ರಾಜ್ಯ ಅಂಗವಿಕಲರ ಒಕ್ಕೂಟದ ಖಜಾಂಚಿ ಎಂ.ತಿಪ್ಪಮ್ಮ,ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಸ್. ಪಾಪಣ್ಣ, ತಾಲೂಕು ಅಧ್ಯಕ್ಷ ಪರಶುರಾಂ, ಕಾರ್ಯದರ್ಶಿ ರೇಷ್ಮಾಭಾನು, ಚಳ್ಳಕೆರೆ ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುಜಾತ, ಸಲಹಾ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಇದ್ದರು. 
ಚಿತ್ರದುರ್ಗ

ಅಂಗವಿಕಲರಿAದ ಬೆಂಗಳೂರಿಗೆ ಬೈಕ್ ರ‍್ಯಾಲಿ

ಪ್ರಮುಖ ಮುಖ್ಯಾಂಶಗಳು

  • ೨೩ರಂದು ಬೆಂಗಳೂರಲ್ಲಿ ಸಮಾವೇಶ
  • ಅಂಗವಿಕಲರ ನಡೆ ರಾಜಕೀಯದ ಕಡೆ ಅಭಿಯಾನ
  • ರಾಜ್ಯ ಅಂಗವಿಕಲರ ಒಕ್ಕೂಟ
ಚಿತ್ರದುರ್ಗ: ಅಂಗವಿಕಲರ ನಡೆ ರಾಜಕೀಯದ ಕಡೆ ಅಭಿಯಾನದ ಅಂಗವಾಗಿ ಬೆಂಗಳೂರು ಚಲೋ ಬೈಕ್ ರ‍್ಯಾಲಿ ಹಮ್ಮಿಕೊಳ್ಳ ಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟದ ಖಜಾಂಚಿ ಎಂ.ತಿಪ್ಪಮ್ಮ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾಂ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದು ರ್ಗ,ವಿಜಯಪುರ, ಬಾಗಲಕೋಟೆ, ಕೂಡ್ಲಿಗಿ, ಹೊಸಪೇಟೆ, ಕಲಬುರುಗಿ, ಬೀದರ್, ಯಾದಗಿರಿ, ಕೊಪ್ಪಳ ಮತಿತರ ಕಡೆಗಳಿಂದ ಹೊರಡಲಿರುವ ಬೈಕ್ ರ‍್ಯಾಲಿಗೆ ಬೀದರ್‌ನ ಬಸವ ಕಲ್ಯಾಣದಲ್ಲಿ ಫೆ.೧೯ರಂದು ಚಾಲನೆ ಸಿಗಲಿದೆ. ರ‍್ಯಾಲಿ ೨೩ರಂದು ಬೆಂಗ ಳೂರಿನ ಸ್ವಾತಂತ್ರ‍್ಯ ಉದ್ಯಾನ ತಲುಪಲಿದೆ. ಅಂದು ಒಂದು ಸಾವಿರ ಬೈಕ್‌ಗಳು ಬೆಂಗಳೂರು ಸೇರಲಿವೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಅಂಗವಿಕಲರಿಗೆ ಶೇ.೫ ಮೀಸಲಾತಿ. ರಾಜ್ಯ ಬಜೆಟ್‌ನಲ್ಲಿ ಅಂಗವಿಕಲರ ಅನುದಾನದ ಮೊತ್ತ ವನ್ನು ದ್ವಿಗುಣಗೊಳಿಸಬೇಕು. ಶಕ್ತಿ ಯೋಜನೆಯನ್ನು ಪುರುಷ ಅಂಗವಿಕಲರಿಗೂ ವಿಸ್ತರಿಸಬೇಕು. ಬಸ್‌ಪಾಸ್‌ಗೆ ಶುಲ್ಕ ವಿಽಸಬಾರದು. ೧೪೦೦ ರೂ. ಮಾಶಾಸನ ಮೊತ್ತವನ್ನು ೬ ಸಾವಿರ ರೂ.ಗೆ ಹೆಚ್ಚಿಸಿ ಪ್ರತಿ ತಿಂಗಳು ೧೦ ರೊಳಗೆ ಪಾವತಿಸುವುದೂ ಸೇರಿ ಇತ್ಯಾದಿ ಬೇಡಿಕೆಗಳ ಈ ಡೇರಿಕೆಗೆ ಆಗ್ರಹಿಸಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಎಸ್. ಪಾಪಣ್ಣ, ತಾಲೂಕು ಅಧ್ಯಕ್ಷ ಪರಶುರಾಂ, ಕಾರ್ಯದರ್ಶಿ ರೇಷ್ಮಾಭಾನು, ಚಳ್ಳಕೆರೆ ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸುಜಾತ, ಸಲಹಾ ಸಮಿತಿ ಸದಸ್ಯ ತಿಪ್ಪೇಸ್ವಾಮಿ ಇದ್ದರು.