ವಸತಿ ಸೌಲಭ್ಯಕ್ಕೆ ಆಗ್ರಹಿಸಿ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಮಂಗಳವಾರ ನಗರಸಭೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
- ಸರ್ಕಾರಕ್ಕೆ ವರದಿ ನೀಡಲು ಉದಾಸೀನವೆಂದು ಆರೋಪ
- ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ
- ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ
ಚಿತ್ರದುರ್ಗ: ವಸತಿ ಇಲ್ಲದವರ ಸರ್ವೇ ನಡೆಸಿ, ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಆದೇಶಿಸಿ ವರ್ಷವಾದರೂ ನಗರಸಭೆ ಅಽಕಾರಿಗಳು ಉದಾಸೀನ ಮಾಡುತ್ತಿದ್ದಾರೆಂದು ಆರೋಪಿಸಿ ನಿವೇಶನ ಮತ್ತು ವಸತಿರಹಿತರ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಕಮ್ಯುನಿ¸್ಟï ಪಕ್ಷದ ಕಾರ್ಯಕರ್ತರು ಅಽಕಾರಿಗಳ ವಿರುದ್ಧ ಽಕ್ಕಾರ ಕೂಗಿದರು. ನಗರಸಭೆಗೆ ಅರ್ಜಿಗಳನ್ನು ಸಲ್ಲಿಸಿ ೧ ವರ್ಷವಾಗಿದೆ. ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಒಟಿಪಿ ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು.
ಸಮಿತಿ ಜಿ¯್ಲÁಧ್ಯಕ್ಷ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ೨೦೨೫ರ ಮಾರ್ಚ್ ೨೯ರಂದು ಸಿಎಂ ಭೇಟಿಯಾಗಿ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಲಾಗಿತ್ತು. ಆಗ ಸರ್ವೆ ನಡೆಸಿ, ವರದಿ ನೀಡುವಂತೆ ಸೂಚಿಸಿದ್ದರು. ಈವರೆಗೂ ನಗರಸಭೆ ಅಽಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ತೆರಿಗೆ ಹಣದಲ್ಲಿ ನಗರಸಭೆಯ ಚಟುವಟಿಕೆಗಳು ನಡೆಯುತ್ತಿವೆ. ಕೂಡಲೇ ಜಿ¯್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ರಾಜೀವ್‌ಗಾಂಽ ವಸತಿ ನಿಗಮದ ಸಮೀಕ್ಷಾ ಪಟ್ಟಿಗೆ ಅರ್ಹರನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ನಿವೇಶನಕ್ಕೆ ಅಗತ್ಯ ಸರ್ಕಾರಿ ಭೂಮಿಯನ್ನು ಪ್ರತಿ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಗುರುತಿಸಬೇಕು. ಈಗಾಗಲೇ ಮಂಜೂರಾಗಿ ರುವ ವಸತಿ ಯೋಜನೆಗಳಿಗೆ ಸರ್ಕಾರ ಅನುದಾನ ಮಂಜೂರು ಮಾಡಬೇಕು. ಹಾಲಿ ಇರುವ ನಿವೇಶನದ ವಿಸ್ತೀರ್ಣವನ್ನು ಹೆಚ್ಚಿಸಿ ಅಂಗಳ-ಹಿತ್ತಲು ಇರುವಂತೆ ಕನಿಷ್ಠ ೧ ಸಾವಿರ ಚದರ ಅಡಿ ನಿವೇಶನ ನೀಡಬೇಕು. ವಸತಿ ಯೋಜನೆಯ -Àಲಾನುಭವಿಗಳಿಗೆ ಸರ್ಕಾರದ ಸಹಾಯಧನ ಮೊತ್ತ ಕನಿಷ್ಠ ೫ ಲಕ್ಷ ರೂ.ಗೆ ಹೆಚ್ಚಿಸುವಂತೆ ಕೋರಿದರು.
ಸಮಿತಿ ರಾಜ್ಯಾಧ್ಯಕ್ಷ ಸುಂದರೇಶ್, ಉಪಾಧ್ಯಕ್ಷ ಉಮಾಪತಿ, ಪದಾಽಕಾರಿಗಳಾದ ಡಾ.ಬಿ.ಎಚ್.ಹನುಮಂತಪ್ಪ, ಈ.ಸತ್ಯಕೀರ್ತಿ, ಬಿ.ಬಸವರಾಜಪ್ಪ, ಎಂ.ಬಿ.ಜಯದೇವಮೂರ್ತಿ, ಎಸ್.ಬಾಬು ಸೇರಿ ಹಾಗೂ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.