ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿನ ಬೋಧನಾ ಆಸ್ಪತ್ರೆಗೆ ಹಸ್ತಾಂತರವಾಗಿರುವ ಜಿಲ್ಲಾಸ್ಪತ್ರೆಯ ಸಿಟಿ ಸ್ಕಾ÷್ಯನ್ ಯಂತ್ರದ ಸೇ ವೆ ಬಡ ರೋಗಿಗಳಿಗೆ ಸದ್ಯಕ್ಕೆ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ.
೨೦೧೨ರಲ್ಲಿ ಸ್ಥಾಪಿಸಿದ್ದ ಛಿಜಿಜeಠಿo್ಝಜ್ಚಿಛಿ ಇS o್ಚZ್ಞ ಸಾಮರ್ಥ್ಯದ ಈ ಯಂತ್ರಕ್ಕೆ ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋ ರ್ಡ್(ಎಇಆರ್‌ಬಿ)ಪರವಾನಗಿ ಇರಲಿಲ್ಲ. ೨೦೧೭ರಲ್ಲೂ ಈ ಕುರಿತು ಬೋರ್ಡ್ ಆಸ್ಪತ್ರೆ ಅಽಕಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ ಪ್ರ ಯೋಜನವಾಗಿಲ್ಲ. ಸಿಟಿ ಸ್ಕ್ಯಾನ್ ಸೇವೆಗೆ ಬೋರ್ಡ್ ಲೈಸೆನ್ಸ್ ಪಡೆಯುವುದು ಕಡ್ಡಾಯ.
ಸಿಟಿ ಸ್ಕ್ಯಾನ್ ಟ್ಯೂಬ್ ಹಾಳಾಗಿದ್ದು, ದುರಸ್ತಿಗೆ ೫೭ ಲಕ್ಷ ರೂ.ವೆಚ್ಚವಾಗಲಿದೆ. ಆದರೆ ಈಗ ಬೇರೆ ಟ್ಯೂಬ್ ಅಳವಡಿಸಲಾಗಿದ್ದರೂ, ಅ ರ್ಥಿಂಗ್ ಸಮಸ್ಯೆ ಕಾಣಿಸಿಕೊಂಡಿದೆ. ಪ್ರಿಂಟರ್, ಬ್ಯಾಟರಿಗಳು ಸರ್ವಿಸ್ ಆಗಬೇಕದೆ. ಫಿಲಮ್ಸ್ ಬರಬೇಕಿದೆ ಎನ್ನುತ್ತಿವೆ ಆಸ್ಪತ್ರೆ ಮೂಲಗ ಳು.
ಪರವಾನಗಿಗೆ ಅಗತ್ಯವಿರುವ ದಾಖಲೆಗಳನ್ನು ಪರಿಶೀಲಿಸಿರುವ ಎಇಆರ್‌ಬಿ ಕಳೆದ ಯಂತ್ರ ಕೆಟ್ಟಿದ್ದು, ಒಟ್ಟಾರೆ ಇದರ ಕಾರ‍್ಯನಿರ್ವಹಣೆ ಕುರಿತಂತೆ ೧೦ ದಿನಗಳ ಹಿಂದೆ ಅತೃಪ್ತಿ ವ್ಯಕ್ತಪಡಿಸಿದೆ. ದಾಖಲೆಗಳನ್ನು ಸರಿಯಾಗಿ ಕಳಿಸಲು ಅಗತ್ಯವಿರುವ ಲಾಗಿನ್ ಐಡಿ ಪಾಸ್ ವರ್ಡ್ ಕೂಡ ಇಲ್ಲವಾಗಿದೆ ಎಂದು ಕಾಲೇಜು ಅಽಕಾರಿಗಳು ತಿಳಿಸಿದ್ದಾರೆ.
ಆದರೂ ಲಭ್ಯ ಸಂಬಂಽಸಿದ ದಾಖಲೆಗಳನ್ನು ಮರು ಸಂಗ್ರಹಿಸಿ ಮತ್ತೊಮ್ಮೆ ಎಇಆರ್‌ಬಿಗೆ ಕಳಿಸಲಾಗಿದೆ. ಇನ್ನೂ ೧೦ ದಿನದೊಳಗೆ ಕ ಳಿಸಿರುವ ದಾಖಲೆಗಳನ್ನು ಎಇಆರ್‌ಬಿ ಪರಿಶೀಲಿಸಿ ಅಥವಾ ಸ್ಥಳಕ್ಕೆ ಬೋರ್ಡ್ ವಿಜ್ಞಾನಿಗಳನ್ನು ಕಳಿಸಿ ಅವರ ವರದಿ ಆಧರಿಸಿ ಅನುಮತಿ ಕೊಡ ಬಹುದು ಅಥವಾ ತಿರಸ್ಕರಿಸಿರುವ ಸಾಧ್ಯತೆಯೂ ಇದೆ.
ಅನುಮತಿ ಇಲ್ಲದೆ ಸಿಟಿ ಸ್ಕಾ÷್ಯನ್ ಸೇವೆ ಒದಗಿಸುವುದು ಕಾನೂನು ಬಾಹಿರ, ಬೋರ್ಡ್ ಸಂಬಂಽಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸ ಬಹುದು ಹಾಗೂ ಆಸ್ಪತ್ರೆಯ ಪರವಾನಗಿಯನ್ನೇ ರದ್ದು ಪಡಿಸುವಂಥ ಕಠಿಣ ಕ್ರಮಕ್ಕೂ ಮುಂದಾಗುವುದನ್ನು ತಳ್ಳಿ ಹಾಕುವಂತಿಲ್ಲ.
ಕೆಎಂಇಆರ್‌ಸಿ ಅನುದಾನದಲ್ಲಿ ೧೨೦o್ಝಜ್ಚಿಛಿ ಸಾಮ್ಯರ್ಥದೊಂದಿಗೆ ಅಗತ್ಯ ಇತರೆ ರೋಗ ತಪಾಸಣೆಗೆ ಅನುಕೂಲವಾಗುವಂತೆ ಹೊಸ ಇS o್ಚZ್ಞ ಯಂತ್ರ ಸ್ಥಾಪನೆ ಚಿಂತನೆ ಇದೆ. ಸದ್ಯ ಆಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರದ ಸೇವೆಯಲ್ಲಿದೆ, ಆದರೆ ಇಲ್ಲಿರುವ ೩ ಎಕ್ಸ್-ರೇ ಯಂತ್ರಗಳ ಪೈಕಿ, ೨ ಎಕ್ಸ್ ರೇ ಯಂತ್ರಗಳು ಸೇವೆಗೆ ಅಲಭ್ಯವಾಗಿದೆ. ಕಾನೂನು ಕ್ರಮದ ಎಚ್ಚರಿಕೆ ಬಳಿಕ ನಿನ್ನೆ-ಮೊನ್ನೆ ಯಂತ್ರ ಪೂರೈಕೆ ಸಂಸ್ಥೆ ಪ್ರತಿನಿಽಗಳು ವೈದ್ಯಾಽಕಾರಿಗಳೊಂದಿಗೆ ಚರ್ಚಿಸಿದ್ದಾರೆನ್ನಲಾಗಿದೆ.
ತಕ್ಷಣ ಸಿಟಿ ಸ್ಕ್ಯಾನ್ ಸೇವೆ ಮರು ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಈಚೆಗೆ ವೈದ್ಯಕೀಯ ಕಾ ಲೇಜು ಹಾಗೂ ಬೋಧನಾ ಆಸ್ಪತ್ರೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಾಽಕಾರಿಗಳಿಗೆ ತಾಕೀತು ಮಾಡಿದ್ದರು. ಆಸ್ಪತ್ರೆ ಮತ್ತು ಕಾಲೇಜು ನಡುವೆ ಸಮನ್ವಯತೆ ಕೊರತೆ ಇರುವುದನ್ನು ಅರಿತ ಸಚಿವರು, ಸಮನ್ವಯತೆಯಿಂದ ಕಾರ‍್ಯ ನಿರ್ವಹಿಸುವಂತೆ ನಿರ್ದೇಶಿಸಿದ್ದರು. ವೈದ್ಯಕೀ ಯ ಶಿಕ್ಷಣ ಇಲಾಖೆೆಗೆ ಹಸ್ತಾಂತರಿಸಲಾಗಿದೆಂಬ ಕಾರಣದಿಂದ ಜವಾಬ್ದಾರಿಯಿಂದ ನುಣುಚಿ ಕೊಳ್ಳದಂತೆ ಜಿಲ್ಲಾ ಸರ್ಜನ್ ಡಾ.ಡಿ.ಎಸ್. ರವೀಂದ್ರ ಅವರನ್ನು ಎಚ್ಚರಿಸಿದ್ದರು.
ಮೆಡಿಕಲ್ ಕಾಲೇಜಿಗೆ ಕಳೆದ -Éಬ್ರವರಿಯಲ್ಲೇ ಆಸ್ಪತ್ರೆ ಹೊಣÉ ಹಸ್ತಾಂತರವಾಗಿದ್ದರೂ ಸಿಟಿ ಸ್ಕಾ÷್ಯನ್ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಸಾ ರ್ವಜನಿಕರು ಆಸ್ಪತ್ರೆಯಲ್ಲಿ ಈ ಸೌಲಭ್ಯ ಸಿಗದೆ ಪರದಾಡುತ್ತಿದ್ದರೆ. ಸಮಸ್ಯೆಗೆ ತಕ್ಷಣ ಪರಿ ಹಾರ ಕಂಡುಕೊಳ್ಳಬೇಕೆಂದು ಕಾಲೇಜು ಡೀನ್ ಡಾ.ಬಿ.ವೈ.ಯುವರಾಜ್ ಅವರಿಗೂ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಕಳೆದ ಏಪ್ರಿಲ್‌ನಿಂದ ಕೆಟ್ಟಿರುವ ಸಿಟಿ ಸ್ಕಾ÷್ಯನ್ ಈವರೆಗೂ ದುರಸ್ತಿ ಆಗಿಲ್ಲ. ಸಚಿವರು ಸಭೆಯಲ್ಲಿ ಅಽಕಾರಿಗಳು ಮಾ ರನೇ ದಿನದಿಂದಲೇ ಕರ‍್ಯಾರಂಭವಾಗಲಿದೆ ಎಂದಿದ್ದರು. ಆದರೆ ಈವರೆಗೂ ಈ ಯಂತ್ರದ ಸೇವೆ ದೊರಕದೆ ರೋಗಿಗಳು ಪರದಾಡುವ ಂತಾಗಿರುವುದು, ಅಽಕಾರಿಗಳ ನಡುವೆ ಸಮನ್ವಯತೆ ಕೊರತೆ ಇನ್ನೂ ಸರಿಯಾಗಿಲ್ಲ ಎಂಬುದನ್ನು ಮತ್ತೆ ಪುಷ್ಠಿಕರಿಸುವಂತಾಗಿದೆ.
ಕೋಟ್
ಸಿಟಿ ಸ್ಕಾ÷್ಯನ್ ಸೇವೆಗೆ ಆರಂಭಕ್ಕೆ ಸಂಬಂಽಸಿದಂತೆ ಮತ್ತೊಮ್ಮೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ಎಇಆರ್‌ಬಿಗೆ ಕಳಿಸಲಾಗಿದೆ. ೧೦ದಿ ನದೊಳಗೆ ಪರವಾನಗಿ ಲಭ್ಯವಾಗಬಹುದು. ಬಳಿಕ ಬೋಧನಾ(ಜಿಲ್ಲಾ)ಆಸ್ಪತ್ರೆಯಲ್ಲಿ ಈ ಯಂತ್ರದ ಸೇವೆ ರೋಗಿಗಳಿಗೆ ದೊರೆಯುವ ವಿಶ್ವಾಸವಿದೆ.
ಡಾ.ಬಿವೈ.ಯುವರಾಜ್, ಡೀನ್, ಸರ್ಕಾರಿ ಮೆಡಿಕಲ್ ಕಾಲೇಜು, ಚಿತ್ರದುರ್ಗ.