ಚಿತ್ರದುರ್ಗ ತಾಲೂಕು ಬೆಳಘಟ್ಟದ ಗ್ರಾಮದ ಸೂರ‌್ಯ ಯರಘಟ್ಟ ಸ್ವಾಮಿಗೆ ಶಾಸಕ ಟಿ.ರಘುಮೂರ್ತಿ ಅವರು ವಿಶೇಷ ಪೂಜೆ ಸಲ್ಲಿಸಿ ದರು. ಬಾಬುರೆಡ್ಡಿ,ನಾಗೇಶ್,ಬೋರೇಶ್,ತಿಪ್ಪೇಸ್ವಾಮಿ,ವಿನಾಯಕ, ಜಿ.ಕಾಟಯ್ಯ,ಜಗದೀಶ್,ಕಾಟಯ್ಯ,ದಾಸರ ಪಾಪಯ್ಯ ಇತರರು ಇದ್ದರು.
- ವಿಶೇಷ ಪೂಜೆ
- ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ
- ಬುಡಕಟ್ಟು ಆಚರಣೆಗಳು
ಚಿತ್ರದುರ್ಗ: ಉತ್ತಮ ಮಳೆ,ಬೆಳೆಯಾಗಿ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ಪ್ರತಿ ವರ್ಷ ಸೂರ‌್ಯ ಯರಟ್ಟ ಸ್ವಾಮಿ ದೇವರಿಗೆ ಮತ್ತು ದೇವರ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ತಾಲೂಕು ಬೆಳಗಟ್ಟದಲ್ಲಿ ಶುಕ್ರವಾರ ಸೂರ‌್ಯ ಯರಟ್ಟ ಸ್ವಾಮಿ ಎತ್ತಿನ ಜಾತ್ರೆ ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ವಾತನಾಡಿದ ಅವರು,ಪ್ರತಿ ವರ್ಷ ನವೆಂಬರ್‌ನಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. ಅತೀ ಹೆಚ್ಚು ಬುಡಕಟ್ಟು ಆಚರಣೆಗಳು ಮುಂದುವರಿಸಿಕೊಂಡು ಬಂದಿರುವ ಚಳ್ಳಕೆರೆ,ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳನ್ನು ಬುಡಕಟ್ಟು ಸಂಸ್ಕೃತಿಯ ತವರೂರು ಎಂದು ಕರೆಯಲಾಗುತ್ತೆ.
ಬೆಳಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳ ಆರೇಳು ಸಾವಿರ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ದೀಪಾವಳಿ ನಂತರದಲ್ಲಿ ನಡೆ ಯುವ ಈ ಜಾತ್ರೆಯಲ್ಲಿ ದೇವರ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ ಉತ್ತಮ ಮಳೆ,ಬೆಳೆಯಾಗುತ್ತದೆ ಎಂಬ ನಂಬಿಕೆ ಇದೆ. ಆಧುನಿಕ ಯು ಗದಲ್ಲೂ ವಿಶಿಷ್ಟ ಆಚರಣೆ ಮತ್ತು ಪರಂಪರೆ ಮುಂದುವರಿದಿರುವುದು ವಿಶೇಷವಾಗಿದೆ. ರಾಸುಗಳಿಗೆ ದೇವರ ಸ್ಥಾನವಿದೆ. ಯಾವುದೇ ಹಬ್ಬದ ಸಂದರ್ಭ ದೇವರ ಎತ್ತುಗಳಿಗೆ ವಿಶೇಷ ಮನ್ನಣೆೆ ಇದೆ ಎಂದರು.
ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ,ಗ್ರಾಪಂ ಸದಸ್ಯರಾದ ಕಮಲಮ್ಮ,ನಾಗೇಶ್ ಮತ್ತು ಮುಖಂಡರಾದ ಬೋರೇಶ್,ತಿಪ್ಪೇಸ್ವಾಮಿ, ವಿನಾಯಕ,ಜಿ.ಕಾಟಯ್ಯ, ಹಟ್ಟಿಯ ಜವಾನರಾದ ಜಗದೀಶ್,ಕಾಟಯ್ಯ,ದಾಸರ ಪಾಪಯ್ಯ ಇದ್ದರು.