ಬಸವ ಜಯಂತಿ ಅಂಗವಾಗಿ ಚಿತ್ರದುರ್ಗದಲ್ಲಿ ಭಾನುವಾರ ವೀರಶೈವ ಸಮಾಜ, ವೀರಶೈವ-ಲಿಂಗಾಯತ ಯುವ ವೇದಿಕೆ ಆಯೋಜಿಸಿದ್ದ ಬೈಕ್ರ‍್ಯಾಲಿಯಲ್ಲಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರೊಂದಿಗೆ ಸಮುದಾಯದ ಹಲವರು ಪಾಲ್ಗೊಂಡಿದ್ದರು. 
ಚಿತ್ರದುರ್ಗ

ಬಸವ ಜಯಂತಿ, ದುರ್ಗದಲ್ಲಿ ಬೈಕ್ ರ‍್ಯಾಲಿ

ಪ್ರಮುಖ ಮುಖ್ಯಾಂಶಗಳು

  • ಮಹಾಮಾನವತಾವಾದಿಯ ಆದರ್ಶ ಅಳವಡಿಸಿಕೊಳ್ಳೋಣ
  • ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ
  • ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ
ಚಿತ್ರದುರ್ಗ : ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಜಯಂತಿ ಅಂಗವಾಗಿ ವೀರಶೈವ ಸಮಾಜ, ವೀರಶೈವ-ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು ನಗರದಲ್ಲಿ ಭಾನುವಾರ ಬೈಕ್ರ‍್ಯಾಲಿ ನಡೆಯಿತು.
ಹೊಳಲ್ಕೆರೆ ರಸ್ತೆಯ ಚಂದ್ರವಳ್ಳಿ ತಿರುವು ಸಮೀಪದ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಸ್ವತಃ ಬೈಕ್ ಚಾಲನೆಯೊಂದಿಗೆ ರ‍್ಯಾಲಿ ಉದ್ಘಾಟಿಸಿದರು.
ಅಲ್ಲಿಂದ ಆರಂಭವಾದ ರ‍್ಯಾಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ, ಆನೆಬಾಗಿಲು, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಮದಕರಿನಾಯಕರ ವೃತ್ತ, ಎಸ್ಪಿ ಕಚೇರಿ, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್, ಬಿ.ಡಿ. ರಸ್ತೆ, ಗಾಂಽ ವೃತ್ತ ಮಾರ್ಗ ವಾಗಿ ಶ್ರೀ ನೀಲಕಂಠೇಶ್ವರ ಸ್ವಾಮಿ ಸನ್ನಿಧಾನದ ಮುಂಭಾಗ ರ‍್ಯಾಲಿ ಮುಕ್ತಾಯಗೊಂಡಿತು.
ರ‍್ಯಾಲಿಗೂ ಮುನ್ನ ವೀರೇಂದ್ರ ಪಪ್ಪಿ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕಾಗಿ ವಿಶ್ವ ಗುರು ಬಸವಣ್ಣ ನೀಡಿದ ಸಂದೇಶ, ಸ ರ್ವ ಸಮುದಾಯಗಳನ್ನು ಅಪ್ಪಿಕೊಂಡ ಬಗೆ, ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ. ಹೀಗಾಗಿ ಮಹಾ ಮಾನವತಾವಾದಿಯಾಗಿ ದ್ದಾರೆ ಎಂದು ಬಣ್ಣಿಸಿದರು.
ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ. ಮಂಜುನಾಥ್ ರ‍್ಯಾಲಿಯ ನೇತೃತ್ವ ವಹಿಸಿದ್ದರು. ವೀರಶೈವ ಸಮಾ ಜದ ಅಧ್ಯಕ್ಷ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಮುಖಂಡರಾದ ಸುರೇಶ್‌ಬಾಬು, ವೀರೇಂದ್ರ ಕುಮಾರ್, ರುದ್ರೇಶ್ ಐಗಳ್, ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ, ವೀರೇಶ್, ರುದ್ರೇಶ್, ಜಾಲಿಕಟ್ಟೆ ಶಿವರಾಜ್, ಮಿಠಾಯಿ ಮುರುಗೇಶ್, ಯೋಗ ಗುರು ಚಿನ್ಮಯಾನಂದ, ನೀಲಕಂಠೇಶ್ವರ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾದ ಶಾಂತಮೂರ್ತಿ, ವಿಶ್ವನಾಥ ಶಾಸಿö ಸೇರಿ ಹಲ ವರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
"

ಬಸವೇಶ್ವರರ ಜಯಂತಿ ವೀರಶೈವ ಸಮಾಜಕ್ಕೆ ಮಾತ್ರ ಸೀಮಿತವಲ್ಲ. ಮುಂಬರುವ ವರ್ಷಗಳಿಂದ ಬೈಕ್ ರ‍್ಯಾಲಿಯಲ್ಲಿ ಸರ್ವ ಸಮುದಾಯದವರು ಪಾಲ್ಗೊಂಡು ಬೆಂಬಲಿಸಬೇಕು.