ಚಿತ್ರದುರ್ಗದ ಮಹಾರಾಣಿ ಕಾಲೇಜಿನಲ್ಲಿ ಮಂಗಳವಾರ ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು. ಎಸ್. ಸಂದೀಪ್, ಡಾ.ಎಚ್.ಟಿ. ತೇಜಸ್ವಿ, ಆರ್. ಮಂಜುಳಾ, ಎಸ್. ಸಾಗರ್, ಮಹಾಂತೇಶ್, ವಿ.ಎಸ್. ಪೋತದಾರ್ ಇತರರಿದ್ದರು.
- ಉದ್ಯೋಗ ಅವಕಾಶಗಳಿಗೆ ನೀಡಬೇಕಿದೆ ಒತ್ತು
- ವಿಶ್ವ ಶುಶ್ರೂಷಕರ ದಿನ ಆಚರಣೆ
- ಸೇವಾ ಮನೋಭಾವನೆ ಅತ್ಯಂತ ಮುಖ್ಯ.
ಚಿತ್ರದುರ್ಗ: ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಧ್ಯ ಎಂದು ಜಿ¯್ಲÁ ಮದಕರಿನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್. ಸಂದೀಪ್ ಹೇಳಿದರು.
ವಿದ್ಯಾಸಂಸ್ಥೆ, ಮದರ್ ಥೆರೆಸಾ ಸ್ಕೂಲ್ ಆ-ï ನರ್ಸಿಂಗ್‌ನಿAದ ಮಹಾರಾಣಿ ಕಾಲೇಜಿನ ವಾಲ್ಮೀಕಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶುಶ್ರೂಷಕರ ದಿನಾಚರಣೆ, ೩೪ನೇ ಬ್ಯಾಚ್‌ನ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವ, ಪ್ರತಿe್ಞÁ ವಿಽ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಅತ್ಯಂತ ಮುಖ್ಯ. ಸಂಸ್ಥೆಯಿAದ ಮುಂಬರುವ ದಿನಗಳಲ್ಲಿ ಬಿ.ಎಸ್ಸಿ ನರ್ಸಿಂಗ್, ಉನ್ನತ ಕೋರ್ಸ್ಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು. ಇದರೊಟ್ಟಿಗೆ ಕೌಶಲಯುತ ಶಿಕ್ಷಣ ನೀಡುವ ಚಿಂತನೆ ಇದೆ ಎಂದರು.
ವೇದಾAತ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಚ್.ಟಿ. ತೇಜಸ್ವಿ ಮಾತನಾಡಿ, ವೈದ್ಯರಿಗಿಂತಲೂ ನರ್ಸ್ಗಳು ರೋಗಿಗಳ ಹತ್ತಿ ರವಿದ್ದು, ಹೆಚ್ಚು ಸಮಯ ನೀಡುತ್ತಾರೆ. ಹೀಗಾಗಿ ಈ ವೃತ್ತಿಯೂ ಅತ್ಯಂತ ಪವಿತ್ರ ಎಂದು ಹೇಳಿದರು.
ವೃತ್ತಿಯಲ್ಲಿ ಪ್ರಾಮಾಣಿಕತೆ, ಸಮಯ ಪ್ರಜ್ಞೆ ಇದ್ದಾಗ ಮಾತ್ರ ರೋಗಿಗಳ ಜೀವ ಉಳಿಸಲು ಸಾಧ್ಯ. ನರ್ಸಿಂಗ್ ಶಿಕ್ಷಣ ಪಡೆಯು ವ ವರು ನೈಪುಣ್ಯತೆ ಅಳವಡಿಸಿಕೊಳ್ಳಬೇಕು. ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿ ದರು.
ಪ್ರಾಚಾರ್ಯೆ ಆರ್. ಮಂಜುಳಾ ಮಾತನಾಡಿ, ದಿನದ ೨೪ ಗಂಟೆಗಳ ಕಾಲ ರೋಗಿಗಳ ಸೇವೆ ಮಾಡುವ ಅವಕಾಶ ನರ್ಸ್ಗಳಿಗಿದೆ. ವೃತ್ತಿ, ಸಾಂಸಾರಿಕ, ವೈಯಕ್ತಿಕ ಜೀವನದಲ್ಲಿ ಏನೇ ಅಡೆತಡೆ ಎದುರಾದರೂ ಎದೆಗುಂದದೆ ರೋಗಿಗಳ ಸೇವೆ ಮಾಡಬೇಕು ಎಂ ದು ತಿಳಿಸಿದರು. ವಿದ್ಯಾಸಂಸ್ಥೆ ಆಡಳಿತಾಽಕಾರಿ ಎಸ್. ಸಾಗರ್, ಕಾರ್ಯನಿರ್ವಾಹಕ ಮಹಾಂತೇಶ್, ಹಿರಿಯ ಉಪನ್ಯಾಸಕಿ ವಿ.ಎಸ್. ಪೋತದಾರ್ ಇತರರಿದ್ದರು.