ಎಚ್‌ಐವಿ ಸೋಂಕು ವಿರುದ್ಧ ಜಾಗೃತಿ ಮೂಡಿಸಲು ಚಿತ್ರದುರ್ಗದಲ್ಲಿ ಏರ್ಪಡಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ಡಾ.ಎಂ.ಸಿ.ಸುನೀಲ್‌ಕುಮಾರ್, ಡಾ.ವಿ.ತುಳಸಿರಂಗನಾಥ್, ಸುಷ್ಮಾರಾಣಿ, ಚೇತನ್ ಬಾಬು, ಗೀತಮ್ಮ, ಗೋವಿಂದ ರೆಡ್ಡಿ ಕೊಣ್ಣೂರು ಇತರರು ಇದ್ದರು. 
ಚಿತ್ರದುರ್ಗ

ಎಚ್‌ಐವಿ ಸೋಂಕು ವಿರುದ್ಧ ಯುವಜನರಲ್ಲಿ ಜಾಗೃತಿ ಅಗತ್ಯ

ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿಕೆ

ಚಿತ್ರದುರ್ಗ: ಎಚ್‌ಐವಿ ಸೋಂಕು, ಏಡ್ಸ್ ರೋಗದ ಕುರಿತು ಯುವ ಜನರು ಜಾಗೃತವಾಗಿರಬೇಕು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಸ್ಪರ್ಧೆಗೆ ಕನಕ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿ, ಈ ಸೋಂಕಿಗೆ ಯುವಜನರು ಒಳಗಾಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸುರಕ್ಷಿತ ಜೀವನದ ಮೂಲಕ ಆರೋಗ್ಯವಂತರಾಗಿ ಬದುಕಬೇಕಿದೆ. ಎಚ್‌ಐವಿ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಿದೆ ಎಂದರು.

ಡಿಎಚ್‌ಒ ಡಾ.ಎಂ.ಸಿ. ಸುನೀಲ್‌ಕುಮಾರ್ ಮಾತನಾಡಿ, ಈಚಿನ ದಿನಗಳಲ್ಲಿ ಎಚ್‌ಐವಿ ಸೋಂಕು ಜಿಲ್ಲೆಯಲ್ಲಿ ಕಡಿಮೆಯಾಗುತ್ತಿದ್ದರೂ, ಯುವಜನರಲ್ಲಿ ಇದರ ಪ್ರಮಾಣ ಹೆಚ್ಚುತ್ತಿರುವುದು ಗಂಭೀರ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕನಕ ವÊತ್ತದಿಂದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದವರೆಗೆ ಏರ್ಪಡಿಸಿದ್ದ ಮ್ಯಾರಥಾನ್ ಓಟದ ವಿದ್ಯಾರ್ಥಿನಿಯರ ವಿಭಾಗದಲ್ಲಿ ಐಸಿರಿ, ಬಿಂದು, ಸಿಂಧೂ ಹಾಗೂ ವಿದ್ಯಾರ್ಥಿಗಳ ವಿಭಾಗದಲ್ಲಿ -Àಕೀರಪ್ಪ, ಸ್ವಾಮಿ, ಕಿರಣ್ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತÊತೀಯ ಸ್ಥಾನ ಪಡೆದರು.

ಜಿಲ್ಲಾ ಏಡ್ಸ್ ನಿಯಂತ್ರಣಾಽಕಾರಿ ಡಾ.ವಿ. ತುಳಸಿರಂಗನಾಥ್ ವಿಜೇತರಿಗೆ ಬಹುಮಾನ ವಿತರಿಸಿದರು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪೊಡೆದವರು ದಾವಣಗೆರೆಯಲ್ಲಿ ಅ.೧೭ರಂದು ಜರುಗುವ ರಾಜ್ಯಮಟ್ಟದ ಮ್ಯಾರಥಾನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಮೇಲ್ವಿಚಾರಕ ಅಶೋಕ್ ತಿಳಿಸಿದರು.

ದುರ್ಗಾ ರನ್ನರ್ಸ್ ಗೌರವಾಧ್ಯಕ್ಷ ಸುಷ್ಮಾರಾಣಿ ಹಾಗೂ ಚೇತನ್‌ಬಾಬು ತಂಡದವರು ಸ್ಪರ್ಧೆ ನಡೆಸಿಕೊಟ್ಟರು. ನರ್ಸಿಂಗ್ ಅಽಕಾರಿ ಗೀತಮ್ಮ, ಉಪ ಜಿಲ್ಲಾ ಶಿಕ್ಷಣಾಽಕಾರಿ ಗೋವಿಂದರೆಡ್ಡಿ ಕೊಣ್ಣೂರ, ಕ್ಷಯ ರೋಗ ನಿರ್ಮೂಲನ ಕಚೇರಿ, ಸೌಖ್ಯ ಸಮುದಾಯ ಸಂಸ್ಥೆ, ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ, ಸುಚೇತನ ನೆಟ್ವರ್ಕ್ ಹಾಗೂ ವಿವಿಧ ರಕ್ತ ಕೇಂದ್ರಗಳ ಸಿಬ್ಬಂದಿ ಇದ್ದರು.