ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು ಕರೀಕೆರೆ ತಿಪ್ಪೇಸ್ವಾಮಿ, ಕೆ.ಸಿ. ಗೌಡ, ಆನಂದ ರೆಡ್ಡಿ ಇತರರಿದ್ದರು. Protest
ಚಿತ್ರದುರ್ಗ

ಕಾಮಗಾರಿ ಪೂರ್ಣಗೊಳಿಸಿ ಕೆರೆ ತುಂಬಿಸಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಚಳ್ಳಕೆರೆ: ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸಿ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಭಾರತೀಯ ಕಿಸಾನ್​ ಸಂದ ಪದಾಧಿಕಾರಿಗಳು ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವಿಳಂಬದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಆಮೆಗತಿಯ ಕಾಮಗಾರಿಗೆ ಚುರುಕು ನೀಡಿ ಶ್ರೀ ಕೆರೆಗಳಿಗೆ ನೀರು ತುಂಬಿಸಬೇಕೆಂದು ಸಂದ ಜಿಲ್ಲಾಧ್ಯ ಕರೀಕೆರೆ ತಿಪ್ಪೇಸ್ವಾಮಿ ಆಗ್ರಹಪಡಿಸಿದರು.

ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ರೈತರನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ಪಹಣಿಗಳ ತಿದ್ದುಪಡಿ ವಿಳಂಬವಾಗುತ್ತಿವೆ, ಜಮೀನುಗಳ ದಾರಿ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಗುತ್ತಿಲ್ಲ. ಎಸ್ಸಿ, ಎಸ್ಟಿ ಜಮೀನುಗಳ ಮಾರಾಟ ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ತಾಲೂಕು ಕಚೇರಿಯಲ್ಲಿ ನೇರವಾಗಿ ಕೆಲಸಗಳು ಆಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಣ್ಣ ಕೆಲಸಗಳಿಗೂ ಸಾವಿರಾರು ರೂ. ಲಂಚ ಕೊಡಬೇಕಿದೆ ಎಂದು ದೂರಿದರು. ಕಿಸಾನ್​ ಸಂದ ಆನಂದ ರೆಡ್ಡಿ , ಟಿಎನ್​ಕೋಟೆ ಕೆ.ಸಿ. ಗೌಡ, ಗಿಡ್ಡರಂಗಪ್ಪ, ಉಮೇಶ್​ಗೌಡ, ವೆಂಕಟೇಶ್​ ರೆಡ್ಡಿ, ಮಂಜುನಾಥ ಇತರರು ಇದ್ದರು.

ರಂಗರಾಜನ್​ ವರದಿ ಜಾರಿ ಮಾಡಿ

ರಂಗರಾಜನ್​ ಕಮಿಟಿ ವರದಿಯನ್ನು ಈ ಕೂಡಲೇ ಜಾರಿ ಮಾಡಬೇಕು. ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ಶೇ.70ರಷ್ಟು ರೈತರಿಗೆ ನೀಡಬೇಕು ಎಂದು ಸಂದ ತಾಲೂಕಾಧ್ಯ ಬಿ.ಟಿ. ಉಮೇಶ್​ಗೌಡ ಒತ್ತಾಯಿಸಿದರು. ಕೇಂದ್ರ ಸರ್ಕಾರ ನೂತನವಾಗಿ ಜಾರಿ ಮಾಡಿರುವ ವಿಬಿ ಜಿ ರಾಮ್​ ಜಿ ಯೋಜನೆಯಲ್ಲಿ ರೈತರ ಹೊಲಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಮಾಡಿಕೊಡಬೇಕು. ಹಿರಿಯೂರು ತಾಲೂಕಿನ ಶಿಡ್ಲಯ್ಯನಕೋಟೆ ಡ್ಯಾಂನ ಬಲ ಮತ್ತು ಎಡ ನಾಲೆಗಳಲ್ಲಿ ಬರುವ ಗ್ರಾಮಗಳ ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ಎದುರು ಪ್ರತಿಭಟನೆ ಎಚ್ಚರಿಕೆ

ಸುಮಾರು ಐದಾರು ವರ್ಷಗಳಿಂದ ನಿರಂತರ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿಯಲ್ಲಿರುವ ರೈತರ ಬದುಕಿಗೆ ಶಾಶ್ವತ ಭದ್ರತೆ ಕಲ್ಪಿಸಬೇಕು. 2025---&-26ರ ಬೆಳೆ ವಿಮೆ ಮತ್ತು ಪರಿಹಾರ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಕೂಡಲೇ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಡಿಸಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿ.ಟಿ. ಉಮೇಶ್​ಗೌಡ ಎಚ್ಚರಿಸಿದರು.