ಎಂಪಿ ಗೋವಿಂದ ಕಾರಜೋಳ  
ಚಿತ್ರದುರ್ಗ

ಚಿತ್ರದುರ್ಗದಲ್ಲಿ ಕೇಂದ್ರೀಯ ವಿದ್ಯಾಶಾಲೆ ಕಾರ್ಯಾರಂಭ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ೧ರಿAದ ೫ನೇ ತರಗತಿವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
  • ಸಂಸದ ಗೋವಿಂದ ಎಂ.ಕಾರಜೋಳ ಹೇಳಿಕೆ
  • ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ವಿಭಾಗ
ಚಿತ್ರದುರ್ಗ: ಚಿತ್ರದುರ್ಗ ಕೇಂದ್ರಿಯ ವಿದಾಲಯ ೨೦೨೬-೨೭ನೇ ಶೈಕ್ಷಣಿಕ ಸಾಲಿನ ೧ರಿಂದ ೫ನೇ ತರಗತಿವರೆಗಿನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸ ಬಹುದಾಗಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಈ ಮೂಲಕ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಹೊಸ ವಿಭಾಗದಲ್ಲಿ ತಾತ್ಕಾಲಿಕವಾಗಿ ಕೇಂದ್ರೀಯ ವಿ ದ್ಯಾಲಯ ಕಾರ್ಯಾರಂಭ ಮಾಡಲಿದೆ. ಈ ಶಾಲೆ ವಸತಿರಹಿತವಾಗಿದ್ದು, ಹಾಸ್ಟೆಲ್ ವ್ಯವಸ್ಥೆ ಇರುವುದಿಲ್ಲ. ಸದ್ಯ ೧ರಿಂದ ೫ನೇ ತರಗತಿಯ ವರೆಗೆ ದಾಖಲಾತಿಗೆ ಅವಕಾಶವಿದೆ.
೧ನೇ ತರಗತಿಗೆ ಮಕ್ಕಳ ಪ್ರವೇಶಕ್ಕಾಗಿ ಪಾಲಕರು ಆನ್‌ಲೈನ್ ಮೂಲಕ ಏಪ್ರಿಲ್ ೨ರವರೆಗೆ ಅರ್ಜಿ ಸಲ್ಲಿಸಬಹುದು. ೨ರಿಂದ ೫ ನೇ ತರಗತಿವರೆಗೆ ಆ-ï‌ಲೈನ್ ಮೂಲಕ ಖುದ್ದಾಗಿ ಪಾಲಕರು ಸರ್ಕಾರಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅರ್ಜಿ ಪಡೆದು ಸಲ್ಲಿಸಬಹುದು.
೨ನೇ ತರಗತಿಯಿಂದ ೫ನೇ ತರಗತಿ ಮಕ್ಕಳ ಪ್ರವೇಶಕ್ಕಾಗಿ ಏಪ್ರಿಲ್ ೨ರ ಬೆಳಗ್ಗೆ ೧೦ ರಿಂದ ೮ರ ಸಂಜೆ ೪ರವರೆಗೆ ಖುದ್ದಾಗಿ ಅರ್ಜಿ ಸಲ್ಲಿಸ ಬಹುದಾಗಿದೆ. ಆಯ್ಕೆಯಾದ ಮಕ್ಕಳು ದಾಖಲಾಗಲು ಜೂನ್ ೩೦ ಕೊನೇ ದಿನವಾಗಿರುತ್ತದೆ. ೧ರಿಂದ ೫ ನೇ ತರಗತಿವರೆಗೆ ಪ್ರತಿ ತರಗತಿಗೆ ೪೦ ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.