ಪ್ರಮುಖ ಮುಖ್ಯಾಂಶಗಳು
ನಗರದಲ್ಲಿ ಭಾನುವಾರ ಶ್ರೀ ವೀರಶೈವ ಸಮಾಜ ಸೇವಾ ಸಂಘದಿಂದ ಬೆಂಗಳೂರು ರಸ್ತೆ ಮಾರ್ಗದ ಬಸವೇಶ್ವರರ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಅನಾವರಣದ ಬಳಿಕ, ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣ ಮನುಕುಲದ ಹೃದಯ ಸಿಂಹಾಸನಾಧೀಶ
"ಜಾತಿ, ವರ್ಗ, ಲಿಂಗ ತಾರತಮ್ಯಗಳಿದ್ದ ಕಾಲದಲ್ಲಿ ಸಮಾನತೆಯ ಕನಸು ಕಂಡವರು ಬಸವಣ್ಣ. ಅವರ ವಚನಗಳಿಗೆ ಎಲ್ಲರನ್ನು ಬೆಸೆಯುವ ಶಕ್ತಿ ಇದೆ. ಕಾಯಕವೇ ಕೈಲಾಸ ಎಂಬ ವಾಣಿ ಇಡೀ ಮನುಕುಲಕ್ಕೆ ಮಾರ್ಗದರ್ಶನವಾಗಿದೆ. ಹಿಮಾಲಯದ ಮೌಂಟ್ ಎವರೆಸ್ಟ್‌ನಂತೆ ಸಂತರ ಸಾಲಿನಲ್ಲಿ ಬಸವಣ್ಣ ಮೇರು ಶಿಖರ. ಶರಣರ ವಚನಗಳನ್ನು ಓದಿ, ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ," ಎಂದು ಹೇಳಿದರು.
ಸಿದ್ದರ ಬೆಟ್ಟ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, "12ನೇ ಶತಮಾನದ ಶರಣ ವಚನಗಳು ಕೇವಲ ಧರ್ಮ ಸಂದೇಶವಲ್ಲ; ಬದುಕಿನ ಸಂಸ್ಕೃತಿ ಆಗಿವೆ. ವಚನಗಳಲ್ಲಿ ಶರಣರ ಸಂಸ್ಕಾರ ಕಾಣಬೇಕು. ಮಠಗಳಲ್ಲಿ ನಡೆಯುವ ಶರಣರ ಸಭೆ, ಸಮಾರಂಭಗಳಿಗೆ ಚಿಕ್ಕ ಮಕ್ಕಳನ್ನು ಕರೆತರಬೇಕು. ಯುವ ಸಮುದಾಯಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿ ರೂಢಿಸಬೇಕು" ಎಂದು ಹೇಳಿದರು.
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, "ಬಸವಣ್ಣನ ಕಾಲವನ್ನು ಜ್ಞಾನದ ಬೆಳಕಿನ ಯುಗ ಎನ್ನುತ್ತೇವೆ. ಮನುಷ್ಯ ಸ್ವಾರ್ಥಿ ಆಗಬಾರದು. ಜನರು ಕೇವಲ ಕುಟುಂಬಕ್ಕೆ ಸೀಮಿತವಾಗದೆ ವಿಶ್ವ ಪ್ರೇಮ ಬೆಳೆಸಿಕೊಳ್ಳಬೇಕು. ವಿಲಾಸಿ ಬದುಕಿನಲ್ಲಿ ಆನಂದ ಕಾಣಬಾರದು. ಲೋಕವನ್ನು ಅಂತರಾಳದಲ್ಲಿ ಅರಿಯುವ ಮೂಲಕ ಆನಂದಿಸಬೇಕು. ಪರರ ನೋವಿಗೆ ಸ್ಪಂದಿಸಿ ಸಾರ್ಥಕತೆ ಕಾಣಬೇಕು. ಚಳ್ಳಕೆರೆ ನಗರದಲ್ಲಿ ಬೃಹತ್ ಅಶ್ವಾರೂಢ ಬಸವೇಶ್ವರರ ಪುತ್ತಳಿ ಸ್ಥಾಪಿಸಿ ಜನರಿಗೆ ಬಸವೇಶ್ವರರ ದರ್ಶನ ಕಲ್ಪಿಸಿರುವುದು ಉತ್ತಮ ಕಾರ್ಯ" ಎಂದರು.
ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸಿ. ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ. ಸೋಮಶೇಖರ್, ಟಿ. ಪ್ರಭುದೇವ್, ಡಾ. ಕೆ.ಎಂ. ಜಯಕುಮಾರ್, ಪಿ. ಜಗದೀಶ್, ಎಚ್.ವಿ. ಪ್ರಸನ್ನ ಕುಮಾರ್, ಬಿ.ಎಸ್. ಶಿವಪುತ್ರಪ್ಪ, ಮಂಜುನಾಥ್, ಡಾ. ಜಿ.ವಿ. ರಾಜಣ್ಣ, ಎಸ್. ರುದ್ರಮುನಿಯಪ್ಪ, ಎನ್. ಸತೀಶ್‌ಬಾಬು, ವಿಜಯೇಂದ್ರ, ಜೆ. ಮಂಜುನಾಥ್, ಕೆ.ಟಿ. ಶಿವಕುಮಾರ್, ಬಿ.ಜಿ. ವೃಷಭೇಂದ್ರಪ್ಪ, ಕೆ.ಎಂ. ಕೊಟ್ರೇಶ್, ಎನ್.ಎಚ್. ವಾಸುದೇವ್ ಇತರರು ಇದ್ದರು.
ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯೇ ಈಗಿನ ಸಂಸತ್, ವಿಧಾನಸಭೆಯ ಪ್ರಜಾಪ್ರಭುತ್ವ ವ್ಯವಸ್ಥೆ. ಶಿವಶರಣರು ಸಮಸಮಾಜಕ್ಕಾಗಿ ಜಾತಿ ತಾರತಮ್ಯ ವಿರುದ್ಧ ಸಾಮಾಜಿಕ ಚಳುವಳಿ ನಡೆಸಿದರು. ಈಗಿನ ರಾಜಕೀಯದಲ್ಲಿ ಹೆಚ್ಚುತ್ತಿರುವ ಜಾತಿ, ಲಿಂಗ ತಾರತಮ್ಯದ ವಿರುದ್ಧ ಹೋರಾಡಬೇಕಿದೆ.
ಸಮಾಜವನ್ನು ಒಗ್ಗೂಡಿಸುವ ಮತ್ತು ಸಂಘಟಿತ ಚಟುವಟಿಕೆ ರೂಪಿಸುವಲ್ಲಿ ಚಳ್ಳಕೆರೆ ತಾಲೂಕಿನ ವೀರಶೈವ ಸಮಾಜ ಸೇವಾ ಸಂಘ ಮಾದರಿ ಆಗಿದೆ. ಸಮಾಜದಿಂದ ಬಸವೇಶ್ವರ ಶಾಲೆ ಆರಂಭಿಸುತ್ತಿರುವುದು ಸ್ವಾಗತಾರ್ಹ. ಎಲ್ಲ ಸಮುದಾಯದ ಮಕ್ಕಳನ್ನು ಕಡಿಮೆ ಶುಲ್ಕದಲ್ಲಿ ದಾಖಲು ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ.
ಈಗಿನ ಸಮಾಜದಲ್ಲಿ ಬಸವಣ್ಣನ ಆಶಯ ಕಾಣುತ್ತಿಲ್ಲ. ಜಾತಿ ವ್ಯವಸ್ಥೆ ವಿರುದ್ಧ ಶಿವಶರಣರು ಹೋರಾಡಿದ್ದಾರೆ. ಆದರೆ, ಇಂದು ಜಾತಿಗಳಲ್ಲಿ ಒಳಪಂಗಡ ಮಾಡಿ ಜನರ ಮಧ್ಯೆ ಬೇಲಿ ಹಾಕಿಕೊಂಡಿದ್ದೇವೆ. ಇದನ್ನು ತೊಡೆದು ಹಾಕಿ ಸಮಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.