ಬೆಂಗಳೂರಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಕಾಶ ಮಾಧವ ಶಾನಭಾಗ ಅವರಿಗೆ ನ್ಯಾಷನಲ್ ಟ್ರಾನ್ಸ್ಫೋರ್ಟ್ ಎನ್‌ಫೋರ್ಸ್ಮೆಂಟ್ ಎಕ್ಸಲೆನ್ಸ್ ಆವಾರ್ಡ್ ಪ್ರದಾನ ಮಾಡಿದರು. ಶಾಸಕ ಎಸ್.ಆರ್. ವಿಶ್ವನಾಥ್ ಇದ್ದಾರೆ.  
ಚಿತ್ರದುರ್ಗ

ಆರ್‌ಟಿಒ ಸೀನಿಯರ್ ಇನ್ಸ್ಪೆಕ್ಟರ್ ಶಾನಭಾಗ್‌ಗೆ ಪ್ರಶಸ್ತಿ ಪ್ರದಾನ

ಪ್ರಮುಖ ಮುಖ್ಯಾಂಶಗಳು

  • ಸಚಿವರು, ಶಾಸಕರು, ಹಿರಿಯ ಅಽಕಾರಿಗಳು ಭಾಗಿ
  • ರಾಜಸ್ವ ಸಂಗ್ರಹಣೆಯಲ್ಲಿ ಗಣನೀಯ ಸಾಧನೆ
  • ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ
ಚಿತ್ರದುರ್ಗ: ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಕಚೇರಿ ಹಿರಿಯ ವಾಹನ ನಿರೀಕ್ಷಕ ಪ್ರಕಾಶ ಮಾಧವ ಶಾನಭಾಗ ಅವರು, ಬೆಂಗಳೂರಿ ನ ಆಲ್ ಇಂಡಿಯಾ ಫೆಡರೇಷನ್ ಆಫ್ ಮೋಟಾರ್ ವೆಹಿಕಲ್ ಡಿಪಾರ್ಟ್ಮೆಂಟ್ ಟೆಕ್ನಿಕಲ್ ಎಕ್ಸಿಕ್ಯೂಟಿವ್ ಆಫೀಸರ್ ಅಸೋಷಿ ಯೇನ್‌ನ ನ್ಯಾಷನಲ್ ಟ್ರಾನ್ಸ್ಫೋರ್ಟ್ ಎನ್‌ಫೋರ್ಸ್ಮೆಂಟ್ ಎಕ್ಸಲೆನ್ಸ್ ಅವಾರ್ಡ್ಗೆ ಭಾಜನರಾಗಿದ್ದಾರೆ.
ಬೆಂಗಳೂರಲ್ಲಿ ಶುಕ್ರವಾರ ಜರುಗಿದ ನ್ಯಾಷನಲ್ ಟ್ರಾನ್ಸ್ಫೋರ್ಟ್ ಎನ್‌ಫೋರ್ಸ್ಮೆಂಟ್ ಎಕ್ಸಲೆನ್ಸ್ ಆವಾರ್ಡ್ಸ್, ನ್ಯಾಷನಲ್ ರೋಡ್‌ ಸೇಫ್ಟಿ ಎಕ್ಸಲೆನ್ಸ್ ಅವಾರ್ಡ್ಸ್ ಪ್ರದಾನ ಹಾಗೂ ಟ್ರಾನ್ಸ್ಫೋರ್ಟ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಸಾರಿಗೆ ಇಲಾಖೆ ಹಿರಿಯ ಅಽಕಾರಿಗಳು, ಅಸೋಸಿಯೇಷನ್ ಪದಾಽಕಾರಿಗಳು ಪಾಲ್ಗೊಂಡಿದ್ದರು.
ಶಾನಭಾಗ ಅವರು ಚಿತ್ರದುರ್ಗ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ೨೦೨೩ ಆಗಸ್ಟ್ ೮ರಿಂದ ೨೦೨೬ ಮಾರ್ಚ್ ೧೬ರವರೆಗೆ ೧.೬೮ ಕೋಟಿ ರೂ. ತೆರಿಗೆ ವಸೂಲಿಯಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಅವರ ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಆರ್‌ಟಿಒ ಭರತ್ ಎಂ. ಕಾಳಿಸಿಂಗೆ ತಿಳಿಸಿದ್ದಾರೆ.