ಚಿತ್ರದುರ್ಗದ ಅಯ್ಯಪ್ಪಸ್ವಾಮಿ ಸನ್ನಿಧಾನದ ಮುಂಭಾಗ ಬುಧವಾರ ನಡೆದ ೨೬ನೇ ವರ್ಷದ ಲಕ್ಷ ದೀಪೋತ್ಸವದಲ್ಲಿ ಅನೇಕ ಭಕ್ತರು ದೀಪ ಹಚ್ಚಿ ಸಂಭ್ರಮಿಸಿದ ಕ್ಷಣ. 
ಚಿತ್ರದುರ್ಗ

ಭಕ್ತೋತ್ಸಾಹಕ್ಕೆ ಸಾಕ್ಷಿಯಾದ ಅಯ್ಯಪ್ಪನ ಲಕ್ಷ ದೀಪೋತ್ಸವ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಸನ್ನಿಽಯತ್ತ ಹರಿದು ಬಂದ ಜನಸಾಗರ
  • ಕಂಗೊಳಿಸಿದ ಸ್ವಾಮಿಯ ಮೂರ್ತಿ
  • ೨೬ನೇ ವರ್ಷದ ಲಕ್ಷ ದೀಪೋತ್ಸವ
ಚಿತ್ರದುರ್ಗ : ದೀಪ ಹಚ್ಚುವ ಕ್ಷಣಕ್ಕಾಗಿ ಜಮಾಯಿಸಿದ್ದವರ ತವಕ ಹೆಚ್ಚಾಯಿತು. ಸಂದೇಶ ದೊರಕುತ್ತಿದ್ದಂತೆ ಗಂಟೆಗಟ್ಟಲೇ ಕಾಯುತ್ತ ನಿಂತವರಿAದ ಸಹಸ್ರಾರು ಅಣತೆಗಳು ಮಿನುಗುವ ನಕ್ಷತ್ರದಂತೆ ಕಂಗೊಳಿಸಿದವು. ಹಲವರು ಭಕ್ತಿಯ ಪರಾಕಾಷ್ಠೆಯಲ್ಲೂ ಮಿಂದೆದ್ದರು...
ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ನಿಂದ ಮಕರ ಸಂಕ್ರಾAತಿ ಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ ೨೬ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಮೆದೇಹಳ್ಳಿ ರಸ್ತೆಯಲ್ಲಿರುವ ಸ್ವಾಮಿಯ ದೇಗುಲ ಮುಂಭಾಗದ ಆವರಣ ಭಕ್ತೋತ್ಸಾಹಕ್ಕೆ ಸಾಕ್ಷಿಯಾಯಿತು. ಇದೇ ವೇಳೆ ಸಾವಿರಾರು ಭಕ್ತರು ಸಾಲು-ಸಾಲು ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು.
ಹೆಚ್ಚು ಜನ ಸೇರುವ ನಿರೀಕ್ಷೆ ಹಿನ್ನಲೆಯಲ್ಲಿ ಬ್ಯಾರಿಕೇಡ್, ಪೋಲ್ಸ್ಗಳನ್ನು ಅಳವಡಿಸಲಾಗಿತ್ತು. ಸರತಿ ಸಾಲಿನ ಮೂಲಕ ಸ್ವಾಮಿಯ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ, ವಾಹನಗಳ ನಿಲುಗಡೆಗೂ ದೇಗುಲ ಸಮೀಪ ಅವಕಾಶವಿತ್ತು.
ಸಂಜೆ ೬ ರಿಂದ ರಾತ್ರಿ ೧೧ರವರೆಗೂ ದರ್ಶನಕ್ಕಾಗಿ ಜನಸಾಗರವೇ ಹರಿದು ಬಂದ ಕಾರಣ ಭಕ್ತರು ಗಂಟೆಗಟ್ಟಲೇ ಕಾದರು. ಅಯ್ಯಪ್ಪಸ್ವಾಮಿಯ ಜೊತೆ ಗಣಪತಿ, ಸುಬ್ರಮಣ್ಯ, ಭೀಮಶಂಕರ, ಭೀಮಾಂಜನೇಯ ಸ್ವಾಮಿ ಮೂರ್ತಿಗಳನ್ನು ಕಣ್ತುಂಬಿಕೊAಡರು. ಮಹಾಮಂಗಳಾರತಿ, ತೀರ್ಥ ಪಡೆದು ಇಷ್ಟಾರ್ಥ ಈಡೇರಿಸುವಂತೆ ಹಲವರು ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡರು. ನೆರೆದಿದ್ದ ಭಕ್ತಗಣಕ್ಕೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಟ್ರಸ್ಟ್ನ ಅಧ್ಯಕ್ಷ ಶರಣ್‌ಕುಮಾರ್, ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ. ಮಹಂತೇಶ್, ಎಚ್.ಎಂ. ದ್ಯಾಮಣ್ಣ, ವರ್ತಕರಾದ ಉದಯï ಶೆಟ್ಟಿ, ಡಾ. ಸಿz್ದÁರ್ಥ್ ಗುಂಡಾರ್ಪಿ, ಐಶ್ವರ್ಯಾ ಗ್ರೂಪ್ ಆ-ï ಹೋಟೆಲ್ಸ್ ಮಾಲೀಕ ಅರುಣ್‌ಕುಮಾರ್, ಮೆದೇಹಳ್ಳಿ ಗ್ರಾಪಂ ಅಧ್ಯಕ್ಷ ನಿರಂಜನಮೂರ್ತಿ, ಸುಭಾಷ್‌ಬಾಬು, ಕೂಡಾ ಮಾಜಿ ಅಧ್ಯಕ್ಷ ಟಿ. ಬದರಿನಾಥ್, ಸುರೇಶ್‌ಬಾಬು ಇತರರಿದ್ದರು.
ಹಿನ್ನಲೆ ಗಾಯಕರಾದ ಮಂಗಳೂರಿನ ಯಶವಂತ್, ಮೈಸೂರಿನ ನಿತಿನ್ ರಾಜಾರಾಮï ಶಾಸಿö, ಬೆಂಗಳೂರಿನ ಎಸ್. ಕೃಪಾ ತಂಡದವರು ಭಕ್ತಿ ಕುಸುಮಾಂಜಲಿ ನಡೆಸಿಕೊಟ್ಟರು.
ಕಂಗೊಳಿಸಿದ ಮೂರ್ತಿ, ದೇಗುಲ
ಮುಂಜಾನೆಯಿAದಲೇ ಅಯ್ಯಪ್ಪಸ್ವಾಮಿಗೆ ತುಪ್ಪ, ಗಂಧ, ಎಳನೀರು, ಅರಿಶಿಣ-ಕುಂಕುಮ, ತೈಲಾಭಿಷೇಕ ಸೇವೆ ನೆರವೇರಿತು. ಶಬರಿಮಲೆ ಮಾದರಿಯಲ್ಲೇ ಪೂಜಾ ವಿಽ-ವಿಧಾನಗಳು ನೆರವೇರಿದ ನಂತರ ಸ್ವಾಮಿಗೆ ಆಭರಣ, ಪುಷ್ಪಗಳಿಂದ ವಿಶೇಷವಾಗಿ ಅರ್ಚಕರು ಅಲಂಕರಿಸಿದ್ದರು. ಇಡೀ ದೇಗುಲ ಆವರಣ ಹೂವು, ದೀಪಾಲಂಕಾರದೊAದಿಗೆ ಕಂಗೊಳಿಸಿತು.