ಚಿತ್ರದುರ್ಗದಲ್ಲಿ ಬಾಲ್ಯವಿವಾಹ ಮುಕ್ತ ಜಾಗೃತಿ ರಥಯಾತ್ರೆಗೆ ಶನಿವಾರ ಡಿ. ಸುಧಾಕರ್ ಚಾಲನೆ ನೀಡಿದರು. ಎಂ.ಕೆ. ತಾಜ್‌ಪೀರ್, ವೀಣಾ, ಪರ್ವತಾಲು, ಎಸ್. ತಾತರಾಜ್, ಡಿ.ಒ. ಮುರಾರ್ಜಿ, ಸಿ. ಕಣ್ಮೇಶ್, ಅಂಜಿನಪ್ಪ, ಪ್ರಕಾಶ್ ರಾಮನಾಯ್ಕ್, ಆನಂದ್‌ಕುಮಾರ್ ಇತರರಿದ್ದರು.
- ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಲಹೆ
- ಬಾಲ್ಯವಿವಾಹ ಮುಕ್ತ ಜಾಗೃತಿ ರಥಯಾತ್ರೆಗೆ ಚಾಲನೆ
- ಬಾಲ್ಯವಿವಾಹ ಸಮಾಜಕ್ಕೆ ಎಂದೆAದಿಗೂ ಮಾರಕ.
ಚಿತ್ರದುರ್ಗ : ಮದುವೆ ಏನೆಂಬುದರ ಅರ್ಥವೇ ಗೊತ್ತಿಲ್ಲದ ಅಪ್ರಾಪ್ತ ವಯಸ್ಸಿನಲ್ಲಿ ಹೆಣ್ಣು ಮಕ್ಕಳಿಗೆ ಯಾರೂ ಬಾಲ್ಯವಿವಾಹಕ್ಕೆ ಮುಂದಾಗಬಾರದು. ಅಲ್ಲದೆ ಇದು ಶಿಕ್ಷಾರ್ಹ ಅಪರಾಧ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಪಂ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಹಾಗೂ ನಗರದ ಆಶ್ರಿತ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಬಾಲ್ಯವಿವಾಹ ಮುಕ್ತ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯವಿವಾಹ ಅತ್ಯಂತ ಅನಿಷ್ಟ ಪದ್ಧತಿ. ಇದರಿಂದ ಜಿಲ್ಲೆ ಸಂಪೂರ್ಣ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
೧೩ ರಿಂದ ೧೫ನೇ ವಯಸ್ಸಿನ ಅಪ್ರಾಪ್ತೆಯರಿಗೆ ಜಿಲ್ಲೆಯ ಕೆಲ ಗ್ರಾಮೀಣ ಭಾಗಗಳಲ್ಲಿ ಮನೆಯಲ್ಲೇ ತಾಳಿ ಕಟ್ಟಿಸುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಇದನ್ನು ಪ್ರೋತ್ಸಾಹಿಸುವವರು ಯಾರೇ ಆಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಪೊಲೀಸ್ ಇಲಾಖೆ ಅಽಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಭವಿಷ್ಯ ರೂಪಿಸಬೇಕಾದ ಪಾಲಕರೇ ತಮ್ಮ ಹೆಣ್ಣು ಮಕ್ಕಳನ್ನು ಗುಂಡಿಗೆ ತಳ್ಳುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಯಲ್ಲ. ಯಾವ ಸಮುದಾಯದವರೂ ಇದಕ್ಕೆ ಆಸ್ಪದ ನೀಡಬಾರದು. ಆಟವಾಡುವ ವಯಸ್ಸಿನ ಮಕ್ಕಳನ್ನು ಸಂದಿಗ್ಧ ಸ್ಥಿತಿಗೆ ಸಿಲುಕಿ ಸಬೇಡಿ ಎಂದು ಪಾಲಕರನ್ನು ಕೋರಿದರು.
ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, ಬಾಲ್ಯವಿವಾಹ ಮುಕ್ತ ಭಾರತಕ್ಕಾಗಿ ಕೇಂದ್ರ ಸರ್ಕಾರ ಪಣತೊಟ್ಟಿದೆ. ರಾಜ್ಯ ಸರ್ಕಾರವೂ ಕಾರ್ಯೋನ್ಮುಖವಾಗಿದೆ. ಪ್ರಕರಣ ಕಂಡ ಸ್ಥಳಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಬೇಕು. ಯಾವ ಕಾರಣಕ್ಕೂ ನಡೆಯದಂತೆ ಅಽಕಾರಿಗಳು ಅಗತ್ಯ ಮುನ್ನೆಚ್ಚರಿಗೆ ವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಬಾಲ್ಯವಿವಾಹ ಮುಕ್ತ ಭಾರತ ಎಂಬ ಕರಪತ್ರವನ್ನು ಸಚಿವರು ಬಿಡುಗಡೆಗೊಳಿಸಿದರು. ಸಹಿ ಸಂಗ್ರಹ ಅಭಿಯಾನಕ್ಕೂ ಚಾಲನೆ ನೀಡಿದರು.
ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಶಿಶು ಅಭಿವೃದ್ಧಿ ಯೋಜನಾಽಕಾರಿ ವೀಣಾ, ಆಶ್ರಿತ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ಪರ್ವತಾಲು, ಕೋಶಾಽಕಾರಿ ಎಸ್. ತಾತರಾಜ್, ಜಿಲ್ಲಾ ಸಂಯೋಜಕ ಡಿ.ಒ. ಮುರಾರ್ಜಿ, ಲಲಿತಕಲಾ ಅಕಾಡೆಮಿ ಸದಸ್ಯ ಸಿ. ಕಣ್ಮೇಶ್, ವಿವಿಧ ಸಂಘ, ಸಂಸ್ಥೆ ಹಾಗೂ ಪಕ್ಷದ ಮುಖಂಡರಾದ ಎ. ಮುರಳಿ, ಡಿ.ಎನ್. ಮೈಲಾರಪ್ಪ, ಅಂಜಿನಪ್ಪ, ಪ್ರಕಾಶ್ ರಾಮನಾಯ್ಕ್, ಸೈಯದ್ ಖುದ್ದೂಸ್, ಆನಂದ್‌ಕುಮಾರ್, ಕಲ್ಲೇಶ್, ಎಲ್. ಮಂಜುನಾಥ್, ಲಕ್ಷಿ÷್ಮÃಕಾಂತ್, ಭಟ್ರಹಳ್ಳಿ ಧನಂಜಯ, ದೇವಿರಮ್ಮ, ನವೀನ್ ಮಸ್ಕಲ್ ಇತರರಿದ್ದರು.
ಬಾಲ್ಯವಿವಾಹ ಸಮಾಜಕ್ಕೆ ಎಂದೆAದಿಗೂ ಮಾರಕ. ಈ ಸತ್ಯವನ್ನು ಅರಿತು ಮೊದಲು ಅದನ್ನು ತೊಡೆದು ಹಾಕಬೇಕು. ಆ ನಿಟ್ಟಿನಲ್ಲಿ ಆಶ್ರಿತ ಸಂಸ್ಥೆ ಜಿಲ್ಲಾಡಳಿತದೊಂದಿಗೆ ಗ್ರಾಮೀಣ ಭಾಗಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.