ಚಿತ್ರದುರ್ಗದಲ್ಲಿ ಬುಧವಾರ ಭಾರತ ಜನಗಣತಿ ಅಂಗವಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ರೋಣ್ ವಾಸುದೇವ ಅವರು ಮೊಬೈಲ್‌ನಲ್ಲಿ ಮಾಹಿತಿ ದಾಖಲಿಸಿದರು. ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಇತರರು ಇದ್ದರು.
- ಜಿಲ್ಲಾ ನ್ಯಾಯಾಽÃಶ ರೋಣ್‌ವಾಸುದೇವ ಅಭಿಮತ
- ಜಿಲ್ಲಾದ್ಯಂತ ಭಾರತ ಜನಗಣತಿ ಪ್ರಕ್ರಿಯೆ ಆರಂಭ
- ಸ್ವಯಂ ಆಗಿ ಮಾಹಿತಿ ದಾಖಲಿಸಿದ ಗಣ್ಯರು
ಚಿತ್ರದುರ್ಗ: ಭಾರತದ ಜನಗಣತಿ- ೨೦೨೭ ದೇಶದ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಽÃಶ ರೋಣ್ ವಾಸುದೇವ ಹೇಳಿದರು.
ನಗರದಲ್ಲಿ ಏ.೧೫ ರವರೆಗೆ ನಡೆಯಲಿರುವ ಸ್ವಯಂ ಗಣತಿ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ನಿಗ ದಿತ ಅವಽಯೊಳಗೆ ಸಾರ್ವಜನಿಕರು ತಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ ಸ್ವಯಂ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಜನರು ಸ್ವಯಂ ಗಣತಿಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದರು.
ತಮ್ಮ ಮನೆ ಬಾಗಿಲಿಗೆ ಬರುವ ಗಣತಿ ಅಽಕಾರಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ನಿಖರವಾದ ಮಾಹಿತಿ ನೀಡುವ ಮೂಲಕ ದೇಶದ ಭವಿಷ್ಯದ ಯೋಜನೆಗಳ ರೂಪಿಸುವಿಕೆಗೆ ಅಡಿಪಾಯ ವಾಗಿರುವ ಈ ರಾಷ್ಟಿçÃಯ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಗರದ ವಿಪಿ ಬಡಾವಣೆಯ ತಮ್ಮ ನಿವಾಸದಲ್ಲಿ ಜಿಲ್ಲಾ ನ್ಯಾಯಾಽÃಶರು ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ತಮ್ಮ ನಿವಾಸದಲ್ಲಿ ಸ್ವಯಂ ಗಣತಿಗೆ ವಿವರ ದಾಖಲಿಸಿದ ಜಿಲ್ಲಾಽಕಾರಿ ಟಿ. ವೆಂಕಟೇಶ್ ಅವರು, ಅಂದಾಜು ೧೮ ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯ ಎಲ್ಲ ಆರು ತಾಲೂಕುಗಳಲ್ಲೂ ಏಕಕಾಲಕ್ಕೆ ಜನಪ್ರತಿನಿಽಗಳು, ಪ್ರಮುಖರ ಉಪಸ್ಥಿತಿಯಲ್ಲಿ ಸ್ವಯಂ ಗಣತಿಗೆ ಚಾಲನೆ ದೊರೆತಿದೆ. ಮೊಬೈಲ್ ಆಪ್ ಮೂಲಕ ಸ್ವತಃ ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶವಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವಯಂ ಗಣತಿ ಪೂರ್ಣವಾದ ಬಳಿಕ ಜನಗಣತಿ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಜನಗಣತಿ ಸಿಬ್ಬಂದಿ ಮನೆ ಬಾಗಿಲಿಗೆ ಬರುವ ಮುನ್ನವೇ ಜಿಲ್ಲೆಯ ನಾಗರಿಕರು ಆಪ್ ಮೂಲಕ ಸ್ವಯಂ ಪ್ರೇರಿತರಾಗಿ ತಮ್ಮ ನಿಖರವಾದ ಮಾಹಿತಿಗಳನ್ನು ದಾಖಲಿಸಿ ಸಹಕರಿಸಬೇಕು ಎಂದರು.
ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಅವರು ಮಾತನಾಡಿ, ಏ.೧೫ರವರೆಗೆ ಜನಗಣತಿಯ ಮೊದಲ ಹಂತದ ಅವಽಯಲ್ಲಿ ಸಾ ರ್ವಜನಿಕರು ವೆಬ್‌ಸೈಟ್
https://se.census.gov.in ನಲ್ಲಿ ತಮ್ಮ ವಿವರ ದಾಖಲಿಸಬಹುದು. ಒಟಿಪಿ ಮೂಲಕ ದÊಢೀಕರಣ ಪಡೆದು, ಮನೆಯ ಸ್ಥಿತಿಗತಿ ಮತ್ತು ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು.
ಮನೆ ನಿರ್ಮಾಣಕ್ಕೆ ಬಳಸಿದ ಸಾಮಗ್ರಿ, ಮನೆಯಲ್ಲಿರುವ ಕುಡಿಯುವ ನೀರು ಸೌಲಭ್ಯ ಸಹಿತ ಇತರ ಮೂಲ ಸೌಕರ್ಯಗಳ ಕುರಿತು ಪ್ರಶ್ನೆಗಳಿರುತ್ತವೆ. ಏ.೧೬ ರಿಂದ ಗಣತಿದಾರರು ಖುದ್ದಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.
ಚಳ್ಳಕೆರೆಯಲ್ಲಿದ್ದ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಚಿತ್ರದುರ್ಗದಲ್ಲಿರುವ ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಹನುಮಂತಪ್ಪ ಮತ್ತಿತರ ಗಣ್ಯರು ಈ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಲಕ್ಷಿ÷್ಮÃ ತಿಳಿಸಿದರು.
ಚಿತ್ರದುರ್ಗ ತಹಸೀಲ್ದಾರ್ ಬಿ.ಎಂ. ಗೋವಿಂದರಾಜ್, ಕಂದಾಯ ನಿರೀಕ್ಷಕ ಪ್ರಾಣÉÃಶ್, ನಗರಸಭೆ ಪರಿಸರ ಅಭಿಯಂತರ ಜಾ-Àರ್, ವ್ಯವಸ್ಥಾಪಕ ಟಿ. ಜಯಪ್ಪ, ಆರೋಗ್ಯ ನಿರೀಕ್ಷಕರಾದ ಹೀನಾಕೌಸರ್, ರುಕ್ಮಿಣಿ, ಬಾಬುರೆಡ್ಡಿ, ಜಯಪ್ರಕಾಶ್, ಗಣತಿ ಅಽಕಾರಿ ಹಾಗೂ ಸಿಬ್ಬಂದಿ ಇದ್ದರು.