ಚಿತ್ರದುರ್ಗದಲ್ಲಿ ಗುರುವಾರ ಆಯೋಜಿಸಿದ್ದ ಶಿವಾಜಿ ಮಹಾರಾಜರ ಜಯಂತ್ಯುತ್ಸವದಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಂ.ಕೆ. ತಾಜ್‌ಪೀರ್, ಆರ್. ಶಿವಣ್ಣ ಗಂಜಿಕಟ್ಟೆ, ಡಿ. ತಿಪ್ಪೇಸ್ವಾಮಿ, ಬಿ.ವಿ. ತುಕರಾಂರಾವ್, ಸುರೇಶ್‌ರಾವ್ ಜಾದವ್, ಜಿ. ಉಷಾಬಾಯಿ ಜಾದವ್ ಇತರರು ಇದ್ದರು. 
ಚಿತ್ರದುರ್ಗ

ಛತ್ರಪತಿ ಶಿವಾಜಿ ದೇಶದ ಅಸ್ಮಿತೆ, ಶೌರ್ಯದ ಸಂಕೇತ

ಪ್ರಮುಖ ಮುಖ್ಯಾಂಶಗಳು

  • ಜೀಜಾಬಾಯಿಯಿಂದ ಶಿವಾಜಿಗೆ ಸಂಸ್ಕಾರದ ಪಾಠ
  • ಜಯಂತ್ಯುತ್ಸವದಲ್ಲಿ ಎಡಿಸಿ ಕುಮಾರ ಸ್ವಾಮಿ ಅಭಿಮತ
  • ಸ್ವರಾಜ್ಯ ಸ್ಥಾಪನೆ
ಚಿತ್ರದುರ್ಗ: ಛತ್ರಪತಿ ಶಿವಾಜಿ ಮಹಾರಾಜರು ದೇಶದ ಅಸ್ಮಿತೆ ಮತ್ತು ಶೌರ್ಯದ ಸಂಕೇತವಾಗಿದ್ದಾರೆ ಎಂದು ಅಪರ ಜಿಲ್ಲಾಽ ಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಾರತದ ಇತಿಹಾಸದ ಧೃವತಾರೆ ಶಿವಾಜಿ ಮಹಾರಾಜರು ಬಾಲ್ಯದಲ್ಲೇ ತಾಯಿ ಜೀಜಾಬಾಯಿ ಅವರಿಂದ ಸಂಸ್ಕಾರ ಮತ್ತು ಶೌರ್ಯದ ಪಾಠಗಳನ್ನು ಕಲಿತ್ತಿದ್ದರು ಎಂದು ತಿಳಿಸಿದರು.
ರಾಮಾಯಣ, ಮಹಾಭಾರತದ ಕತೆಗಳಿಂದ ಪ್ರೇರಿತರಾಗಿ, ಸ್ವರಾಜ್ಯ ಸ್ಥಾಪನೆ ಕನಸನ್ನು ನನಸಾಗಿಸಿದರು. ಅವರ ಆಡಳಿತದಲ್ಲಿ ಮಹಿಳೆಯರಿಗೆ ಇದ್ದ ಗೌರವ ಮತ್ತು ಶಿಸ್ತು ಇಂದಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಸರ್ಕಾರ ಮರಾಠ ಸಮುದಾಯಕ್ಕೆ ಕಲ್ಪಿಸಿರುವ ೩ಎ ಮೀಸಲಾತಿ ಬಳಸಿಕೊಂಡು ಯುವಜನರು ಉನ್ನತ ಶಿಕ್ಷಣ ಪಡೆದು, ಸರ್ಕಾ ರಿ ಉದ್ಯೋಗ ಪಡೆದುಕೊಳ್ಳಬೇಕು. ಮರಾಠ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ಸ್ಥಾಪಿಸಿರುವ ಅಭಿವೃದ್ಧಿ ನಿಗಮದ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕಿದೆ ಎಂದರು.
ಶಿವಾಜಿ ಮಹಾರಾಜರ ತತ್ವಾದರ್ಶಗಳನ್ನು ಭಾಷಣಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಇಂತಹ ಮಹನೀಯರ ಜಯಂತಿ ಆಚರಣೆಗಳಿಗೆ ಅರ್ಥ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಶಿವಾಜಿ ಮಹಾರಾಜರು ಸರ್ವರಿಗೂ ಪ್ರೇರಣೆಯಾಗಿದ್ದಾರೆ. ಮರಾಠ ಸಮಾಜ ಪೂರ್ವಜರ ಬಳುವಳಿ ಭಾಷೆ ಹಾಗೂ ಸಂಪ್ರದಾಯಗಳನ್ನು ನಿರ್ಲಕ್ಷಿಸದೆ, ಮಕ್ಕಳಿಗೂ ಕಲಿಸಬೇಕು. ಶಿವಾಜಿ ಮಹಾರಾಜರ ಆಡಳಿತ ಇರುವವರೆಗೆ ಮೊಘಲರು ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಹೊಂದಲು ಸಾಧ್ಯವಾಗಲಿಲ್ಲ. ಸರ್ವಧರ್ಮ ಸಹಿಷ್ಣು ಆಗಿದ್ದ ಶಿವಾಜಿ ಮಹಾರಾಜರ ಸೇನೆಯಲ್ಲಿ ಮುಸ್ಲಿಂ ಸಮುದಾಯದವರೂ ಇದ್ದರು ಎಂದರು.
ಚನ್ನಗಿರಿ ಬಳಿ ಇರುವ ಶಿವಾಜಿ ತಂದೆ ಶಹಾಜಿ ಬೋಸ್ಲೆ ಹಾಗೂ ಚಿತ್ರದುರ್ಗದ ಹೆಸರಾಂತ ಪೈಲ್ವಾನ್ ನಂಜಪ್ಪನವರ ಸ್ಮಾರಕ ಸ್ಥಳವನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಽಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ ಮಾತನಾಡಿದರು. ಬಾಲಕರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಿ.ತಿಪ್ಪೇಸ್ವಾಮಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ ಸ್ವಾಗತಿಸಿ, ಉಪನ್ಯಾಸಕ ಚನ್ನಬಸವಯ್ಯ ನಿರೂಪಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೆÃಶಯ್ಯ ತಂಡ ಗೀತಗಾಯನ ಪ್ರಸ್ತುತ ಪಡಿಸಿತು.
ಜಿಲ್ಲಾ ವಾರ್ತಾಽಕಾರಿ ಬಿ.ವಿ. ತುಕಾರಾಂರಾವ್, ಎಸಿ ಕಚೇರಿ ತಹಸೀಲ್ದಾರ್ ನರಸಿಂಹಮೂರ್ತಿ, ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶ್‌ರಾವ್ ಜಾದವ್, ಕಾರ್ಯದರ್ಶಿ ಜೆ. ಗೋಪಾಲರಾವ್ ಜಾದವ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಜಿ. ಉಷಾಬಾಯಿ ಜಾದವ್ ಸೇರಿ ಸಮುದಾಯದ ಮುಖಂಡರು ಇದ್ದರು.