ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
- ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೇಸರ
- ಕಾಂಗ್ರೆಸ್ ಮಹಿಳಾ ಮೀಸಲಾತಿ ಪರವಿದೆ
- ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ
ಚಿತ್ರದುರ್ಗ: ಮಹಿಳಾ ಮೀಸಲಾತಿ ಈ ದೇಶದ ನಾರಿಯರ ಕನಸು. ಅದರ ಪರವಾಗಿ ಕಾಂಗ್ರೆಸ್ ಸದಾ ಇರಲಿದೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ‍್ಯ ಪೂರ್ವದಲ್ಲೂ ಕಿತ್ತೂರು ರಾಣಿ ಚೆನ್ನಮ್ಮ, ವೀರವನಿತೆ ಒನಕೆ ಓಬವ್ವ ಸೇರಿ ಅನೇಕ ವೀರನಾರಿಯರ ಕೊಡುಗೆ ಅವಿಸ್ಮರಣೀಯ. ಸ್ವಾತಂತ್ರ‍್ಯ ನಂತರದಲ್ಲೂ ಇದಕ್ಕೆ ಹೊರತಲ್ಲ. ಹೀಗಾಗಿ ಸಮಾನ ಅ ವಕಾಶ ನೀಡಬೇಕಿದೆ. ಮೀಸಲಾತಿ ಜಾರಿ ಹೆಸರಲ್ಲಿ ಬಿಜೆಪಿ ತನ್ನ ನಾಟಕ ನಿಲ್ಲಿಸುವುದರ ಜತೆಗೆ ದಾರಿ ತಪ್ಪಿಸುವ ಕೆಲಸ ಮಾಡ ಬಾರದು ಎಂದು ಒತ್ತಾಯಿಸಿದರು.
ಹಿಂದೂ ಕೋಡ್ ಬಿಲï ಕಾಂಗ್ರೆಸ್ ಅವಽಯಲ್ಲಿ ಜಾರಿಯಾಗಿದೆ. ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ನೀಡಬೇಕೆಂಬ ಆ ಶಯದೊಂದಿಗೆ ರಾಜೀವ್‌ಗಾಂಽ ಅಂಕಿತ ಹಾಕಿದರು. ಪಿ.ವಿ. ನರಸಿಂಹರಾವ್ ತಮ್ಮ ಅವಽಯಲ್ಲಿ ಜಾರಿಗೊಳಿಸಿದರು. ನಾರಿಯರಿಗೆ ಹೆಚ್ಚು ಮನ್ನಣೆ ನೀಡಿದ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ೨೦೨೩ರಲ್ಲೇ ವುಮೆ£್ಸï ಬಿಲ್ ಪಾಸ್ ಮಾಡಿದ್ದೇವೆಂದು ಹೇಳಿದ್ದರು. ಆದರೆ, ಪಂಚ ರಾಜ್ಯ ಚುನಾ ವಣೆ ವೇಳೆ ಕಳೆದ ಏಪ್ರಿಲ್‌ನಲ್ಲಿ ಎರಡು ದಿನ ವಿಶೇಷ ಅಽವೇಶನ ಕರೆದು ಮಹಿಳಾ ಮೀಸಲಾತಿ ಹೆಸರಿನಲ್ಲಿ ಡಿಲಿಮಿಟೇಷನ್‌ಗೆ ಮುಂದಾಗಿದ್ದು, ಅತ್ಯಂತ ಬೇಸರದ ಸಂಗತಿ. ಇದನ್ನು ವಿರೋಽಸುತ್ತಿದ್ದಾರೆಂದು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಯುತ್ತಿದೆ. ಇದು ನಿಜಕ್ಕೂ ನಾಚಿಕೆಗೇಡಿನ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮಹಿಳೆಯರನ್ನು ರಾಷ್ಟçಪತಿ, ಪ್ರಧಾನಿ, ಎಐಸಿಸಿ ಅಧ್ಯಕ್ಷೆ, ಸಚಿವರನ್ನಾಗಿಸಿ ಸದೃಢವಾಗಿ ಬೆಳೆಯಲು ಸಹಕರಿಸಿದೆ. ಆದರೆ, ಬಿಜೆಪಿ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ. ಸಾಕ್ಷರತೆ ಸೇರಿ ಸಾಕಷ್ಟು ಅಭಿವೃದ್ಧಿಯನ್ನು ಆಡಳಿತ ನಡೆಸಿದ ಎಲ್ಲ ಪಕ್ಷ ಗಳೂ ಮಾಡಿವೆ. ಜಿಎಸ್‌ಟಿ ಮೂಲಕ ಕರ್ನಾಟಕ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಹೀಗಿರುವಾಗ ದಕ್ಷಿಣ ಮತ್ತು ಉತ್ತರ ಭಾರತ ವೆಂಬ ಬೇಧ ಭಾವ ಬೇಡ ಎಂದು ಒತ್ತಾಯಿಸಿದರು.
೨೦೨೩ರಲ್ಲಿ ಘೋಷಿಸಿದ್ದ ಮಹಿಳಾ ಮೀಸಲಾತಿಯನ್ನು ಯಥಾವತ್ತಾಗಿ ಕೇಂದ್ರ ಜಾರಿಗೊಳಿಸಬೇಕು. ಎಸ್ಸಿ, ಎಸ್ಟಿಗೆ ನೀಡುವಂತೆ ಒಬಿಸಿ ಸಮುದಾಯಗಳಿಗೂ ಆದ್ಯತೆ ನೀಡಬೇಕು. ಡಿಲಿಮಿಟೇಷನ್ ಬೇಡವೆಂದು ಹೇಳುತ್ತಿಲ್ಲ. ಆದರೆ, ಸಮಾನತೆ ದೃಷ್ಟಿಯಿಂದ ನ್ಯಾಯ ಪರವಿರಲಿ ಎಂದು ಮನವಿ ಮಾಡಿದರು.
ಪಕ್ಷದ ಜಿ¯್ಲÁಧ್ಯಕ್ಷ ಎಂ.ಕೆ. ತಾಜ್‌ಪೀರ್, ಮಹಿಳಾ ಜಿ¯್ಲÁಧ್ಯಕ್ಷೆ ಗೀತಾ ನಂದಿನಿಗೌಡ, ಎನ್‌ಎಸ್‌ಯುಐನ ಸುಮಾಯಾ, ಗ್ಯಾ ರಂಟಿ ಅನುಷ್ಠಾನ ಪ್ರಾಽಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ಪದಾಽಕಾರಿಗಳಾದ ಹಾಲಸ್ವಾಮಿ, ಸಂಪತ್‌ಕುಮಾರ್, ಮೋಕ್ಷಾ ರುದ್ರ ಸ್ವಾಮಿ,ರುದ್ರಾಣಿ ಗಂಗಾಧರ್, ಮೆಹಬೂಬ್ ಕಾತೂನ್, ಮೀನಾಕ್ಷಮ್ಮ, ಶಶಿಕಲಾ ಸುರೇಶ್‌ಬಾಬು ಇತರರಿದ್ದರು.