ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದ ತೋಟಗಳಲ್ಲಿ ಅರಳುವ ಮುನ್ನ ಬಾಡಿ ನಾಶವಾಗುತ್ತಿರುವ ಸೇವಂತಿ ಹೂ. 
ಚಿತ್ರದುರ್ಗ

ರಾಜ್ಯದಲ್ಲಿ ಬರ, ರೋಗ ಬಾಧೆಯಿಂದ ನಲುಗಿದ ಸೇವಂತಿ

ಪ್ರಮುಖ ಮುಖ್ಯಾಂಶಗಳು

  • ಕೇರಳ, ಮಹಾರಾಷ್ಟçಕ್ಕೆ ರ-Á್ತಗುವ ವೇಳೆ ಶೇ. ೨೦ರಷ್ಟು ಹಾಳು
  • ಉತ್ತಮ ಬೆಲೆ ಇದ್ದರೂ ಇಳುವರಿ ಕುಂಠಿತ
  • ಬರ ಪರಿಸ್ಥಿತಿ

ಕೆ.ಎಸ್. ಪ್ರಣವಕುಮಾರ್ ಚಿತ್ರದುರ್ಗ

ರಾಜ್ಯದ ಪುಷ್ಪ ಬೆಳೆಗಾರರಿಗೆ ಅತಿ ಹೆಚ್ಚು ಲಾಭ ತಂದುಕೊಡುವ, ಪ್ರಮುಖ ವಾಣಿಜ್ಯ ಬೆಳೆ ಎಂದೇ ಖ್ಯಾತಿ ಪಡೆದಿರುವ ಹಳದಿ ಸೇವಂತಿ, ಮಳೆಯ ಅಭಾವ, ವಿವಿಧ ರೋಗ ಬಾಧೆಯಿಂದ ನಲುಗುತ್ತಿದೆ. ತೋಟಗಳಲ್ಲೇ ಗಿಡಗಳು ನೆಲ ಕಚ್ಚುತ್ತಿದ್ದು, ರೈತರನ್ನು ಕಂಗಾಲಾಗಿಸಿದೆ.
ಶ್ರಾವಣ ಮಾಸ, ವರಮಹಾಲಕ್ಷಿ÷್ಮÃ ಹಬ್ಬದಿಂದ ದೀಪಾವಳಿವರೆಗೂ ಸಾಮಾನ್ಯವಾಗಿ ಸೇವಂತಿ ಹೂವಿಗೆ ಉತ್ತಮ ದರ ಸಿಗಲಿ ದೆ. ಈ ನಿರೀಕ್ಷೆಯಲ್ಲಿ ವಾರ್ಷಿಕ ರಾಜ್ಯದಾದ್ಯಂತ ೧೮ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಸೇವಂತಿ ಬೆಳೆಯುವ ಗುರಿ ಹೊಂ ದಲಾಗಿದೆ. ಆದರೆ, ಮಳೆ ಕೊರತೆಯಿಂದ ಬಿತ್ತನೆ, ಇಳುವರಿ ನಿರೀಕ್ಷಿತ ಮಟ್ಟ ತಲುಪುವ ಸಾಧ್ಯತೆ ಇಲ್ಲ. ಅಲ್ಲದೆ, ಬೆಳೆಗಾರರ ಕೈ ಸೇರುವ ಮುನ್ನ ವಿವಿಧೆಡೆ ಅರ್ಧಕ್ಕರ್ಧ ಬೆಳೆ ಆಪೋಶನವಾಗುತ್ತಿದೆ.
ಕೋಟಿಗಟ್ಟಲೇ ಖರ್ಚು ಮಾಡಿ ಅಽಕ ಪ್ರಮಾಣದಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಹವಾಮಾನ ವೈಪರೀತ್ಯ, ಬರ ಪರಿಸ್ಥಿತಿಯಿಂ ದಾಗಿ ನೀರಿನಾಂಶ ಕೊರತೆ, ತೇವಾಂಶ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ನುಸಿ ಹಾಗೂ ಸೊರಗು ಸೇರಿ ಇತರೆ ರೋಗ ದಿಂದಾಗಿ ಬೆಳೆ -Àಲ ನೀಡುವ ಹಂತದಲ್ಲಿ ಒಣಗುತ್ತಿದ್ದು, ಭೂಮಿಗೆ ನೈವೇದ್ಯವಾಗುತ್ತಿದೆ.
ಸಾವಿರಾರು ರೈತರು ತಮ್ಮ ತೋಟಗಳಲ್ಲೇ ಗಿಡಗಳನ್ನು ಕೊಳೆಯಲು ಬಿಡುತ್ತಿದ್ದಾರೆ. ಇನ್ನಷ್ಟು ಮಂದಿ ಹಾಳಾಗುತ್ತಿರುವ ಪುಷ್ಪ ವನ್ನು ರಸ್ತೆಗೆ ಸುರಿಯುತ್ತಿದ್ದಾರೆ. ಇನ್ನು ನೀರಾವರಿ ಹೊಂದಿದ ಹೂ ಬೆಳೆಗಾರರ ತೋಟಗಳಲ್ಲೂ ಅಂತರ್ಜಲ ಕುಸಿಯುತ್ತಿದ್ದು, ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.
ಕೇರಳ, ಮಹಾರಾಷ್ಟç, ಆಂಧ್ರಪ್ರದೇಶ ಸೇರಿ ಹೊರ ರಾಜ್ಯ, ಕರ್ನಾಟಕದ ಪುಣ್ಯ ಕ್ಷೇತ್ರಗಳು, ಬೆಳಗಾವಿ ಸೇರಿ ಇನ್ನಿತರ ಜಿ¯್ಲೆಗ ಳಿಗೂ ಹೇರಳವಾಗಿ ಅನೇಕ ವರ್ಷಗಳಿಂದ ಸೇವಂತಿ ಹೂವನ್ನು ನಿತ್ಯ ರ-ÀÅ್ತ ಮಾಡಲಾಗುತ್ತಿದೆ. ಆದರೆ, ತಲುಪುವ ಮುನ್ನವೇ ದಳಗಳು ಉದುರಿ ಮಾರ್ಗ ಮಧ್ಯೆ ಶೇ. ೨೦ರಷ್ಟು ನಾಶವಾಗುತ್ತಿದೆ ಎಂಬ ಮಾಹಿತಿ ಇದೆ. ಇದರಿಂದಾಗಿಯೂ ಲಕ್ಷಾಂತರ ರೂ. ಲಾಭದ ನಿರೀಕ್ಷೆಯಲ್ಲಿರುವ ರೈತರು, ವರ್ತಕರು ಕೈ ಸುಟ್ಟುಕೊಳ್ಳುವಂತಾಗಿದೆ.
ರೈತರ ಕಿಸೆ ತುಂಬಿಸಬೇಕಿದ್ದ ಸೇವಂತಿ ಇತ್ತೀಚಿನ ವರ್ಷಗಳಲ್ಲಿ ಒಂದೆಡೆ ಅನಾವೃಷ್ಟಿ, ಮತ್ತೊಂದೆಡೆ ಅತಿವೃಷ್ಟಿ ಕಾರಣದಿಂದಾಗಿ ಹಾಳಾಗುತ್ತಿದೆ. ತೋಟಗಳಲ್ಲಿ ಅರಳುವ ಹಂತದಲ್ಲೇ ಸೇವಂತಿ ಬಾಡುತ್ತಿದ್ದು, ರೈತರ ನಿದ್ದೆಗೆಡಿಸಿದೆ. ಅಲ್ಲದೆ, ಬೆಳೆ ನಷ್ಟದಿಂದ ಹಲವರು ಸಾಲದ ಸುಳಿಗೆ ಸಿಲುಕುವಂತಾಗಿದೆ.

ಸೇವಂತಿ ಅಂಕಿ-ಅAಶ

| ರಾಜ್ಯದಲ್ಲಿ ೧೮,೬೯೧ ಹೆಕ್ಟೇರ್ ವಿಸ್ತೀರ್ಣ
| ೨,೬೧,೩೪೭ ಮೆಟ್ರಿಕ್ ಟನ್ ಉತ್ಪಾದನಾ ಗುರಿ
| ಪ್ರತಿ ಹೆಕ್ಟೇರ್‌ಗೆ ೧೩.೯೮ ಮೆಟ್ರಿಕ್ ಟನ್ ಇಳುವರಿ ನಿರೀಕ್ಷೆ
| ವಾರ್ಷಿಕ ೮೦೦ರಿಂದ ೧ಸಾವಿರ ಕೋಟಿ ರೂ. ವಹಿವಾಟು (ನಿಗದಿತ ಹೆಕ್ಟೇರ್‌ನಲ್ಲಿ ಗುರಿ ಸಾಽಸಿ ಉತ್ತಮ ಬೆಲೆ ಸಿಕ್ಕಲ್ಲಿ ಮಾತ್ರ)
===
"

*ಕೋಟ್* ೧ ಎಕರೆಯಲ್ಲಿ ಸೇವಂತಿ ಹೂ ಬೆಳೆಯಲು ಸಸಿ, ಗೊಬ್ಬರ, ಔಷಽ, ಕಳೆ, ಕೂಲಿ ಸೇರಿ ೧ ಲಕ್ಷ ರೂ. ಗೂ ಅಽಕ ಖರ್ಚಾಗಲಿದೆ. ಇಳುವರಿ ಪಡೆದವರಿಗೆ ಲಾಭವಾದರೆ, ಬೆಳೆ ನಷ್ಟ ಅನುಭವಿಸಿದವರಿಗೆ ಬಂಡವಾಳವೂ ಕೈಸೇರದ ದುಸ್ಥಿತಿ ನಿರ್ಮಾಣವಾಗಿದೆ.

— | ಕೆ.ಎಂ. ಕಾಂತರಾಜ್, ಹೂ ಬೆಳೆಗಾರ

"

ಸಗಟು ಮಾರುಕಟ್ಟೆಯಲ್ಲಿ ತಲಾ ೧ ಮಾರಿಗೆ ೨೦೦-೨೫೦ ರೂ. ಉತ್ತಮ ದರವಿದೆ. ಗುಣಮಟ್ಟದ ಆಧಾರದಲ್ಲೂ ನಿತ್ಯ ದರದಲ್ಲಿ ಏರು-ಪೇರಾಗಲಿದೆ. ಆದರೆ, ಈ ಬಾರಿ ಇಳುವರಿ ಕುಂಠಿತದಿAದಲೂ ದರ ಹೆಚ್ಚಾಗುವ ಸಾಧ್ಯತೆ ಇದೆ.

— | ಶ್ರೀನಿವಾಸ್, ಹೂ ಬೆಳೆಗಾರ