ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಯನ್ನು ಗುರುವಾರ ಡಾ.ಎಸ್. ಆಕಾಶ್ ವೀಕ್ಷಿಸಿದರು. ವೈ. ರವಿಕುಮಾರ್, ಅಮರನಾಥ ಜೈನ್, ಶಿವಮೂರ್ತಿ, ಬಿ.ಸಿ. ನಾಗರಾಜ್ ಇತರರಿದ್ದರು.
- ಜಿಪಂ ಸಿಇಒ ಡಾ. ಆಕಾಶ್ ಸೂಚನೆ
- ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲನೆ
- ಗೃಹ ಬಳಕೆಗೆ ನಳ ಸಂಪರ್ಕ
ಚಿತ್ರದುರ್ಗ: ಜಲಜೀವನ್ ಮಿಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಜಿಪಂ ಸಿಇಒ ಡಾ.ಎಸ್. ಆಕಾಶ್ ಅಽಕಾರಿಗಳಿಗೆ ಸೂಚಿಸಿದರು.
ತಾಲೂಕಿನ ವಿವಿಧ ಗ್ರಾಪಂಗಳಿಗೆ ಗುರುವಾರ ಭೇಟಿ ನೀಡಿ, ಜೆಜೆಎಂ ಯೋಜನೆಯಡಿ ಗೃಹ ಬಳಕೆಗೆ ನಳ ಸಂಪರ್ಕದ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.
ಪ್ರತಿ ಮನೆಗೂ ನಳ ಸಂಪರ್ಕದ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಜೆಜೆಎಂ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಬೂದು ನೀರು ನಿರ್ವಹಣಾ ಕಾಮಗಾರಿಗಳಲ್ಲಿ ಲೋಪವೆಸಗದೆ, ನಿರ್ವಹಣಾ ಘಟಕದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ತಪ್ಪದೇ ಪ್ರತಿ ತಿಂಗಳು ಸ್ವಚ್ಛಗೊಳಿಸಬೇಕು. ೧೫ನೇ ಹಣಕಾಸು ಯೋಜನೆ ಹಾಗೂ ಇತರೆ ಅನುದಾನದಿಂದ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
ದೊಡ್ಡಸಿದ್ದವ್ವನಹಳ್ಳಿ, ಜೆ.ಎನ್. ಕೋಟೆ, ಗೋನೂರು, ಸಿದ್ಧಾಪುರ, ಇಂಗಳದಾಳ್ ಸೇರಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳ ಶಾಲೆಗಳ ಅಡುಗೆ ಕೋಣೆ, ಸ್ವಚ್ಛತೆ, ಆಹಾರ ಪದಾರ್ಥ ಹಾಗೂ ಶೌಚಗೃಹ ನಿರ್ವಹಣೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ಮತ್ತು ಹಾಜರಾತಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾರ್ಯವೈಖರಿ ಕುರಿತು ಪರಿಶೀಲಿಸಿದರು.
ಸಜ್ಜನಕೆರೆ, ಇಂಗಳದಾಳ್, ಕುಂಚಿಗನಾಳ್, ಮ¯್ಲÁಪುರದಲ್ಲಿ ಬೂದು ನೀರು ನಿರ್ವಹಣೆಗೆ ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ (ಇನ್‌ಲೈನ್ ಟ್ರಿಟ್‌ಮೆಂಟ್) ನಿರ್ಮಾಣದ ಕಾಮಗಾರಿಗಳನ್ನು ವೀಕ್ಷಿಸಿದರು.
ತಾಪಂ ಇಒ ವೈ. ರವಿಕುಮಾರ್, ಗ್ರಾಮೀಣ ಕುಡಿಯುವ ನೀರು ಇಇ ಅಮರನಾಥ ಜೈನ್, ಎಇಇ ಶಿವಮೂರ್ತಿ, ಜಿ¯್ಲÁ ಐಇಸಿ ಸಮಾಲೋಚಕ ಬಿ.ಸಿ. ನಾಗರಾಜ್ ಇತರರಿದ್ದರು.