ಜರ್ಮನಿಯ ಎರ್ಲಾಂಗನ್ ನಗರದಲ್ಲಿ ಬಸವ ಸಮಿತಿ ಯುರೋಪ್ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಆಯೋಜಿಸಿದ್ದ ಆನ್‌ಲೈನ್ ಸಂವಾದದಲ್ಲಿ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವಿಜಯಕುಮಾರ್ ಇದ್ದರು. Basava 
ಚಿತ್ರದುರ್ಗ

ಜಾಗತಿಕ ಶೈಕ್ಷಣಿಕ ವಲಯಕ್ಕೆ ಪರಿಚಯಿಸಬೇಕಿದೆ ಬಸವತತ್ವ Basava

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶಯ
  • ಜರ್ಮನಿಯಲ್ಲಿ ಯುರೋಪ್‌ನ ಬಸವ ಸಮಿತಿ ಸದಸ್ಯರೊಂದಿಗೆ ಆನ್‌ಲೈನ್ ಸಂವಾದ
ಸಿರಿಗೆರೆ: ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವವನ್ನು ಜಾಗತಿಕ ಶೈಕ್ಷಣಿಕ ವಲಯಕ್ಕೆ ಪರಿಚಯಿಸುವ ಪ್ರಯತ್ನ ನಡೆಯಬೇಕಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. Basava
ಜರ್ಮನಿಯ ಎರ್ಲಾಂಗನ್ ನಗರದ ವಿಜಯಕುಮಾರ್ ಅವರ ನಿವಾಸದಲ್ಲಿ ಇತ್ತೀಚೆಗೆ ಬಸವ ಸಮಿತಿ ಯುರೋಪ್ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಆಯೋಜಿಸಿದ್ದ ಆನ್‌ಲೈನ್ ಸಂವಾದ ಹಾಗೂ ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದರು.
ಬಸವತತ್ವ ಕೇವಲ ಕನ್ನಡಿಗರ ಆಧ್ಯಾತ್ಮಿಕ ಪರಂಪರೆಯಲ್ಲ, ಅದು ಜಾಗತಿಕ ಮೌಲ್ಯಗಳ ದರ್ಶನವಾಗಿದೆ. ಯುರೋಪ್‌ನಂತಹ ಬಹು ಸಾಂಸ್ಕೃತಿಕ ಸಮುದಾಯಕ್ಕೆ ಅದರ ಸಂದೇಶ ತಲುಪಿಸುವ ಕಾರ್ಯವನ್ನು ಸಂಘಟನಾತ್ಮಕವಾಗಿ ಸಾಧ್ಯವಾಗಿಸಬೇಕಿದೆ ಎಂದು ಹೇಳಿದರು. ಬಸವ ಸಮಿತಿ ಯುರೋಪ್ ಕೇವಲ ಒಂದು ಸಂಘಟನೆಯಾಗಿ ಉಳಿಯಬಾರದು. ಯುರೋಪ್‌ನ ನೆಲದಲ್ಲಿ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಾಂಸ್ಕೃತಿಕ ಮತ್ತು ವೈಚಾರಿಕ ವೇದಿಕೆಯಾಗಬೇಕು ಎಂದು ಆಶಿಸಿದರು. ಬಸವ ಸಮಿತಿ ಯುರೋಪ್‌ನ ಮುಂದಿನ ಕಾರ್ಯಯೋಜನೆ ಕುರಿತು ಮಾರ್ಗದರ್ಶನ ನೀಡಿದ ಶ್ರೀಗಳು, ಸಮಿತಿಯ ಅಧಿಕೃತ ವೆಬ್‌ಸೈಟನ್ನಿ ಜ್ಞಾನಕೇಂದ್ರವಾಗಿ ರೂಪಿಸುವುದು, ಮಕ್ಕಳು ಹಾಗೂ ಯುವಜನರಿಗೆ ‘ವಚನ ಶಾಲೆ’ ಆರಂಭಿಸುವುದು, ಅಮೂಲ್ಯ ವಚನ ಸಂಪತ್ತನ್ನು ಡಿಜಿಟಲ್ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಹಾಗೂ ಭಾರತೀಯ ಸಂಸ್ಕೃತಿ ಮತ್ತು ಬಸವತತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದರು.
ಜರ್ಮನಿ, ಪೋಲೆಂಡ್, ಫ್ರಾನ್ಸ್, ಇಟಲಿ, ಆಸ್ಟ್ರಿಯಾ, ಬೆಲ್ಜಿಯಂ ಸೇರಿ ಯುರೋಪ್‌ನ ವಿವಿಧ ರಾಷ್ಟ್ರಗಳ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಇದುವರೆಗೆ ನಡೆಸಿರುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಸಮಗ್ರ ವರದಿಯನ್ನು ಶ್ರೀಗಳಿಗೆ ಸಲ್ಲಿಸಿದರು.
ವಿಜಯಕುಮಾರ್, ತುಮಕೂರು ಚಿಕ್ಕರುದ್ರಯ್ಯ, ಪ್ರಿಯಾ ಚಂದ್ರಶೇಖರ, ವೇದ ಕುಮಾರಸ್ವಾಮಿ, ಪ್ರಶಾಂತ, ಶಿವನಾಗಣ್ಣ, ಶಶಿಕಾಂತ ಗುಡ್ಡದಮಠ, ಹೇಮೆಗೌಡ, ರುದ್ರಪ್ಪ, ಮಧು, ನವೀನ್ ಓದೊಗೌಡ್ರ, ಪಂಚಾಕ್ಷರಿ ಲಕ್ಷೇಶ್ವರಮಠ, ಸತೀಶ್ ಪಲ್ಲೇದ ಹಾಗೂ ಯುರೋಪ್‌ನ ವಿವಿಧ ರಾಷ್ಟ್ರಗಳ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.