ಚಿತ್ರದುರ್ಗದಲ್ಲಿ ಭಾನುವಾರ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪ ಪ್ಪಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಬಿ.ಟಿ.ಕುಮಾರಸ್ವಾಮಿ, ಡಿ.ಎಚ್.ನಟರಾಜ್, ಮೆಹಬೂಬ್‌ಪಾಷಾ, ಎಂ.ಕೆ.ತಾಜ್‌ಪೀರ್, ಮಲ್ಲಿ ಕಾರ್ಜುನ, ಎಸ್.ಲಕ್ಷಿ÷್ಮÃ, ಅವಿನಾಶ್ ಇತರರು ಇದ್ದರು.
- ಜಗಜೀವನ್‌ರಾಂ ಭವನ ಶೀಘ್ರ ಲೋಕಾರ್ಪಣೆ
- ಬಾಕಿ ಕಾಮಗಾರಿಗೆ ೩ ಕೋಟಿ ರೂ.ಅನುದಾನ
- ಶಾಸಕ ವೀರೇಂದ್ರ ಪಪ್ಪಿ ಭರವಸೆ
ಚಿತ್ರದುರ್ಗ: ದೇಶದ ಪ್ರಗತಿಯಲ್ಲಿ ನಮ್ಮ ಪ್ರಗತಿಯಿದೆ, ದೇಶದ ಉದ್ಧಾರದಲ್ಲೇ ನಮ್ಮ ಉದ್ಧಾರವಿದೆ ಎಂಬ ಮಾಜಿ ಉಪ ಪ್ರಧಾ ನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್‌ರಾಂ ಅವರ ಮಾತು ಸಾರ್ವಕಾಲಿಕ ಸತ್ಯವಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ನಗರದ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸಭಾಭವನ (ಲಿಡ್ಕರ್ ಭವನ)ದಲ್ಲಿ ಭಾನುವಾರ ಆಯೋಜಿಸಿದ್ದ ಬಾಬೂಜಿ ಅವರ ೧೧೯ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದÀರು.
ದೇಶದ ಪ್ರಗತಿ ಬಗ್ಗೆ ಯೋಚಿಸುವ ಮೊದಲು ಪ್ರತಿಯೊಬ್ಬರೂ ದೇಶಭಕ್ತಿ ಬೆಳೆಸಿಕೊಳ್ಳಬೇಕು. ಬಾಬೂಜಿ ತಮ್ಮ ಇಡೀ ಜೀವನವನ್ನು ದೇಶದ ಹಿತಕ್ಕಾಗಿ ಮುಡಿಪಾಗಿಟ್ಟಿದ್ದರು. ೧೯೭೧ರ ಯುದ್ಧದ ಸಂದರ್ಭದಲ್ಲಿ ಅವರ ಸಮರ್ಥ ನಾಯಕತ್ವದಿಂದಾಗಿ
ನಗರದಲ್ಲಿ ಬಾಬು ಜಗಜೀವನ ರಾಂ ಭವನದ ಬಾಕಿ ಕಾಮಗಾರಿಗೆ ಅಗತ್ಯವಿರುವ ೩ ಕೋಟಿ ರೂ.ಅನುದಾನ ಒದಗಿಸಿ ಭವನ ವನ್ನು ಶೀಘ್ರ ಲೋಕಾರ್ಪಣೆಗೊಳಿಸುವುದಾಗಿ ಭರವಸೆ ನೀಡಿದರು. ನಿಗಮಗಳಿಂದ ದೊರೆಯುವಂಥ ನೇರ ಸಾಲ ಸೌಲಭ್ಯ ಗಳನ್ನು ಅರ್ಹ ಫ ಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಐಮAಗಲ ಮಹಾಶಿವಶರಣ ಹರಳಯ್ಯ ಗುರುಪೀಠದ ಬಸವ ಶಿವಶರಣ ಹರಳಯ್ಯ ಸ್ವಾಮೀಜಿ ಅವರು ಮಾತನಾಡಿ, ಮಾತು ಮತ್ತು ನಡವಳಿಕೆ ಒಂದೇ ಆಗಿರಬೇಕು. ಬಾಬೂಜಿ ಅವರು ಮಾತಿನ ವ್ಯಕ್ತಿಯಾಗಿರದೆ, ನಂಬಿದ ಸಿದ್ಧಾಂತಗಳನ್ನು ಬದುಕಿನಲ್ಲಿ ಸಂಪೂರ್ಣ ಅಳವಡಿಸಿಕೊಂಡಿದ್ದರು.
ಹಿಂದೆ ರಾಜಮಹಾರಾಜರು, ಶ್ರೀಮಂತರಿಗೆ ಇದ್ದ ಮತದಾನದ ಹಕ್ಕನ್ನು ಸಾಮಾನ್ಯರಿಗೂ ದೊರಕಿಸಿಕೊಡುವಲ್ಲಿ ಅವರ ಪಾತ್ರ ಹಿರಿದಾಗಿದೆ. ೧೯೩೫ರಲ್ಲಿ ಶೋಷಿತ ವರ್ಗಗಳ ಮತದಾನದ ಹಕ್ಕಿಗಾಗಿ ಬಾಬೂಜಿ ಅವರು ಹೋರಾಟ ಮಾಡಿದ್ದರು. ಬಡತನ, ಆಹಾರದ ಕೊರತೆ ನೀಗಿದರೆ ದೇಶದ ಸಮೃದ್ಧವಾಗಿರಲು ಸಾಧ್ಯವೆಂದು ನಂಬಿದ್ದರು. ರೈಲ್ವೆ, ಕÊಷಿ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಕಾರ್ಮಿಕರ ಹಿತ ಕಾಯುವ ಕೆಲಸ ಮಾಡಿದ್ದರು ಎಂದು ಶ್ರೀಗಳು ಹೇಳಿದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರು ಮಾತನಾಡಿ,ದೇಶದ ಅಭಿವÊದ್ಧಿ,ಸಮಾನತೆ ಹಾದಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವ ರು ಮತ್ತು ಡಾ.ಬಾಬು ಜಗಜೀವನ ರಾಂ ಅವರು ದೇಶದ ಎರಡು ಕಣ್ಣುಗಳಿದ್ದಂತೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಉಪಪ್ರಧಾ ನಿ ಹುದ್ದೆಯವರೆಗೂ ಬಾಬೂಜಿ ನಡೆಸಿದ ಹೋರಾಟ, ಅವರು ದೇಶಕ್ಕೆ ನೀಡಿದ ಕೊಡುಗೆ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದರು.
ಇಂಗ್ಲಿಷ್ ಪ್ರಾಧ್ಯಾಪಕ ಡಿ.ಎಚ್.ನಟರಾಜ್ ಅವರು ಡಾ.ಬಾಬು ಜಗಜೀವನರಾಂ ಅವರ ಕುರಿತು ಉಪನ್ಯಾಸ ನೀಡಿದರು. ನಾಲ್ವ ರು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಸಂವಿಧಾನ ಪೀಠಿಕೆ ವಾಚಿಸಲಾಯಿತು. ಜಯಂತಿ ಅಂಗವಾಗಿ ನಗರದ ವಿವಿಧ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಜರುಗಿದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಅದ್ದೂರಿ ಭಾವಚಿತ್ರ ಮೆರವಣಿಗೆ
ಸಮಾರಂಭದ ಅಂಗವಾಗಿ ನಗರದಲ್ಲಿ ಡಾ.ಬಾಬು ಜಗಜೀವನ್‌ರಾಂ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಹೊ ಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಶಾಲೆ ಬಳಿ, ಬಿ.ಟಿ.ಕುಮಾರಸ್ವಾಮಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಲಿಡ್ಕರ್ ಭವನದವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್‌ಪಾಷಾ, ಕುಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಸಮಾಜ ಕಲ್ಯಾಣ ಇಲಾಖೆ ಡಿಡಿ ಮಲ್ಲಿ ಕಾರ್ಜುನ, ಚಿತ್ರದುರ್ಗ ನಗರಸಭೆ ಆಯುಕ್ತೆ ಎಸ್.ಲಕ್ಷಿ÷್ಮÃ, ಅವಿನಾಶ್, ಜೆ.ಜೆ.ಹಟ್ಟಿ ರಾಜಣ್ಣ, ಪ್ರಶಾಂತ್, ತಿಪ್ಪೇಸ್ವಾಮಿ, ನೇಹಾ, ಹುಲ್ಲೂರು ಕುಮಾರಸ್ವಾಮಿ, ಪ್ರಕಾಶ್, ಕಾವ್ಯ, ರವಿ ಮತ್ತಿತರ ದಲಿತ ಮುಖಂಡರು, ಸಮುದಾಯದ ಪ್ರಮುಖರು, ವಿವಿಧ ಇಲಾಖೆ ಅಽಕಾರಿಗಳು, ಗಣ್ಯರು ಇದ್ದರು.