ್ಡಾಯವಾಗಿ ಆರೋಗ್ಯ ವಿಮೆ ನೀಡಬೇಕು. ಒಂದು ವೇಳೆ ವಿಮೆ ನೀಡಲು ನಿರಾಕರಿಸಿದರೆ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಽಕಾರಕ್ಕೆ ದೂರು ನೀಡಬಹುದಾಗಿದೆ ಎಂದರು.
ಎAಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ಅಂಗವಿಕಲರು ಹಾಗೂ ಮಹಿಳೆಯರ ಸಬಲೀಕರಣ ಎಂದರೆ ಅವರ ಮೇಲೆ ಸಹಾನು ಭೂತಿ ತೋರಿಸುವುದಲ್ಲ. ಅವರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಮಾನ ಅವಕಾಶಗಳನ್ನು ಕಲ್ಪಿಸಿ ಕೊಡು ವುದೇ ನಿಜವಾದ ಸಬಲೀಕರಣವಾಗಿದೆ. ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಅಂಗವಿಕಲ ಮಹಿಳೆಯರಿಗೆ ಯೋಜನೆ ಗಳನ್ನು ತಲುಪಿಸಬೇಕು. ೨೦೧೧ರ ಜನಗಣತಿ ಪ್ರಕಾರ ದೇಶದಲ್ಲಿರುವ ಅಂದಾಜು ೨.೬೮ ಕೋಟಿ ಅಂಗವಿಕಲರಲ್ಲಿ ೧.೧೮ ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ ಎಂದರು.
ಎAಎಲ್‌ಸಿ ಕೆ.ಎಸ್.ನವೀನ್ ಮಾತನಾಡಿದರು. ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿಪಿಒ ಸಿ.ಎಸ್. ಗಾಯತ್ರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ, ಸಾಮಾಜಿಕ ಉದ್ಯಮಿ ಮತ್ತು ರೂಟ್ಸ್ ರಿ-Áರ್ಮ್ಸ್ ಇನಿಷಿಯೇಟಿವ್ಸ್ ಸಂಸ್ಥೆ ಸಂಸ್ಥಾಪಕಿ ಅರುಣಾ ಸಂಪಿಗೆ ಮತ್ತಿತರರು ಇದ್ದರು.
ಅಂಗವಿಕಲ ಮಹಿಳೆಯರು ಸರ್ಕಾರದ ನೆರವು ನಂಬಿ ಕೂರದೆ ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗುವುದು ಅಗತ್ಯ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಇದಕ್ಕಾಗಿ ಅವರಿಗೆ ಉದ್ಯಮಶೀಲತಾ ತರಬೇತಿ ಹಾಗೂ ಬ್ಯಾಂಕ್‌ಗಳ ಮೂಲಕ ಆರ್ಥಿಕ ನೆರವು ಕೊಡಿಸಲು ಬದ್ಧರಿದ್ದೇವೆ. ಅದಾಜು ೧.೨೫ ಲಕ್ಷ ರೂ. ವೆಚ್ಚದ ಅತ್ಯಾಧುನಿಕ ರೆಟ್ರೋಫಿಟ್‌ಮೆಂಟ್ ಅಳವಡಿಸಿದ ೧೫ ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಈ ವಾಹನವನ್ನು ತಮ್ಮ ಆರ್ಥಿಕ ಪ್ರಗತಿಗೆ ಬಳಸಿಕೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆ, ಬುದ್ಧಿವಂತಿಕೆ ಬಳಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಲು ಇದೊಂದು ಉತ್ತಮ ಸಾಧನವಾಗಿದೆ ಎಂದು ತಿಳಿಸಿದರು.
ವಾಹನ ಕೊಟ್ಟು ನಮ್ಮ ಜವಾಬ್ದಾರಿ ಮುಗಿಯಿತು ಎಂದು ನಾವು ಭಾವಿಸುವುದಿಲ್ಲ.೧೫ ಫಲಾನುಭವಿಗಳನ್ನು ಯಶಸ್ವಿ ಉದ್ಯಮಿಗಳನ್ನಾಗಿ ರೂಪಿಸಲು ಸಿದ್ಧರಿದ್ದೇವೆ. ಉದ್ಯಮಶೀಲತಾ ತರಬೇತಿ ಜತೆಗೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್, ತರಬೇತಿ ಸಂಸ್ಥೆಗಳ ಮೂಲಕ ತಲಾ ೫ ಲಕ್ಷ ರೂ. ವರೆಗೆ ಆರ್ಥಿಕ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.