- ಹೊಸದಿಲ್ಲಿಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆ
- ಜಲಶಕ್ತಿ ಸಚಿವಾಲಯ,ರಾಜ್ಯದ ಹಿರಿಯ ಅಽಕಾರಿಗಳು ಭಾಗಿ
- ಭದ್ರಾ ಮೇಲ್ದಂಡೆ ಯೋಜನೆ
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ಅಂದಾಜು ವೆಚ್ಚ ೨೧,೧೬೭.೯೩ ಕೋಟಿ ರೂ.ಗೆ ಕೇಂದ್ರ ಜಲಶಕ್ತಿ ಸಚಿವಾ ಲಯದ ತಾಂತ್ರಿಕ ಸಲಹಾ ಸಮಿತಿ(ಟಿಎಸಿ)ಸಭೆ ಅಸ್ತು ಎಂದಿದೆ.
ಹೊಸದಿಲ್ಲಿಯಲ್ಲಿ ಶುಕ್ರವಾರ ಜರುಗಿದ ಜಲಶಕ್ತಿ ಸಚಿವಾಲಯದ ಹಾಗೂ ಕರ್ನಾಟಕ ನೀರಾವರಿ,ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯ ಅಽಕಾರಿಗಳ ಸಭೆ ಜರುಗಿತು.
ಅರ್ಧ ತಾಸಿಗೂ ಅಽಕ ಕಾಲ ವಿವರವಾಗಿ ನಡೆದ ಈ ಸಭೆಯಲ್ಲಿ,ಭದ್ರಾ ಮೇಲ್ದಂಡೆ ಯೋಜನೆ ಪರಿಷ್ಕೃತ ವೆಚ್ಚವೂ ತಾಂತ್ರಿಕ ಮ ತ್ತು ಆರ್ಥಿಕವಾಗಿ ಕರ‍್ಯಸಾಧುವಾಗಿದ್ದು, ಮುಂದಿನ ಹಂತದ ಪ್ರಕ್ರಿಯೆಗೆ ಶಿಫಾರಸು ಮಾಡಲು ಸಭೆ ಸಹಮತ ವ್ಯಕ್ತಪಡಿಸಿದೆ.
ಚಿತ್ರದುರ್ಗ,ದಾ ವಣಗೆರೆ ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ÷್ಮ ನೀರಾ ವರಿ ಸೌಲಭ್ಯ ಒದಗಿಸುವ, ೩೬೭ ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆ ವೆಚ್ಚವನ್ನು ೧೬,೧೨೫.೪೮ ಕೋಟಿ ರೂ.ಗಳಿಂ ದ ೨೦೨೪-೨೫ ಎಸ್‌ಆರ್‌ರೇಟ್‌ನಂತೆ ೨೧, ೧೬೭.೯೩ ಕೋಟಿ ರೂ.ಗೆ ಪರಿಷ್ಕರಣೆಗೆ ರಾಜ್ಯಸರ್ಕಾರ ಆಡಳಿತಾತ್ಮಕ ಅನು ಮೋದನೆ ನೀಡಿ ಈಚೆಗೆ ಕೇಂದ್ರಕ್ಕೆ ಕಳಿಸಿತ್ತು.
ಯೋಜನೆಗೆ ಈವರೆಗೆ ಅಂದಾಜು ೧೧೪೦೯ ಕೋಟಿ ರೂ.ಖರ್ಚಾಗಿದೆ.ಇದನ್ನು ಪೂರ್ಣಗೊಳಿಸಲು ಅಂದಾಜು ೧೦ ಸಾವಿರ ಕೋ ಟಿ ರೂ. ಅಗತ್ಯವಿದೆ. ಈ ಸಲಹಾ ಸಮಿತಿ ಶಿಫಾರಸು ದೊರೆತ ನಂತರ ಜಲಶಕ್ತಿ ಸಚಿವಾಲಯದ ಸಾರ್ವಜನಿಕ ಬಂಡವಾಳ ಹೂ ಡಿಕೆ ಮಂಡಳಿ(ಪಿಐಬಿ)ಯಲ್ಲೂ ಚರ್ಚೆಯಾಗಿ ಕೇಂದ್ರ ಸಂಪುಟಕ್ಕೆ ಶಿಫಾರಸು ಆಗಬೇಕಾಗುತ್ತದೆ.
ತನ್ನ ಮುಂದೆ ಬರುವ ಈ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿದರೆ ಯೋಜನೆಯ ಒಟ್ಟು ವೆಚ್ಚ ೨೧೧೬೭ ಕೋಟಿ ರೂ.ಗಳಲ್ಲಿ ಅಂ ದಾಜು ೬ ಸಾವಿರ ಕೋಟಿ ರೂ.ಕೇಂದ್ರದಿAದ ರಾಜ್ಯಕ್ಕೆ ದೊರಕಲಿದೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಅಽಕಾರಿಗಳು ಆಶಿ ಸಿದ್ದಾರೆ.
ಪರಿಷ್ಕೃತ ವೆಚ್ಚಕ್ಕೆ ಟಿಎಸಿ ಒಪ್ಪಿಗೆ ದೊರೆತಿದ್ದು,ರಾಜ್ಯದ ಹಾಗೂ ಕೇಂದ್ರದಲ್ಲಿರುವ ಕರ್ನಾಟಕವನ್ನು ಪ್ರತಿನಿಽಸುವ ಜನ ಪ್ರತಿನಿಽ ಗಳು ಪಕ್ಷಭೇದ ಮರೆತು ಯೋಜನೆ ತ್ವರಿತ ಅನುಷ್ಠಾನಕ್ಕೆ ಬದ್ಧತೆ ಪ್ರದರ್ಶಿಸಬೇಕೆಂಬುದು ಜಿಲ್ಲೆ ಜನರ ಹಕ್ಕೋತ್ತಾಯವಾಗಿದೆ.
ಕರ್ನಾಟಕ ನೀರಾವರಿ ಇಲಾಖೆ ಕರ‍್ಯದರ್ಶಿ ಕೆ.ಬಿ.ಕುಲಕರ್ಣಿ,ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಸಣ್ಣಚಿತ್ತಯ್ಯ,ಭದ್ರಾಮೇಲ್ದಂಡೆ ಯೋಜನೆ ಮುಖ್ಯಇಂಜಿನಿಯರ್‌ಎಫ್.ಎಚ್.ಲಮಾಣಿ, ಇಇ ಎಂ.ಎಸ್.ಹರ್ಷ ಹಾಗೂ ಜಲಶಕ್ತಿ ಸಚಿವಾಲಯದ ಹಿರಿಯ ಅಽಕಾರಿ ಗಳಿದ್ದರು.