ಕಾಯಕಲ್ಪವಿಲ್ಲದೆ ಅವಸಾನ ಕಂಡಿರುವ ಮೊಳಕಾಲ್ಮೂರಿನ ಶತವಾನ ಕಂಡ ಶಾಲೆ. School
ಚಿತ್ರದುರ್ಗ

ಅಸ್ತಿತ್ವ ಕಳೆದುಕೊಳ್ಳುತ್ತಿದೆ ಬ್ರಿಟಿಷರ ಕಾಲದ ಶಾಲೆ

ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಾಲೆ ಈಗ ಅನಾಥ

ಕೆ.ಕೆಂಚಪ್ಪ ಮೊಳಕಾಲ್ಮೂರು

ಬ್ರಿಟಿಷರ ಕಾಲದಲ್ಲಿ ನಿರ್ವಾಣವಾಗಿದ್ದ ಶಾಲೆ ಶತವಾನ ಪೂರೈಸಿದರೂ ಕಾಯಕಲ್ಪ ಕಾಣದೆ ಅಸ್ಥಿತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದೆ.

ಮೊಳಕಾಲ್ಮೂರಿನ ಸರ್ಕಾರಿ ಕ್ಷೇತ್ರ ವಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ 1923ರಲ್ಲಿ ಸ್ಥಾಪನೆಯಾಗಿತ್ತು. ಪ್ರಸ್ತುತ 105 ವರ್ಷದಲ್ಲಿದೆ. ಸಾವಿರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅಡಿಗಲ್ಲಾಗಿದ್ದ ಶಾಲೆಯ 9 ಕೊಠಡಿಗಳ ಕೆಂಪು ಹೆಂಚಿನ ಛಾವಣಿ ಕುಸಿದು ಬಿದ್ದಿವೆ. ಕಿಟಕಿ, ಬಾಗಿಲು ಮಳೆ, ಬಿಸಿಲಿಗೆ ಹಾಳಾಗಿವೆ. ಇದಕ್ಕೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಧೋರಣೆ ಕಾರಣ ಎಂಬ ಆರೋಪವಿದೆ.

ಶಾಲೆ ಒಂದು ಕಾಲದಲ್ಲಿ ಇಡೀ ಊರಿಗೆ ಹೆಗ್ಗಳಿಕೆ ಪಡೆದುಕೊಂಡಿತ್ತು. 1923 ರಲ್ಲಿ ಪ್ರಾರಂಭವಾದ ಶಾಲೆಗೆ ಆರಂಭದಲ್ಲಿ ಬೆರಳಣಿಕೆಯಷ್ಟು ಮಕ್ಕಳ ದಾಖಲಾತಿ ಇತ್ತು. ಕಾಲಾನಂತರ 1ರಿಂದ 7ನೇ ತರಗತಿವರೆಗೆ ಒಂದು ಸಾವಿರ ಮಕ್ಕಳು ದಾಖಲಾಗುವ ಮೂಲಕ ಪ್ರತಿಷ್ಠಿತ ಶಾಲೆಯಾಗಿ ಹೊರ ಹೊಮ್ಮಿತು.

ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳಲ್ಲಿ ಕೆಲವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರೆ, ಇನ್ನು ಕೆಲವರು ಕೃಷಿ, ದೊಡ್ಡ ಮಟ್ಟದ ಉದ್ಯಮದಲ್ಲಿ ತೊಡಗಿ ಉತ್ತಮ ಜೀವನ ನಡೆಸುತ್ತಿದ್ದಾರೆ. ಅವರೆಲ್ಲ ಮನಸ್ಸು ವಾಡಿದರೆ ಶಾಲೆಗೆ ಹೊಸ ರೂಪ ಕೊಡುವುದು ದೊಡ್ಡ ವಿಷಯವಲ್ಲ. ಸಮನ್ವಯದ ಕೊರತೆಯಿಂದ ತಾವು ಕಲಿತ ಶಾಲೆ ಪರಿಸ್ಥಿತಿ ಬಗ್ಗೆ ಹಳೇ ವಿದ್ಯಾರ್ಥಿಗಳು ಆತ್ಮಾವಲೋಕನ ವಾಡಿಕೊಳ್ಳಬೇಕು. ಶಾಲೆ ಅಭಿವೃದ್ಧಿಗೆ ಜಾಗೃತರಾಗಿ ಸರ್ಕಾರದ ಗಮನ ಸೆಳೆಯುವ ಜತೆಗೆ ಆರ್ಥಿಕ ನೆರವಿನ ಉದಾರತೆ ತೋರಿದರೆ ಕಲಿತ ಶಾಲೆಗೆ ಕಾಯಕಲ್ಪ ಸಿಗಲಿದೆ ಎಂಬ ಅಭಿಪ್ರಾಯ ನಾಗರಿಕರಿಂದ ವ್ಯಕ್ತವಾಗಿದೆ.

ಊರ ಮಧ್ಯದಲ್ಲಿರುವ ಶಾಲೆ 6 ಎಕರೆಯಷ್ಟು ವಿಶಾಲ ಮೈದಾನ ಹೊಂದಿದೆ. ಶಿಕ್ಷಣ ಇಲಾಖೆ ಬಹುತೇಕ ಕಾರ್ಯಕ್ರಮಗಳು ಇಲ್ಲೇ ನಡೆಯುತ್ತವೆ. ಶಾಲಾ ಕಟ್ಟಡದ ಅವ್ಯವಸ್ಥೆ ಅರಿತ ಅಧಿಕಾರಿಗಳು ಈ ಹಿಂದೆ ಇಲಾಖೆಗೆ ಬಿಡುಗಡೆ ಆದ ಅನುದಾನದಲ್ಲಿ ಪಕ್ಕದಲ್ಲೇ 6 ಕೊಠಡಿಗಳನ್ನು ನಿರ್ಮಿಸಿದ್ದರು. ಗ್ರಂಥಾಲಯ, ಶಿಕ್ಷಕರ ಕೊಠಡಿ, ಇನ್ನುಳಿದ ನಾಲ್ಕು ಕೊಠಡಿಗಳಲ್ಲಿ 105 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಸ್ತುತ ಏಕೋಪಾಧ್ಯಾಯ ಶಾಲೆಯಾಗಿರುವುದು ವಿಪರ್ಯಾಸ.

1960 ರಲ್ಲಿ ಇದೇ ಶಾಲೆಯಲ್ಲಿ ಕಲಿತ ನಾನು ಉತ್ತಮ ನೌಕರಿ ಪಡೆದು ನಿವೃತ್ತನಾಗಿದ್ದೇನೆ. ಸಾಹಿತ್ಯ ಕೇತ್ರ ಹಾಗೂ ಅಂಧ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಶಾಲೆ 100 ವರ್ಷ ಪೂರೈಸಿದ್ದು, ಹಳೇ ವಿದ್ಯಾರ್ಥಿಗಳ ಸವಾಗಮದಲ್ಲಿ ಶತವಾನೋತ್ಸವ ಆಚರಿಸಬೇಕೆಂಬ ಸಂಕಲ್ಪದಲ್ಲಿ 4 ಬಾರಿ ಹಳೇ ವಿದ್ಯಾರ್ಥಿಗಳ ಸಭೆ ಕರೆಯಲಾಯಿತು. ಅದಕ್ಕೆ ಸಹಕಾರ ಸಿಗಲಿಲ್ಲ. ಇನ್ನಾದರೂ ಎಲ್ಲರೂ ಸೇರಿ ಶಾಲೆ ಅಭಿವೃದ್ಧಿ ಹಾಗೂ ಶತವಾನೋತ್ಸವ ಆಚರಿಸಬೇಕಾಗಿದೆ.
ಶ್ರೀನಿವಾಸ ಮೂರ್ತಿ ಸಾಹಿತಿ, ಮೊಳಕಾಲ್ಮೂರು.
ಕೆಲ ಗ್ರಾಮಗಳಲ್ಲಿ ಶತವಾನ ಕಂಡ ಶಾಲೆಗಳನ್ನು ಅಭಿವೃದ್ಧಿಪಡಿಸಿರುವುದಲ್ಲದೆ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಂಭ್ರಮಿಸಿದ್ದಾರೆ. ನಮ್ಮೂರಿನ ಹಳೇ ವಿದ್ಯಾರ್ಥಿಗಳು ರಾಜಕೀಯ ಹಾಗೂ ವೈಯಕ್ತಿಕ ಪ್ರತಿಷ್ಠೆ ತೋರದೆ ಸವಾನ ಮನಸ್ಕರಾಗಿ ವಿದ್ಯೆ ಕೊಟ್ಟ ದೇಗುಲದ ಕಾಯಕಲ್ಪಕ್ಕೆ ಕೈಜೋಡಿಸಬೇಕಾಗಿದೆ.
ಜಿಂಕಾ ಶ್ರೀನಿವಾಸ ಕಸಾಪ ತಾಲೂಕು ಅಧ್ಯಕ್ಷ, ಮೊಳಕಾಲ್ಮೂರು