ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಡಿ.ಸಿ. ಟಿ. ವೆಂಕಟೇಶ್ ಮಾತನಾಡಿದರು. 
ಚಿತ್ರದುರ್ಗ

ಜಿಲ್ಲಾಸ್ಪತ್ರೆಯಿಂದ ಬೇರೆಡೆ ರೋಗಿಗಳ ರೆಫರಲ್‌ಗೆ ತಡೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಸ್ಪತ್ರೆ ವೈದ್ಯಾಽಕಾರಿಗಳಿಗೆ ಡಿಸಿ ತಾಕೀತು
  • ಜಿಲ್ಲಾಸ್ಪತ್ರೆ ವೈದ್ಯಾಽಕಾರಿಗಳಿಗೆ ಡಿಸಿ ತಾಕೀತು
  • ಅನಗತ್ಯ ಖರೀದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಚಿತ್ರದುರ್ಗ: ಜಿಲ್ಲಾಸ್ಪತ್ರೆಗೆ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯುವಂತೆ ಶಿ-Áರಸು ಮಾಡುವುದು ನಿಲ್ಲಬೇಕೆಂದು ಡಿ.ಸಿ. ಟಿ. ವೆಂಕಟೇಶ್ ಜಿಲ್ಲಾಸ್ಪತ್ರೆ ಆರೋಗ್ಯಾಽಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಗುರುವಾರ ಜಿಲ್ಲಾಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ, ತುರ್ತು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರ ಎರವಲು ಸೇವೆ ಪಡೆದು, ಚಿಕಿತ್ಸೆ ನೀಡಬೇಕು ಎಂದರು.
ರೋಗಿಗಳನ್ನು ಅನಗತ್ಯವಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಶಿ-Áರಸು ಮಾಡಲಾಗುತ್ತಿದೆ ಎಂದು ಅಲ್ಲಿಯ ಡಿಸಿ ತಿಳಿಸಿದ್ದಾರೆ. ಇದು ಬದಲಾಗಬೇಕು. ನಮ್ಮ ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜನೆಗೊAಡಿದೆ. ತಜ್ಞ ವೈದ್ಯರು, ಬೋಧಕರು ಇ ದ್ದಾರೆ. ಆದರೂ ಖಾಸಗಿ ಆಸ್ಪತ್ರೆ, ಬೆಂಗಳೂರು ಹಾಗೂ ದಾವಣಗೆರೆಗೆ ರೋಗಿಗಳನ್ನು ಶಿ-Áರಸು ಮಾಡುವುದು ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿದ್ದು, ಮುಂದಿನ ಕೆಡಿಪಿ ಸಭೆ ವೇಳೆಗೆ ಈ ಕುರಿತು ಸಂಪೂರ್ಣ ಮಾಹಿತಿ ಕೊಡಬೇಕು ಎಂದ ರು. ಜಿಲ್ಲಾಸ್ಪತ್ರೆಗೆ ಬಣ್ಣ ಹಚ್ಚುವುದರಿಂದ ಮೂಲ ಸೌಕರ್ಯಗಳು ಸುಧಾರಿಸದು. ಕುಡಿಯುವ ನೀರು, ಶೌಚಗೃಹ, ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವಂತೆ ನಿರ್ದೇಶಿಸಿದರು.
ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಔಷದ, ಉಪಕರಣಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜಿಲ್ಲಾ ಶಸ್ತಚಿಕಿತ್ಸಕರ ಆರ್ಥಿಕ ವೆಚ್ಚದ ಅಽಕಾರದಡಿ ಖರ್ಚು ವೆಚ್ಚದ ಮಾಹಿತಿಯನ್ನು ಜಿಲ್ಲಾಸ್ಪತ್ರೆ ಅಽÃಕ್ಷಕರು ವರದಿ ನೀಡಬೇಕು. ರಾಜ್ಯ ಔಷಧ ಉಗ್ರಾಣದಿಂದ ಸರಬರಾಜಾಗುವ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಹೊರತುಪಡಿಸಿ, ಬೇರೆ ಔಷಧಗಳ ಖರೀದಿಗೆ ಟೆಂಡರ್ ಕರೆಯಬೇಕು.
ಸರಬರಾಜು ಆದ ಔಷಧ, ಉಪಕರಣಗಳು ಯೋಗ್ಯವಾಗಿಲ್ಲವೆಂದಾದರೆ ಕೂಡಲೇ ವರದಿ ನೀಡಿದರೆ, ಸರ್ಕಾರದ ಪ್ರಧಾನ ಕಾ ರ್ಯದರ್ಶಿ ಗಮನಸೆಳೆಯಲಾಗುವುದು. ಒಂದು ವೇಳೆ ಸರಬರಾಜಾದ ಔಷಧಗಳಿಗೆ ಮತ್ತೊಮ್ಮೆ ಟೆಂಡರ್ ಕರೆದು ಖರೀದಿಸಿರು ವುದು ಗಮನಕ್ಕೆ ಬಂದರೆ, ಸಂಬAಽಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಡಿಸಿ ಎಚ್ಚರಿಸಿದರು.
ಎಬಿಆರ್‌ಕೆ ಅನುದಾನದಲ್ಲಿ ವೈದ್ಯರಿಗೆ ಭತ್ಯೆ ಬಿಡುಗಡೆಗೆ ಕ್ರಮ ವಹಿಸುವಂತೆ ಡಿಎಸ್ ಡಾ.ಎಸ್.ಪಿ. ರವೀಂದ್ರ ಅವರಿಗೆ ಸೂಚಿಸಿದರು.

ಪ್ರತಿ ತಿಂಗಳು ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಬೇಕು. ವಾರ್ಡ್ಗಳಿಗೆ ರೋಗಿಗಳ ಸಂಬAಽಕರು ಅನಗತ್ಯವಾಗಿ ಬರದಂತೆ ಕ ಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಬೇಕೆಂದರು. ಜಿಲ್ಲಾಸ್ಪತ್ರೆಯಲ್ಲಿ ೨೦೨೫ರ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಆದ ಹೆರಿಗೆ, ಶಸ್ತçಚಿಕಿತ್ಸೆ ಇತ್ಯಾದಿ ಮಾಹಿತಿಯನ್ನು ರವೀಂದ್ರ ವಿವರಿಸಿದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಎಚ್‌ಒ ಡಾ. ರೇಣುಪ್ರಸಾದ್, ನಗರಸಭೆ ಆಯುಕ್ತೆ ಎಸ್ ಲಕ್ಷಿ÷್ಮÃ, ಆರ್‌ಎಂಒ ಡಾ. ಆನಂದ್ ಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ. ಶೀತಲ್‌ಪ್ರಶಾಂತ, ಕೋಟೆಶ್, ಟಿ.ಆರ್. ಕಿರಣ್‌ಶಂಕರ್, ಗೋವಿಂದರಾಯ, ಆರ್. ಹಬೀಬುಲ್ಲಾ, ಸಕ್ಕರೆ ನಾಗರಾಜ, ಎಂ.ಆರ್.ಸಿ. ಮೂರ್ತಿ ಉಪಸ್ಥಿತರಿದ್ದರು.
---
ಹಾಕರ್ ಜೋನ್ ನಿರ್ಮಾಣ
ನಗರದ ಜೋಗಿಮಟ್ಟಿ ಸರ್ಕಲ್ ಸಂಪರ್ಕಿಸುವ ಜಿಲ್ಲಾಸ್ಪತ್ರೆ ಮುಂದಿನ ರಸ್ತೆಯನ್ನು ಹಾಕರ್ ಜೋನ್ ಆಗಿ ಪರಿವರ್ತಿಸಬೇಕು. ನಗರ ಸಭೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ನೀಡಬೇಕೆಂದು ಡಿಸಿ ಹೇಳಿದರು. ಇದರೊಂದಿಗೆ ಖಾಸಗಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯಿಂದ ಅನುಮೋದನೆ ಪಡೆದು ತಕ್ಷಣ ಕಾರ್ಯಪ್ರವÊತ್ತರಾಗುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಽಕಾರಿ ಸೂಚಿಸಿದರು.
----
೪ ಬಾರಿ ಬಯೋಮೆಟ್ರಿಕ್
ಹೊರಗುತ್ತಿಗೆ ಸಿಬ್ಬಂದಿ ಅನಽಕÊತವಾಗಿ ಗೈರು ಹಾಜರಾಗುತ್ತಿರುವ ದೂರುಗಳಿವೆ. ೧೦೦ ಜನ ಗ್ರೂಫ್ ಡಿ ಸಿಬ್ಬಂದಿ ಇದ್ದರೂ, ಸ್ವಚ್ಛತೆ ಇಲ್ಲವಾಗಿದೆ. ವೈದ್ಯಕೀಯ, ಅರೆ ವೈದ್ಯಕೀಯ ಮತ್ತಿತರ ಅಽಕಾರಿ, ಸಿಬ್ಬಂದಿಯ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಿ ದಿನಕ್ಕೆ ೪ ಬಾರಿ ಬಯೋಮೆಟ್ರಿಕ್ ಹಾಜರಾತಿ ಪಡೆಯಬೇಕು ಎಂದು ಡಿಸಿ ಅವರು ಡಿಎಸ್ ಅವರಿಗೆ ನಿರ್ದೇಶಿಸಿದರು.