ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವದ ವೇದಿಕೆ ನಿರ್ಮಾಣಕ್ಕಾಗಿ ಶನಿವಾರ ನಡೆದ ಭೂಮಿ ಪೂಜೆ ಕರ‍್ಯಕ್ರ ಮದಲ್ಲಿ ರಾಜ್ಯಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ,ಕೇAದ್ರದ ಮಾಜಿ ಸಚಿವರಾದ ಜಿ.ಎಚ್.ಸಿದ್ದೇಶ್ವರ್,ಎ.ನಾರಾಯಣ ಸ್ವಾಮಿ,ಸಂಸದ ಗೋವಿಂದ ಎಂ.ಕಾರಜೋಳ,ಮಾಜಿ ಸಚಿವರಾದ ಬಿ.ಶ್ರೀರಾಮುಲು,ಕರುಣಾಕರರೆಡ್ಡಿ,ಮುನಿರತ್ನ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇತರರು ಇದ್ದರು.
- ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ಅಭಿಮತ
- ಚಿತ್ರದುರ್ಗದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ
- ಕೇಂದ್ರ ಗೃಹ ಸಚಿವ ಅಮಿತ್ ಷಾ
ಚಿತ್ರದುರ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಬಿಜೆಪಿ ಕಾರ್ಯಕರ್ತರ, ಮುಂದಿನ ಚುನಾವ ಣೆಯಲ್ಲಿ ಬಿಜೆಪಿಯನ್ನು ಅಽಕಾರಕ್ಕೆ ತರುವ ಹಬ್ಬವಾಗಲಿದೆ ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಚಿತ್ರದುರ್ಗದಲ್ಲಿ ಭಾನುವಾರ ಅಭಿಮಾನೋತ್ಸವದ ಪೆಂಡಾಲ್ ನಿರ್ಮಾಣ ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿ, ಪುರ ಸಭಾ ಸದಸ್ಯ, ಶಾಸಕ, ಸಂಸದ, ಪ್ರತಿಪಕ್ಷ ನಾಯಕ, ಪಕ್ಷದ ಸ್ವಾಭಿಮಾನಿ ಕಾರ್ಯಕರ್ತರು ಇದ್ದಾರೆ. ಸಿಎಂ ಆಗಿ ಸಾಧನೆ ಮಾಡಿರುವ ಯಡಿಯೂರಪ್ಪ ಅವರ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ಕೇAದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಈ ಮೊದಲು ಭರಮಸಾಗರದಲ್ಲಿ ಸಮಾರಂಭ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಚಿತ್ರದುರ್ಗವನ್ನು ಆಯ್ದುಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ರಾಜ್ಯದ ಜನರು ಯಡಿಯೂರಪ್ಪ ಇನ್ನೂ ನೂರ್ಕಾಲ ಬಾಳಲಿ ಎಂದು ಹರಸಬೇಕು ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಅಽಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ, ಅವರಿಂದಾಗಿ ಅನೇಕರು ಇಂದು ನಾಯಕರಾಗಿ ಬೆಳೆದಿದ್ದಾರೆ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಮದಕರಿನಾಯಕರ ನಾಡಿನಿಂದ ಬಿಜೆಪಿ ರಣಕಹಳೆ ಮೊಳಗಿಸಲಿದೆ. ಯಡಿಯೂರಪ್ಪ ಬಿಜೆಪಿಯ ಭೀಷ್ಮನಿದ್ದಂತೆ ಎಂದು ಬಣ್ಣಿಸಿದರು.
ಮಾಜಿ ಸಚಿವ ಮುನಿರತ್ನ ಮಾತನಾಡಿ, ಯಡಿಯೂರಪ್ಪ ಅವರ ಸುದೀರ್ಘ ಐವತ್ತು ವರ್ಷಗಳ ಹೋರಾಟ ಮತೊಬ್ಬರಿಂದ ಸಾಧ್ಯವಿಲ್ಲ ಎಂದರು.
ಎಂಎಲ್‌ಸಿ ರವಿಕುಮಾರ್ ಮಾತನಾಡಿ, ಯಡಿಯೂರಪ್ಪ ಅವರಿಗೆ ಖುಷಿಯಾಗುವಂತೆ ಈ ಕಾರ್ಯಕ್ರಮ ನಡೆಯಬೇಕೆಂದರು.
ಮಾಜಿ ಸಚಿವ ಹರತಾಳ ಹಾಲಪ್ಪ ಮಾತನಾಡಿ, ರಾಜ್ಯದ ಅನೇಕರಿಗೆ ಇಂದು ಯಡಿಯೂರಪ್ಪ ಅವರಿಂದಾಗಿ ಸ್ಥಾನ, ಮಾನ, ಅಡ್ರೆಸ್ ಸಿಕ್ಕಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸ್ವಾಗತ ಸಮಿತಿ ಅಧ್ಯಕ್ಷ, ಸಂಸದ ಗೋವಿಂದ ಎ.ಕಾರಜೋಳ, ಕರ‍್ಯಾಧ್ಯಕ್ಷ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಮತ್ತಿತರರು ಮಾತನಾಡಿದರು.
ಬಿಜೆಪಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಕರುಣಾಕರ ರೆಡ್ಡಿ, ಎನ್.ಮಹೇಶ್, ಆಚಾರ್‌ಹಾಲಪ್ಪ, ಡಾ.ಎಂ.ಚAದ್ರಪ್ಪ, ಜ್ಯೋತಿಗಣೇಶ್, ಬೆಳ್ಳಿಪ್ರಕಾಶ್, ಹರೀಶ್‌ಪೂಂಜಾ, ಸಿ.ಕೆ.ರಾಮಮೂರ್ತಿ, ಕೃಷ್ಣನಾಯ್ಕ್, ಕೆ.ಎಸ್.ನವೀನ್, ಧನಂಜಯ ಸರ್ಜಿ, ಚಿದಾನಂದಗೌಡ, ವೈ.ಎ.ನಾರಾಯಣಸ್ವಾಮಿ, ಶಿವಯೋಗಿಸ್ವಾಮಿ, ಸಂಜಯ್‌ಪಾಟೀಲ್, ಎಸ್‌ಕೆ.ಬಸವರಾಜನ್, ಪ್ರೀತಂಗೌಡ, ಬಸವರಾಜ ದಡೇಸೂಗುರು, ರೂಪಾಲಿನಾಯ್ಕ್, ಮಂಜುಳಾ, ಎಸ್.ಲಿಂಗಮೂರ್ತಿ, ಡಾ.ಸಿದ್ದಾರ್ಥ ಗುಂಡಾರ್ಫಿ, ಜಿ.ಎಸ್.ಅನಿತ್‌ಕುಮಾರ್, ಉಮೇಶ್ ಕಾರಜೋಳ, ಹನುಮಂತೇಗೌಡ, ಎ.ಮುರಳಿ, ಮಾಧುರಿ ಗಿರೀಶ್, ಮೋಹನ್‌ಕುಮಾರ್, ವೆಂಕಟೇಶ್ ಯಾದವ್, ಸಿದ್ದಾಪುರದ ಸುರೇಶ್, ಸಂಪತ್‌ಕುಮಾರ್, ಪರಶುರಾಮ್, ಅರುಣ್, ವೀರಶೈವ ಅರ್ಬನ್‌ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್ ಸೇರಿದಂತೆ ನಾನಾ ಪ್ರ ಮುಖರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಪದಾಽಕಾರಿಗಳು ಇದ್ದರು.
ಭೂಮಿ ಪೂಜೆ ಕರ‍್ಯಕ್ರಮ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕೀಬಾತ್ ಕರ‍್ಯಕ್ರಮವನ್ನು ಪಕ್ಷದ ಪ್ರಮುಖರು, ಕರ‍್ಯಕರ್ತರು ವೀಕ್ಷಿಸಿದರು. ನಂತರ ಚಿತ್ರದುರ್ಗದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಸಮಾರಂಭದ ಪೂರ್ವಭಾವಿ ಸಭೆ ಜರುಗಿತು.
ವಿವಾಹ ವಾರ್ಷಿಕೋತ್ಸವದ ಶುಭ ಕೋರಿಕೆ
ಬಿ.ವೈ.ವಿಜಯೇಂದ್ರ ಅವರಿಗೆ ರೇಣುಕಾಚಾರ್ಯ ಸೇರಿದಂತೆ ಹಲವರು ವಿವಾಹ ವಾರ್ಷಿಕೋತ್ಸವದ ಶುಭ ಕೋರಿದರು. ಶಾಲು, ಹಾರದೊಂದಿಗೆ ವಿಜಯೇಂದ್ರ ಅವರನ್ನು ಗೌರವಿಸಲಾಯಿತು.
ಅಧ್ಯಕ್ಷರಾದ ಬಳಿಕ ೪-೫ಲಕ್ಷ ಕಿ.ಮೀ ದೂರ ಪ್ರವಾಸ
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಮಾತನಾಡಿ, ಜನಸಂಘದ ಕಾಲದಲ್ಲಿ ಪಕ್ಷಕ್ಕೆ ಒಂದೂ ಮತ ಇರಲಿಲ್ಲ. ಇಂತಹ ಕಠಿಣ ಸ್ಥಿತಿಯಲ್ಲಿ ನಡೆದು, ಸೈಕಲ್‌ನಲ್ಲಿ ಸುತ್ತಿ ಯಡಿಯೂರಪ್ಪ ಪಕ್ಷವನ್ನು ಕಟ್ಟಿದ್ದಾರೆ. ಅಽಕಾರಕ್ಕಾಗಿ ಅವರು ಪಕ್ಷ ಕಟ್ಟಲಿಲ್ಲ. ರಾಜ್ಯದ ರೈತರು, ಬ ಡವರು, ದಲಿತರ ಪರವಾಗಿ ಹೋರಾಟ ಮಾಡಿದ್ದಾರೆ. ಅಂಥವರ ಅಭಿಮಾನೋತ್ಸವವನ್ನು ಇಲ್ಲಿ ಆಯೋಜಿಸುತ್ತಿರುವುದು ನಮಗೆ ಹೆ ಮ್ಮೆ. ಬಿಜೆಪಿ ಅಽಕಾರ ಕಳೆದುಕೊಂಡ ಬಳಿಕ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರು ೪-೫ ಲಕ್ಷ ಕಿ. ಮೀ. ದೂರ ರಾಜ್ಯ ಪ್ರವಾಸ ಮಾಡುವ ಮೂಲಕ ಕರ‍್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ಅಭಿಮಾನೋತ್ಸವ ಚಿತ್ರದುರ್ಗದ ಕರ‍್ಯಕರ್ತರ ಮರ್ಯಾದೆ ಪ್ರಶ್ನೆ. ತುಂಬಾ ಅಚ್ಚುಕಟ್ಟಾಗಿ ನಡೆಯಬೇಕೆಂದರು.
ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪಕ್ಷದ ನಾಯಕರು ವಿಶೇಷ ಪೂಜೆ ಸಲ್ಲಿಸಿದರು. ಗೋಪೂಜೆ, ಧ್ವಜಸ್ತಂಭ ಪೂಜೆ, ಧ್ವಜಾ ರೋಹಣ ನಂತರ ಭೂಮಿ ಪೂಜೆ ನೆರವೇರಿಸಲಾಯಿತು. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಿವಲಿಂಗಾನAದ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವ ಪ್ರಭು ಸ್ವಾಮೀಜಿ ಮತ್ತಿತರ ಮಠಾಽÃಶರು, ಹರಗುರು ಚರಮೂರ್ತಿಗಳು ಸಾನ್ನಿಧ್ಯ ವಹಿಸಿದ್ದರು.
ಅಭಿಮಾನೋತ್ಸವ ಬಿಜೆಪಿಯ ಒಗ್ಗಟ್ಟಿನ ಪ್ರದರ್ಶನ
ಮಾಜಿ ಸಿಎಂ ಯಡಿಯೂರಪ್ಪ ಅವರ ೫೦ ವರ್ಷ ಸಾರ್ಥಕ ಸೇವೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ.೯ರಂದು ಬಿಎಸ್‌ವೈ ಅಭಿಮಾನೋತ್ಸವ ಏರ್ಪಡಿಸಲಾಗಿದ್ದು, ೫ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದು, ಬಿಎಸ್‌ವೈ ಅವರನ್ನು ಸನ್ಮಾನಿಸಲಾಗುವುದು ಎಂದರು.
ಒಳ ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟ ಜಾತಿಗಳಿಗೆ ಮೋಸ ಮಾಡಿದ್ದಾರೆ. ಸಚಿವರಾದ ಡಾ.ಜಿ. ಪರಮೇಶ್ವರ್, ಮಹದೇವಪ್ಪ ಅವರು ಯಾಕೆ ಸುಮ್ಮನಿದ್ದಾರೆ? ಶೇ.೫೬ ಇದ್ದ ಮೀಸಲು ಪ್ರಮಾಣವನ್ನು ೫೦ಕ್ಕೆ ಇಳಿಸುವ ಕೆಲಸ ವನ್ನು ಕಾಂಗ್ರೆಸ್ ಮಾಡಿದೆ. ಹಿಂದಿನ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರನ್ನು ಕಡೆಗಣಿಸಿದೆ ಎಂದರು.
ವಿಧಾನಸಭೆಗೆ ನಡೆದ ಉಪ ಚುನಾವಣೆ ನಂತರ ಕಾಂಗ್ರೆಸ್‌ನಲ್ಲಿ ಗೊಂದಲ ಮೂಡಿದೆ. ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ. ಸಿ ಎಂ, ಡಿಸಿಎಂ ಹೊಂದಾಣಿಕೆ ಇಲ್ಲದಂತಾಗಿದೆ. ಸಿಎಂ ಯಾರು ಆಗಬೇಕು ಎನ್ನುವ ಕುರಿತು ಚರ್ಚೆ ನಡೆದಿದೆ. ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದು, ಈ ಗದ್ದಲದಲ್ಲೇ ಸರ್ಕಾರ ಬಿದ್ದುಹೋಗುವ ಸಾಧ್ಯತೆಯಿದೆ. ಚುನಾವಣೆ ನಡೆದರೆ ೧೩೦ಕ್ಕೂ ಅಽಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಽಸಲಿದೆ ಎಂದರು.