ಚಿತ್ರದುರ್ಗದಲ್ಲಿ ಶುಕ್ರವಾರ ಸಂಸದ ಗೋವಿಂದ ಎಂ.ಕಾರಜೋಳ ಅವರು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಮುಖರೊಂದಿಗೆ ಚರ್ಚಿಸಿದರು. ಬಿ.ಎ.ಲಿಂಗಾರೆಡ್ಡಿ, ಜೆ.ಯಾದವರೆಡ್ಡಿ, ಜಿ.ಸುರೇಶ್‌ಬಾಬು, ಹಂಪಯ್ಯನ ಮಾಳಿಗೆ ಧನಂಜಯ ಇತರರಿದ್ದರು. 
ಚಿತ್ರದುರ್ಗ

ಭದ್ರೆ, ಪರಿಷ್ಕೃತ ಪ್ರಸ್ತಾವನೆಗೆ ಪ್ರಾಮಾಣಿಕ ಪ್ರಯತ್ನ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಜೋಳ ಭರವಸೆ
  • ಸಮಿತಿ ಪದಾಽಕಾರಿಗಳೊಂದಿಗೆ ಸಮಾಲೋಚನೆ
  • ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ
ಚಿತ್ರದುರ್ಗ: ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿಯಡಿ ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಪ್ರಸ್ತಾವನೆಗೆ ಕೇಂದ್ರದ ಅನು ಮೋದನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.
ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಸಮಿತಿ ಪದಾಽಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಕಳೆದ ಬಾರಿ ಭದ್ರಾ ಮೇಲ್ದಂಡೆಯನ್ನು ಪಿಎಂಕೆಎಸ್‌ವೈಗೆ ಸೇರಿಸಬೇಕೆಂಬ ಪ್ರಸ್ತಾವನೆಗೆ ಕಾರಣಾಂತರಗಳಿAದ ಕೇಂದ್ರ ಸಂಪುಟದ ಅನುಮೋದನೆ ದೊರೆಯಲಿಲ್ಲ.
ಈ ಬಾರಿ ಆಗದಂತೆ ನೋಡಿಕೊಳ್ಳಲಾಗುವುದು. ರಾಜ್ಯ ಸರ್ಕಾರ ಸಲ್ಲಿಸುವ ಪ್ರಸ್ತಾವನೆಯ ಅನುಮೋದನೆಗೆ ಗಂಭೀರವಾಗಿ ಪ್ರಯತ್ನಿಸಲಾಗುವುದು ಎಂದರು.
ಹಿAದೆ ಸಲ್ಲಿಸಿದ್ದ ಪ್ರಸ್ತಾವನೆ ಅನುಸಾರ ಕೇಂದ್ರದಿAದ ೫೩೦೦ ಕೋಟಿ ರೂ.ಬರಬೇಕಿತ್ತು. ಈಗ ಮೇಲ್ದಂಡೆ ಯೋಜನೆಯ ಪರಿ ಷ್ಕೃತ ಪ್ರಸ್ತಾವನೆಯಿಂದ ವೆಚ್ಚ ಹೆಚ್ಚಾಗಲಿದ್ದು, ರಾಜ್ಯ ಸರ್ಕಾರ ೨೧,೧೬೭ ಕೋಟಿ ರೂ.ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದೆ. ಯೋಜ ನೆಗೆ ರಾಜ್ಯ ಸರ್ಕಾರ ಈಗಾಗಲೇ ಡ್ರಿಪ್ ಹೊರತುಪಡಿಸಿ ೧೦ ಸಾವಿರ ಕೋಟಿ ರೂ.ವ್ಯಯ ಮಾಡಿದೆ. ಉಳಿದ ೧೧ ಸಾವಿರ ಕೋಟಿ ರೂ.ಗಳಲ್ಲಿ ಕೇಂದ್ರ ಶೇ.೬೦ ನೆರವು ನೀಡಬೇಕಾಗುತ್ತದೆ ಎಂದರು.
ತಾವು ಗುರುವಾರ ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಅವರು ಅತ್ಯಂತ ಕಾಳಜಿ ಯಿಂದ ಆಲಿಸಿದರು. ಅನುದಾನ ಬಿಡುಗಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆAದು ಗೋವಿಂದ ಕಾರಜೋಳ ಹೇಳಿದರು. ಕೇಂದ್ರ ಅನುದಾನ ಕೊಡುತ್ತದೆ ಎಂಬ ಕಾರಣಕ್ಕೆ ಯೋಜನೆ ಕಾಮಗಾರಿಯನ್ನು ಆರಂಭಿಸಿದ್ದಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರವೇ ಪೂರ್ಣ ಪ್ರಮಾಣದಲ್ಲಿ ಯೋಜನೆ ಮುಗಿಸಬೇಕಿತ್ತು. ರಾಜ್ಯಕ್ಕೆ ಹಣಕಾಸು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ತಾವು ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟಿçÃಯ ಯೋಜನೆಗೆ ಒತ್ತಾಯಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ಬಿ.ಎ.ಲಿAಗಾರೆಡ್ಡಿ, ಜೆ.ಯಾದವರೆಡ್ಡಿ, ಜಿ.ಸುರೇಶ್‌ಬಾಬು, ಹಂಪಯ್ಯನ ಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾಬು, ಮಲ್ಲಾಪುರ ತಿಪ್ಪೇಸ್ವಾಮಿ, ಹುಣಸೆಕಟ್ಟೆ ಕಾಂತರಾಜ್, ಎಂ.ಎ.ಸೇತುರಾA, ಮಾಧುರಿ ಗಿರೀಶ್, ಎ.ಮುರುಳಿ, ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.