ಚಿಕ್ಕಜಾಜೂರಿನ ಪರಿಶಿಷ್ಟರ ಸ್ಮಶಾನದಲ್ಲಿ ಶನಿವಾರ ಆಷಾಢ ಏಕಾದಶಿ ಹಬ್ಬದ ಪ್ರಯುಕ್ತ ಕುಟುಂಬದ ಸದಸ್ಯರೊಂದಿಗೆ ಹಿರಿಯರ ಸಮಾಧಿಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವುದು. Ashadha 
ಚಿತ್ರದುರ್ಗ

ಶ್ರದ್ಧಾ ಭಕ್ತಿಯಿಂದ ಆಷಾಢ ಏಕಾದಶಿ ಹಬ್ಬ ಆಚರಣೆ Ashadha

ಪ್ರಮುಖ ಮುಖ್ಯಾಂಶಗಳು

  • ಹೊಳಲ್ಕೆರೆಯಲ್ಲಿ ಆಷಾಢದ ವಿಶೇಷ ಪೂಜೆ
ಚಿಕ್ಕಜಾಜೂರು: ಆಷಾಢ ಏಕಾದಶಿ ಹಬ್ಬವನ್ನು ಹೊಳಲ್ಕೆರೆ ತಾಲೂಕಿನಾಧ್ಯಂತ ಭಕ್ತರು ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. Ashadha
ಜುಲೈ ತಿಂಗಳಲ್ಲಿ ಬರುವ ಆಷಾಢ ಏಕಾದಶಿ ಹಬ್ಬದಲ್ಲಿ ಮುದ್ರೆ ಹಾಕಿಸಿಕೊಂಡ ಭಕ್ತರು ಈ ಹಬ್ಬವನ್ನು ಆಚರಿಸಿಕೊಂಡು ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯವಾಗಿದೆ. ದಶಮಿ, ಏಕಾದಶಿ ಮತ್ತು ದ್ವಾದಶಿಗಳಂದು ಮೂರು ದಿನಗಳು ಮುದ್ರೆ ಹಾಕಿಸಿಕೊಂಡ ಎಲ್ಲಾ ಜಾತಿಯ ಭಕ್ತರು ಉಪವಾಸ ಹಾಗೂ ಗೋವಿಂದನ ನಾಮಸ್ಮರಣೆ ಮಾಡುವುದು ವಾಡಿಕೆಯಾಗಿದೆ.
ಉಲಾಯ ಮತ್ತು ಹಿರಿಯರ ಸಮಾಧಿಗೆ ಪೂಜೆ: ಹಬ್ಬದ ಎರಡನೇ ದಿನವಾದ ಏಕಾದಶಿಯಂದು ದೇವರ ಮುದ್ರೆ ಹಾಕಿಸಿಕೊಂಡ ದಾಸಯ್ಯಗಳು ಶುಭ್ರರಾಗಿ ಮನೆಯಲ್ಲಿರುವ ಜಾಗಟೆ, ಭವನಾಸಿ, ಜೋಳಿಗೆ ಗಳೊಂದಿಗೆ ದೇವಸ್ಥಾನಗಳಿಗೆ ತೆರಳಿ, ಪೂಜೆ ಸಲ್ಲಿಸುವರು. ನಂತರ ಮನೆ ಮನೆಗಳಿಗೆ ಹೋಗಿ ಗೋವಿಂದನ ನಾಮ ಸ್ಮರಣೆಯಲ್ಲಿ ಉಲಾಯವನ್ನು ನಡೆಸುವರು. ದಾಸಯ್ಯಗಳು ಕನಿ?್ಠ ಮೂರರಿಂದ ಐದು ಮನೆಗಳಿಗೆ ತೆರಳಿ ಭೀಕ್ಷೆ ಪಡೆದು ಬರುವರು. ಮನೆಗೆ ಬರುವ ದಾಸಯ್ಯನಿಗೆ ಭಕ್ತರು ಅಕ್ಕಿ, ಹಣ್ಣು, ಎಲೆ, ಅಡಿಕೆ ಹಾಗೂ ದಕ್ಷಿಣೆ
ನೀಡುವುದರ ಜತೆ, ಅವರಿಂದ ಆಶೀರ್ವಾದ ಪಡೆಯುದರು.
ಹಿರಿಯರ ಆರಾಧನೆ: ಶನಿವಾರ ಏಕಾದಶಿ ಪ್ರಯುಕ್ತ ಮನೆಯ ಗೃಹಿಣಿಯರು ಹುರಿಗಡಲೆ ಹಿಟ್ಟು, ಕಡಲೆಹಿಟ್ಟಿನ ಉಂಡೆ, ಸೇಂಗಾ ಉಂಡೆಗಳು, ಬಾಳೆಹಣ್ಣು, ಹಲಸಿನ ಹಣ್ಣು, ತೆಂಗಿನ ಕಾಯಿತುರಿ ತಿನಿಸುಗಳನ್ನು ತಯಾರಿಸಿಕೊಂಡು, ಕುಟುಂಬದವರೊಂದಿಗೆ ತಮ್ಮ ಕುಟುಂಬದ ಹಿರಿಯರನ್ನು ಸಮಾದಿ ಮಾಡಿದ ಸ್ಮಶಾನ ಅಥವಾ ತೋಟಗಳಿಗೆ ಹೋಗಿ, ಸಮಾಧಿಗಳಿಗೆ ಬಗೆ ಬಗೆಯ ಹೂವು ಹಾಗೂ ಹೂವಿನ ಹಾರಗಳಿಂದ ಅಲಂಕಾರ ಮಾಡಿ, ಮನೆಯಿಂದ ತಂದಿದ್ದ ತಿನಿಸುಗಳನ್ನು ಎಡೆಗೆ ಹಾಕಿ, ತೆಂಗಿನ ಕಾಯಿ ಹೊಡೆದು, ಪೂಜೆ ಸಲ್ಲಿಸಿ, ನೈವೈಧ್ಯ ಮಾಡಿದರು. ಪೂಜೆಯ ನಂತರ ಎಡಯಲ್ಲಿ ಇಡಲಾಗಿದ್ದ ಸ್ವಲ್ಪ ಭಾಗವನ್ನು ಸಂಗ್ರಹಿಸಿ, ಮನೆಯಿಂದ ತಂದಿದ್ದ ಇತರೆ ತಿನಿಸುಗಳನ್ನು ಬೆರೆಸಿ, ಕುಟುಂಬದ ಎಲ್ಲಾ ಸದಸ್ಯರಿಗೆ ಹಂಚುತ್ತಿದ್ದುದು ಕಂಡು ಬಂದಿತು. ಭಾನುವಾರ ದ್ವಾದಶಿಯಂದು ಹಿಂದಿನ ದಿನ ಭಕ್ತರು ನೀಡಿದ್ದ ಅಕ್ಕಿಯನ್ನು ಬೇಯಿಸಿ, ಮನೆ ದೇವರಿಗೆ ನೈವೇಧ್ಯ ಮಾಡಿದರು. ದಾಸಯ್ಯನನ್ನು ಮನೆಗೆ ಕರೆದು ಭಕ್ತರು ದಕ್ಷಿಣೆಯಾಗಿ ನೀಡಿದ ಹಣವನ್ನು ದೇವರಿಗೆ ಮುಡುಪು ಕಟ್ಟಿಸಿ, ಆತನಿಗೆ ಊಟ ಬಡಿಸಲಾಯಿತು. ಗೋವಿಂದನ ಸ್ಮರಣೆ ಮಾಡಿಸಲಾಯಿತು.