ಲೋಕಾರ್ಪಣೆಗೆ ಸಜ್ಜಾಗಿರುವ ಮೊಳಕಾಲ್ಮೂರಿನ ನೂತನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ. Inauguration 
ಚಿತ್ರದುರ್ಗ

ಮೊಳಕಾಲ್ಮೂರಿನಲ್ಲಿ ಬಸ್ ನಿಲ್ದಾಣ ಲೋಕಾರ್ಪಣೆಗೆ ಸಜ್ಜು Inauguration

ಪ್ರಮುಖ ಮುಖ್ಯಾಂಶಗಳು

  • 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿರ್ವಾಣ, ಬಹುದಿನಗಳ ಕನಸು ನನಸು

ಕೆ. ಕೆಂಚಪ್ಪ, ಮೊಳಕಾಲ್ಮೂರು


ರೇಷ್ಟೆ ಸೀರೆ ನೇಯ್ಗೆ ಮತ್ತು ವಾರಾಟಕ್ಕೆ ನಾಡಿನಾದ್ಯಂತ ಖ್ಯಾತಿ ಪಡೆದಿರುವ ಗಡಿನಾಡು ಮೊಳಕಾಲ್ಮೂರು ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗಿದ್ದು, ಸಾರ್ವಜನಿಕರ ಬಹುದಿನಗಳ ಕನಸು ನನಸಾಗುವ ಕಾಲ ಕೂಡಿಬಂದಿದೆ.

Inauguration

ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿಯಲ್ಲಿರುವ ಪಟ್ಟಣ ಸಾರಿಗೆ ಸೌಲಭ್ಯದಲ್ಲಿ ಬಹಳಷ್ಟು ಹಿಂದುಳಿದಿತ್ತು. ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗಿದ್ದು, ಆ. 23ರಂದು ಜನಸೇವೆಗೆ ಸಮರ್ಪಣೆಯಾಗಲಿದೆ. ಇದರಿಂದ ಸಾರ್ವಜನಿಕರಿಗೆ ವಾತ್ರವಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಓಡಾಟಕ್ಕೂ ಹೆಚ್ಚು ಅನುಕೂಲವಾಗಲಿದೆ.
ಖಾಸಗಿ ಬಸ್‌ಗಳ ಮೇಲಿನ ಅವಲಂಬನೆಗೆ ಮುಕ್ತಿ: ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಜಿಲ್ಲಾ ಕೇಂದ್ರ ಹಾಗೂ ದೂರದ ನಗರಗಳಿಗೆ ತೆರಳಲು ಜನರು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಿತ್ತು. ಚಳ್ಳಕೆರೆ ಬಸ್ ನಿಲ್ದಾಣ ಉದ್ಘಾಟನೆಗೊಂಡ ಬಳಿಕ ಕೆಲವೇ ಕೆಲವು ಬಸ್‌ಗಳು ಸಂಚರಿಸುತ್ತಿದ್ದವು. ಉಳಿದಂತೆ ಆಂಧ್ರದ ರಾಯದುರ್ಗದಿಂದ ಬೆಂಗಳೂರು, ಚಿತ್ರದುರ್ಗ, ಅನಂತಪುರ ಹಾಗೂ ಮಣಿಪಾಲ ವಾರ್ಗದಲ್ಲಿ ಸೀಮಿತ ಸೇವೆ ಇತ್ತು. ಇತ್ತೀಚೆಗೆ ಧರ್ಮಸ್ಥಳಕ್ಕೆ ನೇರ ಬಸ್ ಕಲ್ಪಿಸಲಾಗಿದ್ದು, ಮೊಳಕಾಲ್ಮುರು-ಚಳ್ಳಕೆರೆ ವಾರ್ಗದಲ್ಲೂ ಬಸ್‌ಗಳು ಸಂಚರಿಸುತ್ತಿವೆ. ಆದರೂ ಗ್ರಾಮೀಣ ಭಾಗಗಳಿಗೆ ಸಾರಿಗೆ ಸಂಪರ್ಕದ ತೀವ್ರ ಕೊರತೆಯಿತ್ತು. ಹೊಸ ನಿಲ್ದಾಣದಿಂದ ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.
ಗಡಿ ಗ್ರಾಮಗಳ ವಿದ್ಯಾರ್ಥಿಗಳಿಗೆ ವರದಾನ: ತಾಲೂಕಿನ ಗಡಿಭಾಗದ ಸಂತೆಗುಡ್ಡ, ಬಾಂಡ್ರಾವಿ, ಹನುಮಗುಡ್ಡ, ಹನುವಾಪುರ, ಚಿಕ್ಕೋಬನಹಳ್ಳಿ ಸೇರಿದಂತೆ ಗುಡ್ಡಗಾಡು ಪ್ರದೇಶಗಳ ಹಲವು ಗ್ರಾಮಗಳಿಗೆ ಇಂದಿಗೂ ಸರಿಯಾದ ಬಸ್ ಸೌಲಭ್ಯವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ. ಆಟೋ ಅಥವಾ ಬೈಕ್ ಇಲ್ಲದಿದ್ದರೆ ಶಾಲೆ ತಪ್ಪಿಸುವ ಪರಿಸ್ಥಿತಿ ಇತ್ತು. ಈಗ ತಾಲೂಕು ಕೇಂದ್ರದಿಂದ ಎಲ್ಲ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸುವ ಜತೆಗೆ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಮೊದಲಾದ ನಗರಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಗಲಾಟೆಗೆ ಬೀಳಲಿದೆ ಕಡಿವಾಣ: ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ತಡವಾಗಿ ಬಂದಾಗ ನಿಗದಿತ ಸಮಯಕ್ಕೆ ಹೊರಡುವ ವಿಚಾರವಾಗಿ ಖಾಸಗಿ ಬಸ್ ಏಜೆಂಟರು ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ನಡುವೆ ವಾತಿನ ಚಕಮಕಿ ಸಾವಾನ್ಯವಾಗಿತ್ತು. ಪ್ರಯಾಣಿಕರೇ ಮಧ್ಯಪ್ರವೇಶಿಸಿ ಜಗಳ ಬಿಡಿಸಬೇಕಾದ ಸನ್ನಿವೇಶಗಳಿದ್ದವು. ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆರಂಭವಾಗುವುದರಿಂದ ಇಂತಹ ಗಲಾಟೆಗಳಿಗೆ ಶಾಶ್ವತ ಕಡಿವಾಣ ಬೀಳಲಿದೆ.
--------
ಸಾರ್ವಜನಿಕರಿಗೆ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯವನ್ನು ಆದಷ್ಟು ತ್ವರಿತವಾಗಿ ಒದಗಿಸಬೇಕೆಂಬುದು ನನ್ನ ಅಪೇಕ್ಷೆಯಾಗಿತ್ತು. ಆ ಘಳಿಗೆ ಈಗ ಕೂಡಿ ಬಂದಿದೆ. ಆ.23 ರಂದು ಬಸ್ ನಿಲ್ದಾಣ ಲೋಕಾರ್ಪಣೆ ಮಾಡಲಾಗುವುದು. ಅದೇ ರೀತಿ 6 ಕೋಟಿ ರೂ. ಅಂದಾಜು ಮೊತ್ತದಲ್ಲಿ ರಾಯಾಪುರ ಸಮೀಪ ಸಿದ್ಧವಾಗಿರುವ ಬಸ್ ಡಿಪೋಗೆ ಹೆದ್ದಾರಿ ಸಂಪರ್ಕಿಸಲು ರಸ್ತೆ ನಿರ್ಮಿಸಿಕೊಡಲಾಗಿದೆ. ಶೀಘ್ರವೇ ಅದೂ ಕೂಡ ಉದ್ಘಾಟನೆ ಆಗಲಿದೆ.
ಎನ್.ವೈ. ಗೋಪಾಲಕೃಷ್ಣ ಶಾಸಕ