ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದ ಆಟೋ ಚಾಲಕರು ಎಸಿ ಕೆ.ಜೆ.ಕಾಂತ ರಾಜ್ ಅವರಿಗೆ ಮನವಿ ಸಲ್ಲಿಸಿದರು. ಎಂ. ಕುಮಾರಸ್ವಾಮಿ, ಅಂಜನ್‌ಮೂರ್ತಿ, ಎಚ್. ಗೌಸ್‌ಪೀರ್, ಎಂ. ಮಹಂತೇಶ್ ಇತರರು ಇದ್ದರು. 
ಚಿತ್ರದುರ್ಗ

ದುರ್ಗದಲ್ಲಿ ಆಟೋರಿಕ್ಷಾ ಚಾಲಕರ ಪ್ರತಿಭಟನೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಪ್ರಮುಖ ಮುಖ್ಯಾಂಶಗಳು

  • ಆಟೋ ಪರ್ಮಿಟ್ ವಿತರಣೆ ನಿಲ್ಲಿಸುವುದೂ ಸೇರಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
  • ಚಾಲಕರಿಗೆ ಆಶ್ರಯ ಮನೆ
  • ಆರೋಗ್ಯ ವಿಮೆ
ಚಿತ್ರದುರ್ಗ: ಆಟೋ ಪರ್ಮಿಟ್ ವಿತರಣೆ ನಿಲ್ಲಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋರಿಕ್ಷಾ ಚಾಲಕರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೇಡಿಕೆಗಳನ್ನು ಒಂದು ತಿಂಗಳ ಒಳಗೆ ಈಡೇರಿಸದಿದ್ದರೆ ಜಿಲ್ಲಾಽಕಾರಿ ಕಚೇರಿ ಎದುರು ಅನಿರ್ದಿಷ್ಟಾವಽ ಪ್ರತಿಭಟನೆ ನಡೆಸಲಾ ಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.
ಹೊರಗೆ ಪರ್ಮಿಟ್ ಪಡೆದು ನಗರದಲ್ಲಿ ಸಂಚರಿಸುವ ಆಟೋಗಳನ್ನು ಸೀಜ್ ಮಾಡುವುದು. ಚಾಲಕರಿಗೆ ಆಶ್ರಯ ಮನೆ ಮಂ ಜೂರು ಮಾಡಬೇಕು. ಸರ್ಕಾರದಿಂದಲೇ ಚಾಲಕರಿಗೆ ಅಪಘಾತ ಹಾಗೂ ಅವರ ಕುಟುಂಬ ವರ್ಗದವರಿಗೆ ಆರೋಗ್ಯ ವಿಮೆ, ಚಾಲ ಕರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ, ಹೆಣ್ಣು ಮಕ್ಕಳ ಮದುವೆಗೆ ಸಹಾಯಧನ, ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿಯೊಂದಿಗೆ ಚಾಲಕರನ್ನು ಪುರಸ್ಕರಿಸಬೇಕು.
ಈಗಾಗಲೇ ನಗರದಲ್ಲಿ ನಿರ್ಮಾಣವಾಗಿರುವ ಆಟೋ ನಿಲ್ದಾಣಗಳ ಕಾಮಗಾರಿ ಕಳಪೆಯಾಗಿವೆ. ನಿಲ್ದಾಣಗಳಲ್ಲಿ ಕುಡಿವ ನೀರು, ತುರ್ತು ಚಿಕಿತ್ಸಾ ಪೆಟ್ಟಿಗೆ ಚಾವಣಿ ನಿರ್ಮಿಸಬೇಕು. ಆಟೋಗಳಿಗೆ ಸಾಲ ಕೊಡುವಂಥ ಫೈನಾನ್ಸ್ ಕಂಪನಿಗಳು ಹೆಚ್ಚಿನ ಬಡ್ಡಿ ದರ ವಿಽಸುತ್ತಿ ರುವುದು, ಸೀಜಿಂಗ್ ಏಜನ್ಸಿಯವರು ಚಾಲಕರ ಮೇಲೆ ನಡೆಸುತ್ತಿರುವ ದರ್ಪ, ದೌರ್ಜನ್ಯದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಆಟೋ ಎಲ್‌ಪಿಜಿ ಹಾಗೂ ಸಿಎನ್‌ಜಿ ಮಾರು ತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಉಪ ವಿಭಾಗಾಽಕಾರಿ ಕೆ.ಜೆ. ಕಾಂತರಾಜ್ ಅವರಿಗೆ ಮನವಿ ಸಲ್ಲಿ ಸಿದರು.
ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಽ ಸರ್ಕಲ್, ಮಹಾವೀರ ಸರ್ಕಲ್ ಹಾಗೂ ಒನಕೆ ಓಬವ್ವ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿತು.
ರಾಜ್ಯ ಆಟೋ ಚಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ಕುಮಾರಸ್ವಾಮಿ(ಗರುಡಕೇಸರಿ), ಅಂಜನ್‌ಮೂರ್ತಿ,ಎಚ್. ಗೌಸ್‌ಪೀರ್, ಎಂ.ಮಹಂತೇಶ್, ಜೆ. ಸಾಗರ್, ಫಯಾಜ್‌ಖಾನ್, ವಿನಾಯಕ, ಕುಮಾರ್, ರವಿಚಂದ್ರ, ಎಂ. ಪವನ್ ಕುಮಾರ್, ನಾಗರಾಜ್, ಸುಬಾನ್, ಸಾದಿಕ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.