ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿರುವ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗುರುವಾರ ಪದಕ ಪ್ರಧಾನ ಮಾಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇದ್ದಾರೆ. 
ಚಿತ್ರದುರ್ಗ

ಪಿಎಸ್‌ಐ ಸುರೇಶ್‌ಗೆ ಸಿಎಂ ಚಿನ್ನದ ಪದಕ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಚಿನ್ನದ ಪದಕ
  • ಗ್ರಾಮಾಂತರ ಠಾಣೆ
  • ಗಂಗಾವತಿ
ಚಿತ್ರದುರ್ಗ: ನಗರದ ಗ್ರಾಮಾಂತರ ಠಾಣೆ ಪಿಎಸ್‌ಐ ಸುರೇಶ್ ಅವರು ಸಿಎಂ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ೨೦೨೫ನೇ ಸಾ ಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿರುವ ರಾಜ್ಯದ ಪೊಲೀಸ್ ಅಽಕಾರಿ,ಸಿಬ್ಬಂದಿ ಹೆಸರನ್ನು ಡಿಜಿಪಿ ಡಾ.ಎಂ.ಎ. ಸಲೀA ಅವರು ಪ್ರಕಟಿಸಿದ್ದಾರೆ.
೨೦೨೦ರಲ್ಲಿ ಪೊಲೀಸ್ ತರಬೇತಿ ಪೂರ್ಣ ಬಳಿಕ ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಸೇವೆ ಆರಂಭಿಸಿರುವ ಸುರೇಶ್ ಮೂಲತಃ ಗಂಗಾ ವತಿಯವರು.
ಸೆಕೆಂಡ್ ಪಿಯುಸಿವರೆಗಿನ ಶಿಕ್ಷಣವನ್ನು ಗಂಗಾವತಿಯಲ್ಲಿ ಪೂರ್ಣಗೊಳಿಸಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿ ನಲ್ಲಿ ಬಿಎಸ್‌ಸಿ ಪದವಿ ಪಡೆದು ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಶಿವಮೊಗ್ಗದ ಬಳಿಕ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ, ಚಿತ್ರದು ರ್ಗ ನಗರ ಠಾಣೆ ಹಾಗೂ ಹೊಳಲ್ಕೆರೆ ಬಳಿಕ ಪ್ರಸ್ತುತ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.