ಎಸ್.ಆರ್. ಹಿರೇಮಠ್ 
ಚಿತ್ರದುರ್ಗ

ಸುಪ್ರೀಂ ತೀರ್ಪು ಽಕ್ಕರಿಸಿ ಹರಾಜು

ಸಾಮಾಜಿಕ ಹೋರಾಟಗಾರ ಹಿರೇಮಠ್ ಆರೋಪ

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ

ಹೊಸ ಗಣಿಗಾರಿಕೆ ಸಂಬAಧ ಅರಣ್ಯ ನಾಶಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಹರಾಜು ಪ್ರಕ್ರಿಯೆ ಆರಂಭಿಸಲು ಮುಂದಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಆರೋಪಿಸಿದರು.

ಗಣಿಗಾರಿಕೆಗೆ ಸಕ್ರಮವೆಂದು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡಿದರೂ ಅದು ಅಕ್ರಮವೇ. ಕಾನೂನು, ನಿಯಮಬದ್ಧವಾಗಿ ಯಾರೂ ನಡೆಸುತ್ತಿಲ್ಲ. ಹಲವಾರು ಮುಖ್ಯಮಂತ್ರಿಗಳು ಗಣಿಗಾರಿಕೆ ಪರವಾಗಿಯೇ ಇದ್ದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಸರ್ಕಾರ ಖಾಸಗಿ ಕಂಪನಿಗಾಗಿ ಸಂಡೂರಿನ ದೇವದಾರಿ ಅರಣ್ಯ ವ್ಯಾಪ್ತಿಯ ಒಂದು ಸಾವಿರ ಎಕರೆ ಪ್ರದೇಶದ ಒಂದು ಲಕ್ಷ ಮರಗಳನ್ನು, ರಾಮನಮಲೈ, ವಿಶ್ವೇಶ್ವರಯ್ಯ ಉಕ್ಕು ಕಂಪನಿಗೆ ಒಳಪಟ್ಟ ೨೦೦ ಎಕರೆಯಲ್ಲಿ ೨೯ ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಮಾರಸ್ವಾಮಿ ಬೆಟ್ಟದ ೮೮ ಹೆಕ್ಟೇರ್ ದಟ್ಟ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗಾಗಿ ಹರಾಜು ಹಾಕುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳಿದರು.

ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ತುಮಕೂರು ೪ ಜಿಲ್ಲೆಗಳಲ್ಲಿ ನಡೆಯುತ್ತಿರುವ ಅಕ್ರಮ, ಅವೈಜ್ಞಾನಿಕ ಗಣಿಗಾರಿಕೆ, ಪರಿಸರ ನಾಶ, ಸರ್ಕಾರದ ಜನವಿರೋಽ ಕಾಯ್ದೆಗಳು. ಗಣಿಬಾಽತ ಜನರ ಸಂಕಷ್ಟಗಳ ಕುರಿತು ಗಣಿಬಾಽತ ಪರಿಸರ ಮತ್ತು ಜನಬದುಕಿನ ಪುನಶ್ಚೇತನ ಹೋರಾಟ ಸಮಿತಿಯ ಹೋರಾಟ ಮುಂದುವರಿದಿದ್ದು, ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಬೇಸರಿಸಿದರು.

ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ೪ ಜಿಲ್ಲೆಗಳಿಗೂ ಸೇರಿ ವರ್ಷಕ್ಕೆ ಒಟ್ಟು ೨೦ ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆ ಉತ್ಪಾದನಾ ಮಿತಿ ನಿಗದಿಪಡಿಸಲಾಗಿದೆ. ಆದರೆ, ಅದನ್ನು ಮೀರಿ ಉತ್ಪಾದಿಸುತ್ತಿದ್ದು, ಈ ಕುರಿತು ಅ.೩೧ಕ್ಕೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ ಎಂದರು.

ಅದಿರು ಉತ್ಪಾದಿಸುವ ಕಂಪನಿಗಳು ಗ್ರಾಮದೊಳಗಿನ ರಸ್ತೆಗಳ ಮೂಲಕ ಅದಿರು ಸಾಗಾಟ ಮಾಡಬಾರದೆಂಬ ಪರಿಸರ ಅನುಮತಿ (ಇಸಿ) ಷರತ್ತನ್ನು ಸಂಪೂರ್ಣ ಉಲ್ಲಂöಸಲಾಗುತ್ತಿದೆ. ರಸ್ತೆ ಸಾಗಾಣೆ ತಡೆದು ಕಡ್ಡಾಯವಾಗಿ ರೈಲ್ವೆ ಸೈಡಿಂಗ್ ಮತ್ತು ಕನ್ವೇಯರ್ ಬೆಲ್ಟ್ (ಡಿಎಚ್‌ಸಿ) ಬಳಸಬೇಕೆಂದು ೨೦೧೭ರ ಮಾ. ೨೧ರಂದು ಸುಪ್ರೀಂ ಕೋರ್ಟ್ ನೀಡಿದ್ದ ೧೮ ತಿಂಗಳ ಕಾಲಮಿತಿಯ ಆದೇಶ ಯಾವ ಗುತ್ತಿಗೆದಾರೂ ಪಾಲಿಸುತ್ತಿಲ್ಲ ಎಂದು ವಿವರಿಸಿದರು.

ದಶಕಗಳ ಹಿಂದೆ ಜಸ್ಟೀಸ್ ಸಂತೋಷ್ ಹೆಗಡೆ ಹಾಗೂ ಯು.ವಿ. ಸಿಂಗ್ ಅವರ ವರದಿಗಳ ಮೂಲಕ ಬಹಿರಂಗವಾಗಿದ್ದ ಅಕ್ರಮ ಗಣಿಗಾರಿಕೆಯನ್ನೂ ಮೀರಿಸುವಂತೆ ಇಂದಿನ ದಿನಗಳಲ್ಲಿ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಕೇಂದ್ರ ಪರಿಸರ, ಅರಣ್ಯ ಸಚಿವಾಲಯ ೨೦೧೪ರಲ್ಲಿ ಹೊರಡಿಸಿದ್ದ ೧೧ ಪ್ರಮುಖ ಭದ್ರತಾ ಹಾಗೂ ಪರ್ಯಾಯ ಕ್ರಮಗಳ ನಿಯಮಾವಳಿ ಜಾರಿಗೊಳಿಸುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣ ವಿ-Àಲವಾಗಿದೆ ಎಂದು ದೂರಿದರು.

ನ್ಯಾಯಾಂಗ ನಿಂದನೆ ಸಂಬAಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾಣಿಜ್ಯ ಮತ್ತು ಕೈಗಾರಿಕೆ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಾ ಕುಮಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಮೂವರು ಅಽಕಾರಿಗಳ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್) ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅ. ೩೧ರಂದು ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸಮಿತಿ ಸಂಚಾಲಕಿ ಡಿ. ನಾಗಲಕ್ಷಿ÷್ಮÃ ಮಾತನಾಡಿ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ದೇಶದ ಸಂಪತ್ತನ್ನು ಅಕ್ರಮವಾಗಿ ದೋಚುವುದಕ್ಕೆ ಕಡಿವಾಣ ಬೀಳಬೇಕು. ಅದಿರು ತುಂಬಿದ ಲಾರಿಗಳ ಸಾಗಾಟದಿಂದ ಜನರ ಆರೋಗ್ಯ ಹಾಳಾಗುವುದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗುವುದು ನಿಲ್ಲಬೇಕು. ದುರುಪಯೋಗ ಆಗುತ್ತಿರುವ ಕೆಎಂಇಆರ್‌ಸಿ ಅನುದಾನ ಸದ್ಬಳಕೆ ಆಗಬೇಕು. ಆ ನಿಟ್ಟಿನಲ್ಲಿ ಸಮಿತಿ ಪ್ರಯತ್ನಿಸುತ್ತಿದ್ದು, ಹೋರಾಟಕ್ಕೆ ಸಾರ್ವಜನಿಕರೂ ಕೈಜೋಡಿಸಿ. ಸುತ್ತಮುತ್ತಲಿನ ಪರಿಸರ ಉಳಿಸಿ ಎಂದು ಮನವಿ ಮಾಡಿದರು.

ಕೆಆರ್‌ಎಸ್ ಪಕ್ಷದ ಗೌರವಾಧ್ಯಕ್ಷ ರವಿ ಕೃಷ್ಣರೆಡ್ಡಿ, ಶಂಕರಮೂರ್ತಿ, ಪ್ರಸನ್ನ, ಶೈಲೇಂದ್ರ ಪಟೇಲ್, ಯತೀಶ್, ವಕೀಲರಾದ ಶಿವಕುಮಾರ್, ನಟರಾಜ್ ಸೇರಿ ಇತರರಿದ್ದರು.

ಸರ್ಕಾರವೇ ನಡೆಸಬಹುದಲ್ಲ

ಮುಂದಿನ ೬ ತಿಂಗಳಿಗೆ ಸಾಕಾಗುವಷ್ಟು ಅದಿರು ಉತ್ಪಾದಿಸಲಾಗಿದೆ. ಹೀಗಿದ್ದರೂ ತೆಗೆಯುವ ಪ್ರಕ್ರಿಯೆ ನಿಂತಿಲ್ಲ. ಅಕ್ರಮ ಗಣಿಗಾರಿಕೆಯ ಕಳ್ಳರಿಗೆ ದಾರಿ ಮಾಡಿ ಕೊಡುವ ಬದಲು ಸರ್ಕಾರವೇ ನಡೆಸಿದರೆ, ನೈಸರ್ಗಿಕ ಸಂಪತ್ತು, ಆದಾಯ ಕೊನೆಗೆ ಸರ್ಕಾರದ ಪಾಲಾಗಲಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ಏಕೆ ಮುಂದಾಗುತ್ತಿಲ್ಲ? ಎಂದು ಸಮಿತಿ ಪ್ರಶ್ನಿಸಿದೆ.

ಕೋಟ್..

ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ ನೇತೃತ್ವದ ಮೇಲ್ವಿಚಾರಣ ಪ್ರಾಽಕಾರವೂ ೨೦೨೪ರ ಡಿ. ೩ರಂದು ೯ ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಿದೆ. ಅದರಲ್ಲಿ ಗಣಿಬಾಽತ ಪ್ರದೇಶಗಳ ಜನರು ಅನುಭವಿಸುತ್ತಿರುವ ಭೀಕರ ಸಮಸ್ಯೆ ನೈಜವಾಗಿ ಬಿಚ್ಚಿಡಲಾಗಿದೆ. ವಾಯು ಮಾಲಿನ್ಯದ ಪ್ರಮಾಣ ನಿಗದಿತ ಮಿತಿಗಿಂತಲೂ ಶೇ. ೬೦ ಪಟ್ಟು ಹೆಚ್ಚಾಗಿದೆ. ಇದಕ್ಕೆ ಚಿತ್ರದುರ್ಗದ ಭೀಮಸಮುದ್ರ ಪ್ರದೇಶವೂ ಹೊರತಲ್ಲ.

| ಎಸ್.ಆರ್. ಹಿರೇಮಠ್, ಸಾಮಾಜಿಕ ಹೋರಾಟಗಾರ