ಭಾರತೀಯ ಕಮ್ಯೂನಿಸ್ಟ್ ಪಕ್ಷದ ಶತಮಾನದ ಸಂಭ್ರಮ ಜಾಥಾ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಉದ್ಘಾಟಿಸಿದರು. ನಿಶಾನಿ ಜಯಣ್ಣ, ಆರ್. ಶಿವಣ್ಣ, ಎಂ.ಕೆ. ತಾಜ್‌ಪೀರ್, ಡಿ. ಎನ್. ಮೈಲಾರಪ್ಪ, ವೇದಮ್ಮ, ಪ್ರೊ.ಜೆ. ಯಾದವರೆಡ್ಡಿ, ಬಸ್ತಿಹಳ್ಳಿ ಸುರೇಶ್‌ಬಾಬು, ಬಸವರಾಜ್ ಇತರರು ಇದ್ದರು. 
ಚಿತ್ರದುರ್ಗ

ದೇಶ ವಿಭಜಿಸಲು ಮುಂದಾಗಿರುವ ಬಿಜೆಪಿಗೆ ಅಽಕಾರ ಬೇಡ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ರಾಜ್ಯ ಕಾರ್ಯದರ್ಶಿ ಸಾ.ತಿ. ಸುಂದರೇಶ್ ಹೇಳಿಕೆ
  • ದುರ್ಗಕ್ಕೆ ಆಗಮಿಸಿದ ಪಕ್ಷದ ಶತಮಾನೋತ್ಸವದ ಜಾಥಾ
  • ದೇಶದ ಸಂಪತ್ತನ್ನು ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿರುವ ಬಿಜೆಪಿ
ಚಿತ್ರದುರ್ಗ: ಬಿಜೆಪಿ ಧರ್ಮ, ಜಾತಿ ಆಧಾರದ ಮೇಲೆ ದೇಶ ವಿಭಜಿಸುತ್ತಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾ.ತಿ. ಸುಂದ ರೇಶ್ ಆಪಾದಿಸಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಅಂಗವಾಗಿ ಹೊರಟಿರುವ ಜಾಥಾ ಮಂಗಳವಾರ ನಗರಕ್ಕೆ ಆಗಮಿಸಿದ ಸಂದ ರ್ಭ, ಒನಕೆ ಓಬವ್ವ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ, ಆರ್‌ಎಸ್‌ಎಸ್ ಕೈಗೆ ಅಽಕಾರ ಕೊಡಬಾರದೆಂಬ ಉದ್ದೇಶದಿಂದ ರಾಜ್ಯದಲ್ಲಿ ೨೪ ದಿನಗಳ ಕಾಲ ಜಾಥಾ ಸಂಚರಿಸಲಿದೆ. ದೇಶದ ಸಂಪತ್ತನ್ನು ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿರುವ ಬಿಜೆಪಿಯನ್ನು ಅಽಕಾರದಿಂದ ಕೆಳಗಿಳಿಸಬೇಕಿದೆ. ನಾಡಿ ನ ಬಹುತ್ವ, ಹಿಂದು-ಮುಸ್ಲಿA ಏಕತೆ ಉಳಿಸಬೇಕಿದೆ ಎಂದರು.
ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕು. ಸಮಾನತೆ ನಮ್ಮ ಕನಸು. ಪ್ರತಿ ದಲಿತ ಕಾಲನಿಗಳ ಅಭಿವೃದ್ಧಿಯಾಗಬೇಕಿದೆ. ಸೂರಿಗಾಗಿ ಸಮರ ನಮ್ಮ ಹೋರಾಟವಾಗಿದೆ ಎಂದ ಅವರು, ಕೇಂದ್ರದ ಜನ ವಿರೋಽ ಸರ್ಕಾರ ತೊಲಗಿಸಿ, ಬಡವರಿಗೆ ಸೂರು ಒದಗಿಸಬೇಕಿದೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ. ಸುರೇಶ್‌ಬಾಬು ಮಾತನಾಡಿ, ಕಮ್ಯುನಿಸ್ಟ್, ಕಾಂಗ್ರೆಸ್, ಮುಸ್ಲಿಂಲೀಗ್ ನಾಯಕರು ಹೊರತುಪಡಿಸಿ ಬ್ರಿಟಿಷರ ವಿರುದ್ಧ ಯಾರೂ ಹೋರಾಟ ಮಾಡಿಲ್ಲ. ಕೋಮುಗಲಭೆ, ಸಂಘರ್ಷ ಬಿಜೆಪಿ ನೀತಿಗಳಾಗಿವೆ. ೧೯೨೫ರಲ್ಲಿ ಕಾರ್ಮಿಕರ ಪರ ಕಾನೂನು ಜಾರಿಗೆ ತರುವಲ್ಲಿ ಸಿಪಿಐನದು ಬಹುದೊಡ್ಡ ಕೊಡುಗೆಯಿದೆ. ದೇಶದ ಸ್ವಾತಂತ್ರ‍್ಯದ ಹೋರಾಟದಲ್ಲಿ ಆರ್‌ಎಸ್‌ಎಸ್ ಕೊಡುಗೆ ಶೂನ್ಯ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಉದ್ದೇಶ ಒಂದೆ. ಸ್ವಾತಂತ್ರ‍್ಯಕ್ಕಾಗಿ ಅನೇಕ ಹಿರಿಯರು ತ್ಯಾಗ, ಬಲಿದಾನ ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ರಕ್ಷಣೆಗೆ ಮತ್ತೆ ಹೋರಾಟ ಮಾಡಬೇಕಾಗಿದೆ. ಎಲ್ಲರಿಗೂ ಸಮಾನ ಹಕ್ಕು ಸಿಗಬೇಕಿದೆ ಎಂದರು.
ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಎಚ್.ಎಂ. ಸಂತೋಷ ಮಾತನಾಡಿ, ಸೌಹಾರ್ದತೆ, ಸಮ ಸಮಾಜ ನಿರ್ಮಾಣವಾಗಬೇಕಾಗಿರುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿದರು. ಜಿಲ್ಲಾ ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಚಿತ್ರದುರ್ಗ ಟೌನ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ. ನಿಶಾನಿ ಜಯಣ್ಣ, ಉಮಾಪತಿ, ಕುಮಾರಸ್ವಾಮಿ, ಬಸವರಾಜ್, ಹನುಮಂತಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ಜನಾರ್ದನ್, ವೇದಮ್ಮ, ಭಾಗ್ಯಮ್ಮ, ಅಮಿನಾಭಿ, ಪ್ರಸನ್ನಕುಮಾರ್, ಇ. ಸತ್ಯಕೀರ್ತಿ ಇತರರು ಇದ್ದರು.