ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಪಂನಲ್ಲಿ ಕಾಯಕ ಗ್ರಾಮ ಯೋಜನೆ ಚಾಲನಾ ಕರ‍್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಎಸ್.ಆಕಾಶ್, ತಾಪಂ ಇಒ ಎಚ್.ಶಶಿಧರ್, ಗ್ರಾಪಂ ಅಧ್ಯಕ್ಷ ಅರುಣ್ ಇತರರಿದ್ದರು.
- ಸಿಇಒ ಡಾ.ಎಸ್.ಆಕಾಶ್ ಹೇಳಿಕೆ
- ಸಮಗ್ರ ಅಭಿವೃದ್ಧಿಗೆ ಯೋಜನೆ
- ಕಾಯಕ ಗ್ರಾಮ
ಚಿತ್ರದುರ್ಗ: ಚಳ್ಳಕೆರೆ ತಾಲೂಕು ಬೇಡರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಹಳ್ಳಿ, ಬಂಜಿಗೆರೆ ಗ್ರಾಮಗಳು ಸೇರಿ ಬೇಡರೆಡ್ಡಿ ಗ್ರಾಪಂ ಅನ್ನು ಜಿಲ್ಲೆಯಲ್ಲೇ ಮಾದರಿ ಗ್ರಾಪಂವನ್ನಾಗಿ ಮಾಡುವ ಗುರಿ ಇದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದು ಜಿಪಂ ಸಿಇ ಒ ಡಾ. ಎಸ್. ಆಕಾಶ್ ಹೇಳಿದರು.
ಬೇಡರೆಡ್ಡಿ ಗ್ರಾಪಂನಲ್ಲಿ ಗುರುವಾರ ಬೇಡರೆಡ್ಡಿಹಳ್ಳಿ ಕಾಯಕ ಗ್ರಾಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಪಂಗಳ ಸಮ ಗ್ರ ಅಭಿವೃದ್ಧಿಗಾಗಿ ೨೦೨೫-೨೬ನೇ ಸಾಲಿನ ಬಜೆಟ್ ಭಾಷಣದಲ್ಲಿ ಕಾಯಕ ಗ್ರಾಮ ಪರಿಕಲ್ಪನೆಯನ್ನು ಮುಖ್ಯಮಂತ್ರಿ ಘೋಷಿಸಿ ದ್ದಾರೆ.
ಪ್ರಗತಿಯಲ್ಲಿ ಹಿಂದುಳಿದಿರುವ ಗ್ರಾಪಂಗಳನ್ನು ಆಯ್ಕೆ ಮಾಡಿ ಅವುಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿ ಸಲಾಗುವುದು. ಬೇಡರೆಡ್ಡಿಹಳ್ಳಿ ಗ್ರಾಪಂಅನ್ನು ದತ್ತು ಪಡೆದು ಖುದ್ದಾಗಿ ಮೇಲ್ವಿಚಾರಣೆ ನಡೆಸಿ, ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಸಿಇಒ ಚಿಕ್ಕಹಳ್ಳಿ ಮತ್ತು ಬಂಜಿಗೆರೆ ಗ್ರಾಮಗಳಿಗೆ ಭೇಟಿ ನೀಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಒವರ್‌ಹೆಡ್ ಟ್ಯಾಂ ಕ್, ಶುದ್ಧ ಕುಡಿಯುವ ನೀರಿನ ಘಟಕ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಜೆಜೆಎಂ ಯೋಜನೆಯಡಿ ಅಳವಡಿಸಿ ರುವ ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ), ವೈಯಕ್ತಿಕ ಗÊಹ ಶೌಚಗೃಹ ಬಳಕೆ, ಘನ ತ್ಯಾಜ್ಯ ನಿರ್ವಹಣೆ ಹಾಗೂ ಕಾರ್ಯಾಚರಣೆ ಕುರಿತಂತೆ ಪರಿಶೀಲನೆ ನಡೆಸಿದರು.
ಚಳ್ಳಕೆರೆ ತಾಪಂ ಎಚ್.ಶಶಿಧರ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈ ರ್ಮಲ್ಯ ಇಲಾಖೆ ಚಳ್ಳಕೆರೆ ಉಪವಿಭಾಗದ ಸಹಾಯಕ ಇಂಜಿನಿಯರ್ ಭಾರತಿನಾಯಕ, ಗ್ರಾಪಂ ಅಧ್ಯಕ್ಷ ಅರುಣ್, ಉಪಾಧ್ಯಕ್ಷೆ ಯಲ್ಲಮ್ಮ, ಸದಸ್ಯರಾದ ನಾಗೇಶ್‌ಕುಮಾರ್, ತಿಮ್ಮಯ್ಯ, ರಾಮರೆಡ್ಡಿ, ಪಿಡಿಒ ಶಶಿರಾಜ್, ಕರ‍್ಯದರ್ಶಿ ಸಿ.ಗಿರೀಶ್, ಎಸ್.ಬಿ. ವಿಶ್ವನಾಥ ರೆಡ್ಡಿ, ಎಸ್.ಬಸವರೆಡ್ಡಿ ಇತರರಿದ್ದರು.