ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್,ಡಾ. ಡಿ.ಎಂ.ಅಭಿನವ್,ಡಾ.ಬಿ.ವಿ.ಗಿರೀಶ್,ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಇತರರು ಇದ್ದರು.  
ಚಿತ್ರದುರ್ಗ

ಸೂಕ್ತ ಚಿಕಿತ್ಸೆಯಿಂದ ಟಿಬಿ ಸಂಪೂರ್ಣ ನಿರ್ಮೂಲನೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಹೇಳಿಕೆ
  • ವಿಶ್ವ ಕ್ಷಯರೋಗ ದಿನಾಚರಣೆ
  • ಆರೋಗ್ಯ ಇಲಾಖೆ
ಚಿತ್ರದುರ್ಗ: ಕ್ಷಯ ಅತ್ಯಂತ ಹಳೆಯ ಸಾಂಕ್ರಾಮಿಕ ರೋಗವಾಗಿದ್ದು,ಜಾಗೃತಿ ಮತ್ತು ಸೂಕ್ತ ಚಿಕಿತ್ಸೆ ಮೂಲಕ ಸಂಪೂರ್ಣ ನಿ ರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಹೇಳಿದರು.
ಆರೋಗ್ಯ ಇಲಾಖೆ ಹಾಗೂ ಹಜ್ ಕಮಿಟಿ ಸಹಯೋಗದಲ್ಲಿ ನಗರದ ಎಂ.ಕೆ. ಪ್ಯಾಲೇಸ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದರು.
೧೮೮೨ರಲ್ಲಿ ರಾಬರ್ಟ್ ಕೋಚ್ ಕ್ಷಯರೋಗದ ಬ್ಯಾಕ್ಟೀರಿಯಾ ಪತ್ತೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಾ.೨೪ನ್ನು ವಿಶ್ವ ಕ್ಷ ಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತನ್ನು ಒಗ್ಗೂಡಿಸಲು ಮತ್ತು ನವೀನ ಆವಿಷ್ಕಾರಗಳನ್ನು ಗೌರವಿಸಲು ಈ ದಿನಾಚರಣೆ ಪೂರಕವಾಗಿದೆ ಎಂದು ತಿಳಿಸಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು,ಕ-À, ಕ-Àದಲ್ಲಿ ರಕ್ತ ಬರುವುದು, ಸಂಜೆ ವೇಳೆ ಜ್ವರ, ಮೈ ಬೆವರುವುದು, ತೂಕ ಕಡಿಮೆ ಯಾ ಗುವುದು ಮತ್ತು ಹಸಿವಾಗದಿರುವುದು ಇತ್ಯಾದಿ ಲಕ್ಷಣಗಳಿರುವವರು ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕ-À ಪರೀಕ್ಷೆ ಮಾಡಿಸಿ ಕೊಳ್ಳಬೇಕು.
ರೋಗ ದೃಢಪಟ್ಟಲ್ಲಿ ಸರ್ಕಾರದಿಂದ ಉಚಿತ ಚಿಕಿತ್ಸೆ ಲಭ್ಯವಿದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದು ಮುಂಜಾಗ್ರತಾ ಕ್ರಮ ಗ ಳನ್ನು ಪಾಲಿಸುವ ಮೂಲಕ ರೋಗ ನಿರ್ಮೂಲನೆಗೆ, ಟಿಬಿ ಮುಕ್ತ ಭಾರತದತ್ತ ನಾವೆಲ್ಲರೂ ಒಗ್ಗೂಡಿ ಶ್ರಮಿಸ ಬೇಕಿದೆ. ಹಜ್‌ ಯಾತ್ರಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಲಸಿಕೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ಮಾತನಾಡಿ, ೧೪ರಿಂದ ೧೫ ವಷÀðದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭ ಕಂ ಠದ ಕ್ಯಾನ್ಸರ್ ಬರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ ಉಚಿತವಾಗಿ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಅರ್ಹರು ಆತಂಕವಿಲ್ಲದೆ ಇದರ ಸದುಪಯೋಗ ಪಡೆಯಬೇಕು ಎಂದರು. ತಾಲೂಕು ಆರೋಗ್ಯಾಽಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ ದರು. ಈ ವೇಳೆ ನೂರಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳಿಗೆ ಪೋಲಿಯೋ,ಇನ್ಲೂಯೆಂಜಾ ಹಾಗೂ ಮೆನಂಜೈಟಿಸ್ ಲಸಿಕೆ ನೀಡಲಾಯಿತು.
ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಧರ್ಮಗುರುಗಳಾದ ಮುಜಾ-Àರ್ ಶಕೀಲ್,ಬಶೀರ್‌ಅಹಮದ್,ಎಜಾಜ್,ಹಜ್ ಕಮಿಟಿ ಕರ‍್ಯ ದ ರ್ಶಿ ಹಾಜಿ ಆರ್.ದಾದಾಪೀರ್,ಆದಿಲ್,ಸಾಽಕ್,ಅಕ್ಬರ್,ವೈದ್ಯಾಽಕಾರಿ ಡಾ.ಸೈಯದ್ ಬಿಲಾಲ್,ಜಿಲ್ಲಾ ವಕ್ಪ್ ಅಽಕಾರಿ ಅಮ್ಜದ್, ನಿ ವÊತ್ತ ಆರೋಗ್ಯ ಶಿಕ್ಷಣಾಽಕಾರಿ ಎನ್.ಎಸ್.ಮಂಜುನಾಥ್, ಆರೋಗ್ಯ ನಿರಿಕ್ಷಣÁಽಕಾರಿ ಗಂಗಾಧರ್,ಲಸಿಕಾ ವ್ಯವಸ್ಥಾಪಕ ವೀ ರೇಶ್,ಆರೋಗ್ಯ ಶಿಕ್ಷಣÁಽಕಾರಿಗಳಾದ ಕÊಷ್ಣನಾಯ್ಕ,ಮೂಗಪ್ಪ, ಕ್ಷಯ ರೋಗ ಮೇಲ್ವಿಚಾರಕರಾದ ಮಹೇಂದ್ರ,ಮಾರುತಿ ಇತ ರರು ಇದ್ದರು.